Home_Page_Advt
Home_Page_Advt
Home_Page_Advt

ಪುತ್ತೂರಿನಲ್ಲಿ ಎ.ಸಿ.ಯಾಗಿದ್ದ ಡಾ. ಕೆ.ಅಪ್ಪಯ್ಯ ಮಡಿಕೇರಿಯಲ್ಲಿ ಅಪಘಾತದಲ್ಲಿ ಮೃತ್ಯು

ಪುತ್ತೂರು: ಪುತ್ತೂರು ಉಪವಿಭಾಗದಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮಡಿಕೇರಿ ನಿವಾಸಿ ಡಾ. ಕೆ.ಅಪ್ಪಯ್ಯ ಕೆ.ಎ.ಎಸ್ ಅವರು ಜೂ.4ರಂದು ಮಡಿಕೇರಿ ಕುಶಾಲನಗರದ ತೊರೆನೂರಿನಲ್ಲಿ ಅಪಘಾತಗೊಂಡು ಮೃತಪಟ್ಟಿದ್ದಾರೆ.

ಕುಶಾಲನಗರದ ತೊರೆನೂರಿನಲ್ಲಿ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂರ್‍ನಾಡು ನಿವಾಸಿ ಕರ್‍ನಾಯ ಡಾ.ಕೆ ಅಪ್ಪಯ್ಯ ಅವರು ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಅವರ ಪತ್ನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು ಮೈಸೂರು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಕುಶಾಲನಗರ ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್ ತನಿಖೆ ನಡೆಸುತ್ತಿದ್ದಾರೆ.

ಪುತ್ತೂರಿನಲ್ಲಿ 1 ವರ್ಷ ಎ.ಸಿ.ಯಾಗಿದ್ದರು:
ಡಾ. ಕೆ. ಅಪ್ಪಯ್ಯ ಅವರು 2006 ಜು.27 ರಿಂದ 2007 ಜು.2ರ ತನಕ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಎಡಿಸಿಯಾಗಿ ವರ್ಗಾವಣೆಗೊಂಡಿದ್ದರು. ಈ ನಡುವೆ ಅವರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಎಸ್.ಎಮ್.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಖ್ಯಮಂತ್ರಿ ಕಚೇರಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.