HomePage_Banner
HomePage_Banner
HomePage_Banner
Breaking News

ಬೆಳ್ಳಾರೆ ಮಸೀದಿ ಕಾರ್ಯದರ್ಶಿಗೆ ಹಲ್ಲೆ ಆರೋಪ ಸತ್ಯಕ್ಕೆ ದೂರ : ಘಟನೆಗೂ ಎಸ್.ಡಿ.ಪಿ.ಐ.ಗೂ ಯಾವುದೇ ಸಂಬಂಧವಿಲ್ಲ-ಶಾಫಿ ಬೆಳ್ಳಾರೆ ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಸೀದಿಯ ಕಾರ್ಯದರ್ಶಿ ಆಸ್ಪತ್ರೆಗೆ ದಾಖಲಾಗಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಸ್ಪಷ್ಟೀಕರಣ ನೀಡಿದ್ದಾರೆ.
ಬೆಳ್ಳಾರೆ ಮಸೀದಿಯಲ್ಲಿ ರಂಝಾನ್ ತಿಂಗಳಿನಲ್ಲಿ ಒಂದು ದಿನ ರಾತ್ರಿ ಕಳೆದ 9 ವರ್ಷಗಳಿಂದ ನಾನು ಭಾಷಣ ಮಾಡುತ್ತಾ ಬಂದಿದ್ದು ಅದೇ ರೀತಿ ಈ ವರ್ಷವೂ ಜೂ.2ರಂದು ರಾತ್ರಿ ಜಮಾಅತ್ ಕಮಿಟಿಯ ಅನುಮತಿಯೊಂದಿಗೆ ಭಾಷಣ ಮಾಡಲು ತೀರ್ಮಾನಿಸಲಾಗಿದ್ದು ಈ ಬಗ್ಗೆ ಜಮಾಅತ್ ಕಮಿಟಿಯ ಬಹುತೇಕ ಸದಸ್ಯರ ಒಪ್ಪಿಗೆಯಂತೆ ಭಾಷಣಕ್ಕೆ ಲೆಟರ್‌ಹೆಡ್‌ನಲ್ಲಿ ಲಿಖಿತವಾಗಿಯೇ ಅನುಮತಿ ನೀಡಲಾಗಿತ್ತು. ಅದರಂತೆ ನಾನು ಭಾಷಣ ಮಾಡಲು ನಿಂತಾಗ ಬೆರಳೆಣಿಕೆಯ ಮಂದಿ ಆಕ್ಷೇಪಿಸಿ ಗಲಾಟೆ ಮಾಡಲು ಮುಂದಾದಾಗ ಅವರನ್ನು ಜಮಾಅತಿಗೊಳಪಟ್ಟ ಕೆಲವರು ಗಲಾಟೆ ಮಾಡದೆ ಮಸೀದಿಯಿಂದ ಹೊರ ಹೋಗುವಂತೆ ವಿನಂತಿಸಿದ್ದಾರೆ. ಎಲ್ಲ ವರ್ಷದಂತೆ ಈ ವರ್ಷವೂ ನಾನು ನನ್ನ ಭಾಷಣನ್ನು ಮಾಡಿರುತ್ತೇನೆ. ಪ್ರಸ್ತುತ ಘಟನೆಯಲ್ಲಿ ಪಿಎಫ್‌ಐ ಸಂಘಟನೆಯದ್ದಾಗಲೀ, ಎಸ್‌ಡಿಪಿಐ ಪಕ್ಷದ್ದಾಗಲೀ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ನನ್ನ ಮೇಲೆ ಯಾವುದೇ ದೂರು ಕೂಡಾ ದಾಖಲಾಗಿರುವುದಿಲ್ಲ, ತನಗೆ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಸೀದಿಯ ಕಾರ್ಯದರ್ಶಿಯವರು ಪುತ್ತೂರು ಆಸ್ಪತೆಯಲ್ಲಿ ದಾಖಲಾಗಿರುವುದಕ್ಕೂ ಎಸ್‌ಡಿಪಿಐಗೂ ಯಾವುದೇ ಸಂಭಂಧವಿಲ್ಲ. ಇದೇ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದ್ದು ಈ ಬಗ್ಗೆ ಸತ್ಯಾಂಶ ತಿಳಿಯಬೇಕಾದರೆ ಮಸೀದಿಯ ಅಧ್ಯಕ್ಷರನ್ನು ಬೇಕಾದರೂ ಸಂಪರ್ಕಿಸಬಹುದಾಗಿದೆ ಎಂದು ಶಾಫಿ ಬೆಳ್ಳಾರೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.