HomePage_Banner
HomePage_Banner
HomePage_Banner

ಅಕ್ರಮ ಮರಳುಗಾರಿಕೆ ಆರೋಪ: ವರದಿಗೆ ತೆರೆಳಿದ್ದ ಕಹಳೆ ನ್ಯೂಸ್ ಚಾನೆಲ್‌ನ ವರದಿಗಾರ ಗಣೇಶ್‌ಗೆ ಹಲ್ಲೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅಕ್ರಮ ಮರಳಗಾರಿಕೆಯ ಆರೋಪದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ತೆರಳಿದ್ದ ಚಾನೆಲ್ ವರದಿಗಾರನಿಗೆ ಅಲ್ಲಿನ ಸಿಬಂದಿಗಳ ತಂಡ ಹಲ್ಲೆ ನಡೆಸಿರುವ ಘಟನೆ ಜೂ.3ರಂದು ರಾತ್ರಿ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದ ಕೋರಿಯಾಲ ಹೊಳೆ ಸಮೀಪ ನಡೆದಿದೆ.

ಕಹಳೆ ನ್ಯೂಸ್ ಚಾನೆಲ್‌ನ ವರದಿಗಾರ ಪೆರಾಬೆ ಗ್ರಾಮದ ಇಡಾಲ ಗುಡ್ಡಪ್ಪ ಗೌಡರ ಪುತ್ರ ಗಣೇಶ್(24.ವ) ಹಲ್ಲೆಗೊಳಗಾಗಿದ್ದು ಇಲ್ಲಿ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಹಳೆ ನ್ಯೂಸ್ ಚಾನೆಲ್‌ನ ಕಡಬ ತಾಲೂಕು ವರದಿಗಾರನಾಗಿರುವ ಗಣೇಶ್ ಕೋಡಿಂಬಾಳದ ಕೋರಿಯಾಲದ ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರ ಬಗ್ಗೆ ಖಚಿತ ವಿವರ ಪಡೆದ ಮರಳುಗಾರಿಕೆಯ ವೀಡಿಯೋ ಚಿತ್ರೀಕರಣಕ್ಕೆ ಮಾರುತಿ ಓಮ್ನಿಯಲ್ಲಿ ಹೊಳೆಯ ಸಮೀಪ ತೆರಳಿದ್ದೆವು. ನಾವು ವೀಡಿಯೋ ಚಿತ್ರೀಕರಣ ಮಾಡುವುದನ್ನು ಗಮನಿಸಿದ ಅಲ್ಲಿನ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಗಣೇಶ್ ಹಾಗೂ ಅಜೇಯ್ ಸೇರಿದಂತೆ ಸುಮಾರು 15 ಮಂದಿಯ ತಂಡ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದೆ. ಈ ಸಂದರ್ಭದಲ್ಲಿ ನಮ್ಮ ಜೊತೆ ಬಂದಿದ್ದ ಚಾಲಕ ಶರತ್‌ರವರು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಕ್ಯಾಮರಾ ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡು ಹಾನಿಗೊಳಿಸಿದ್ದಾರೆ ಎಂದು ಗಾಯಾಳು ಗಣೇಶ್ ಆರೋಪಿಸಿದ್ದಾರೆ.

ಕುಮಾರಧಾರ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ಹಿಂದಿನಿಂದಲೂ ನಡೆಯುತ್ತಿದ್ದು ಅದರ ಬಗ್ಗೆ ಈ ಹಿಂದೆ ವರದಿ ಮಾಡಿದ್ದೆ. ಅಲ್ಲದೆ ಸುಬ್ರಹ್ಮಣ್ಯ ರಸ್ತೆ ಕಾಮಗಾರಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದ್ದರೂ ಅವರು ಕಾನೂನು ಬಾಹಿರವಾಗಿ ಮರಳನ್ನು ಬೇರೆ ಕಡೆ ಸಾಗಾಟ ಮಾಡುತ್ತಿದ್ದಾರೆ. ಈ ಹಿಂದೆ ವರದಿ ಮಾಡಿರುವುದಕ್ಕೆ ಅವರು ನನಗೆ ಜೀವ ಬೆದರಿಕೆ ಹಾಕಿದ್ದರು. ಇದರ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು ಅಲ್ಲಿ ಪ್ರಕರಣ ದಾಖಲಾಗಿದೆ ಎಂದು ಗಣೇಶ್ ತಿಳಿಸಿದ್ದಾರೆ. ಡಿವೈಎಸ್‌ಪಿ ಮುರಳೀಧರ, ಕಡಬ ಠಾಣಾ ಎಸ್.ಐ ಪ್ರಕಾಶ್ ದೇವಾಡಿಗ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.