ಸಿದ್ದಕಟ್ಟೆ ಜನೌಷಧ ಕೇಂದ್ರದ ವತಿಯಿಂದ ಗೂಡುದೀಪ ಸ್ಪರ್ಧೆ; ಸಮಾಜದಲ್ಲಿ ಸಂಘಟಿತರಾಗಲು ಸಹಕಾರಿ: ಪ್ರಭಾಕರ ಪ್ರಭು

0

ವೇಣೂರು: ಸಿದ್ಧಕಟ್ಟೆಯ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೂಡುದೀಪ ಸ್ಪರ್ಧೆ ಜರಗಿತು.
ಕಾರ್ಯಕ್ರಮದಲ್ಲಿ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮಾತನಾಡಿ, ಇಂತಹ ಒಂದು ಆಕರ್ಷಣೀಯ ವಿಶೇಷ ಸ್ಪರ್ಧೆಗೆ ಭಾರೀ ಸ್ಪಂದನೆ ದೊರೆತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಉತ್ಸಾಹ ಮೂಡುವುದರ ಜತೆಗೆ ಸಂಘಟಿತರಾಗುತ್ತೇವೆ ಎಂದರು.

ಗೂಡುದೀಪ ಸ್ಪರ್ಧೆಗೆ ತೀರ್ಪುಗಾರರಾಗಿ ಸಿದ್ಧಕಟ್ಟೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶೀನಪ್ಪ ಎನ್., ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ನಯನಾ, ಗಾಡಿಪಲ್ಕೆಯ ಪದವೀಧರೆ ಕು| ಸಂಜನಾ ಮೋಹನ್ ಅವರು ಸಹಕರಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಜನೌಷಧಿಯಿಂದ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ನೀಡಲಾಯಿತು.

ಶ್ರೀಮತಿ ನಳಿನಿ ಚಂದ್ರಹಾಸ ಸಾಲೆತ್ತೂರು, ಸಂಗಬೆಟ್ಟು ಗ್ರಾ.ಪಂ. ಸದಸ್ಯ ಸುರೇಶ್ ಕುಲಾಲ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವ್ಯವಸ್ಥಾಪಕ ರಕ್ಷಿತ್ ಕುಲಾಲ್, ಅಂಚೆ ಸಿಬ್ಬಂದಿ ಶ್ರೀಮತಿ ವಾಣಿಶ್ರೀ, ರೊ| ಹರೀಶ್ ಕುಲಾಲ್ ಸಿದ್ಧಕಟ್ಟೆ, ನಿವೃತ್ತ ಯೋಧ ಮೋಹನ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಆಯೋಜಕ ಜನೌಷಧಿ ಕೇಂದ್ರದ ಮಾಲಕ ಮನೋಜ್ ಕುಲಾಲ್ ಸ್ವಾಗತಿಸಿದರು. ಹೊನ್ನಯ್ಯ ಕಾಟಿಪಳ್ಳ ನಿರೂಪಿಸಿದರು. ಕು| ಅಕ್ಷತಾ ವಂದಿಸಿದರು.

LEAVE A REPLY

Please enter your comment!
Please enter your name here