HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕನ್ನಡ ಸಾಹಿತ್ಯ ಪರಿಷತ್‌ನ ಪುಸ್ತಕ ಮೇಳ, ಸಾಹಿತ್ಯ ಉತ್ಸವದ ಸಮಾರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಲ್ಚರ್‌ನಿಂದ ಅಗ್ರಿಕಲ್ಚರ್ ಎಂಬ ಪದ ಬಂದಿದೆ. ಅಗ್ರಿಕಲ್ಚರ್ ಜಗತ್ತಿನ ಮೊತ್ತ ಮೊದಲ ಕಲ್ಚರ್ ಆಗಿದೆ. ಆದರೆ ಮೊದಲಿದ್ದ ಕಲ್ಚರ್ ಈಗಿನ ಜನತೆಯಲ್ಲಿ ಕಂಡು ಬರುತ್ತಿಲ್ಲ. ಈಗಿನ ಜನತೆಯ ಆಲೋಚನೆಯು ದುರಾಲೋಚನೆಯಾಗುತ್ತಿದೆ. ಅಲ್ಲದೇ ಈಗಿನ ಜಗತ್ತು ನವ ಮೌಖಿಕತೆಯಾಗಿದ್ದು, ಎಲ್ಲರೂ ಕೂಡಾ ಇಂದು ಅಂತರ್ವಾಹದ ಮೂಲಕ ಮಾತುಗಳನ್ನಾಡುತ್ತಿದ್ದಾರೆ. ಹಿಂದೆ ಎದುರು ಬದುರು ಕುಳಿತುಕೊಂಡು ಮಾತು-ಕತೆ ಆಡುತ್ತಿದ್ದರು. ಆದರೆ ಇಂದು ಮುಖ ಇಲ್ಲದ ನವಕತೆಗಳಾಗಿ ಬಿಟ್ಟಿವೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆದ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆಯ ಅಂಗವಾಗಿ ಜೂ.೩ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮುಕ್ತಾಯ ಭಾಷಣ ಮಾಡಿದರು. ಪುರಾತನ ಕಾಲದಲ್ಲಿ ಗೋಮಟನು ಧ್ಯಾನದಲ್ಲಿ ಮುಳುಗಿರುವಾಗ ಆತನಿಗೆ ಸೊಂಟದ ಕೆಳ ಭಾಗದಲ್ಲಿ ಬಳ್ಳಿ ಬಂದಿರುತ್ತದೆ. ಆದರೆ ಈಗಿನ ಯುವ ಜನತೆಗೆ ಕಿಸೆಯಿಂದ ಬಳ್ಳಿಯು ಕಿವಿಯವರೆಗೆ ಬಂದಿದೆ. ಆಗ ಅವರಿಗೆ ಜಗತ್ತಿನಲ್ಲಿ ಏನು ಆದರೂ ಗೊತ್ತಾಗುವುದಿಲ್ಲ. ಹಾಗಾಗಿ ಈಗ ನವಗೊಮ್ಮಟ ಧ್ಯಾನವು ಬೇಡ, ನಿಜವಾದ ಗೊಮ್ಮಟ ಧ್ಯಾನ ಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಹರಿಕೃಷ್ಣ ಪುಣರೂರು ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿಯೇ ಆಂಗ್ಲ ಮಾಧ್ಯವನ್ನು ಪ್ರಾರಂಭಿಸುವ ಮೂಲಕ ಕನ್ನಡವನ್ನು ಅಳಿಸುಹಾಕುವಲ್ಲಿ ಸರಕಾರವೇ ಆಸಕ್ತಿ ವಹಿಸುತ್ತಿದೆ. ಒಬ್ಬ ಅದ್ಯಾಪಕ ನಿವೃತ್ತರಾದ ಅಲ್ಲಿಗೇ ಬೇರೋಬ್ಬ ಅಧ್ಯಾಪಕರನ್ನು ನೇಮಕಮಾಡುವುದಿಲ್ಲ. ಒಂದು ಶಾಲೆಗೆ ಒಬ್ಬ ಶಿಕ್ಷಕನ್ನು ನೇಮಿಸಿದರೆ ಅವರು ಶಾಲೆಯ ಪ್ರತಿಯೊಂದು ಕೆಲಸ ಕಾರ್ಯವನ್ನು ನಿಭಾಯಿಸುವುದಾದರೂ ಹೇಗೆ. ಆ ಮೂಲಕ ಮಕ್ಕಳ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ವ್ಯಾಪಾರ ಪರವಾಣಿಗೆ ನವೀಕರಣದ ಸಮಯದಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸುವುದು ಕಡ್ಡಾಯಗೊಳಿಸಿದರೆ ಕನ್ನಡ ಉಳಿಸಲು ಅಲ್ಪಟ್ಟಿನ ಸಹಕಾರಿಯಾಗಬಹುದು ಎಂದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ನಮ್ಮ ದೇಶವು ಸಂಸ್ಕೃತಿ ಪ್ರಧಾನವಾದ ದೇಶವಾಗಿದೆ. ಸಂಸ್ಕಾರ ಮತ್ತು ವಿದ್ಯೆಯು ಮನುಷ್ಯನನ್ನು ರೂಪಿಸಿ ಒಳ್ಳೆಯ ದಾರಿ ಕಡೆ ಸಾಗಿಸುತ್ತದೆ. ಆದರೆ ಇಂದು ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸಿಗುತ್ತಿಲ್ಲ. ಯಾವಾಗ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣವು ಸಿಗುತ್ತದೆಯೋ ಆವಾಗ ದೇಶದ ಏಳಿಗೆಯಾಗುತ್ತದೆ. ಅಲ್ಲದೇ ಕನ್ನಡ ಸಾಹಿತ್ಯದ ಕುರಿತು ಇಂದಿನ ಯುವಜನತೆಗೆ ಪ್ರೇರಣೆ ನೀಡಬೇಕಾಗಿದೆ ಎಂದರು.

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ಯುವ ಸಮೂಹವನ್ನು ಸಾಹಿತ್ಯದ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರ ಜ್ಞಾನಗಳಾದ ಮೊಬೈಲ್ ವೆಬ್‌ಸೈಟ್ ಮುಖಾಂತರ ಮಾಹಿತಿಗಳನ್ನು ನೀಡಿ ಸಾಹಿತ್ಯದ ಕಡೆಗೆ ಸೆಳೆಯುವ ಕಾರ್ಯ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಮುಳಿಯ ಜ್ಯುವೆಲ್ಲರ್ಲ್ಸ್‌ನ ಮ್ಹಾಲಕ ಮುಳಿಯ ಶ್ಯಾಂ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ದ್ವಿತೀಯ ಪಿಯುಸಿಯಲ್ಲಿ ಪುತ್ತೂರಿನಿಂದ ಸಾಧನೆಗೈದ ವಿವೇಕಾನಂದ ಪ.ಪೂ ಕಾಲೇಜಿನ ಜಾಗೃತಿ ಜೆ. ನಾಯಕ್, ಫಿಲೋಮಿನಾ ಕಾಲೇಜಿನ ಸ್ವಸ್ತಿಕ್, ಸಾತ್ವಿಕ್ ಹಾಗೂ ಫಾತಿಮತ್‌ಗೆ ಸನ್ಮಾನಿಸಲಾಯಿತು. ಅಲ್ಲದೇ ಕಾರ್ಯಕ್ರಮದ ಯಶಸ್ವಿಗ್ಗೆ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಜಾಗೃತಿ ಜೆ. ನಾಯಕ್ ಪ್ರಾರ್ಥಿಸಿದರು. ಜ್ಯೋತಿ ರಾವ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶ್ ಕೊಡೆಂಕಿರಿ, ಸುಹಾಸ್ ಮರಿಕೆ, ಪ್ರೋ.ಎ.ವಿ ನಾರಾಯಣ, ಪ್ರೋ.ವಿ.ಬಿ ಅರ್ತಿಕಜೆ, ಸಿದ್ದು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿ, ಪರಿಷತ್‌ನ ಸದಸ್ಯೆ ವತ್ಸಲಾ ರಾಜ್ಞಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಿಂದ `ಕನಸು ಕಂಗಳ’ ಎಂಬ ಮಕ್ಕಳ ವಿಜ್ಞಾನ ನಾಟಕ ಪ್ರದರ್ಶನಗೊಂಡಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.