ಕನ್ಯಾಡಿ-II: ” ಹರಿಹರಾನುಗ್ರಹ” ಸಭಾಭವನ ಉದ್ಘಾಟನಾ ಸಮಾರಂಭ

0

 

ಕನ್ಯಾಡಿ || :  ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಕನ್ಯಾಡಿ-II ಇದರ ಆಶ್ರಯದಲ್ಲಿ, ತುಳು ಶಿವಳ್ಳಿ ಸಭಾ ಇದರ ನೇತೃತ್ವದಲ್ಲಿ ರೂ. 1.60 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ ” ಹರಿಹರಾನುಗ್ರಹ” ಇದರ ಉದ್ಘಾಟನಾ ಸಮಾರಂಭವು ,ಧರ್ಮಸ್ಥಳ ಗ್ರಾಮದ ಕನ್ಯಾಡಿ ಯಲ್ಲಿ ಅ.28ರಂದು ಜರುಗಿತು.

ಉದ್ಘಾಟನೆಯನ್ನು ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷರು ಹಾಗೂ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿ, ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ರಣ್ಣರು ವೇದಮೂರ್ತಿ ಹರಿನಾರಾಯಣದಾಸ ರವರು ಧಾರ್ಮಿಕ ಉಪನ್ಯಾಸವನ್ನು ಮಾಡಿದರು.

ವೇದಿಕೆಯಲ್ಲಿ ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಯು.ವಿಜಯರಾಘವ ಪಡ್ವಾವೆಟ್ನಾಯ, ಬೆಂಗಳೂರು ಎ.ಎಮ್.ಎಸ್ ಲಿಮಿಟೆಡ್ ಆಡಳಿತ ನಿರ್ದೇಶಕರು ಪಿ.ರಾಮದಾಸ್ ಮಡಮಣ್ಣಾಯ ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕರು, ಉದ್ಯಮಿ ಶ್ರೀಪತಿ ಭಟ್, ಹಾಗೂ ದ.ಕ ತುಳು ಶಿವಳ್ಳಿ ಸಭಾ ಅಧ್ಯಕ್ಷರು,ಖ್ಯಾತ ದಂತ ವೈದ್ಯರು ಡಾ| ಎಂ.ಎಂ.ದಯಾಕರ್ ಉಪಸ್ಥಿತರಿದ್ದು, ಶುಭಾಸಂಶನೆ ಮಾತುಗಳನ್ನಾಡಿದರು.
ಅಧ್ಯಕ್ಷತೆಯನ್ನು ತುಳು ಶಿವಳ್ಳಿ ಬ್ರಾಹ್ಮಣ ಸಭಾ ದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಹಿಸಿದ್ದರು.

ಈ ಸಂದರ್ಭದಲ್ಲಿ  ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷರು ರಾಜಗೋಪಾಲ ಹೆಬ್ಬಾರ್ ನೆರಿಯ,  ಹರಿಹರಾನುಗ್ರಹ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರು ಶರತ್ ಕೃಷ್ಣ ಪಡುವೆಟ್ನಾಯ, ಶ್ರೀ ಅಯ್ಯಪ್ಪ ಸ್ವಾಮಿ ಸ್ಥಾಪಕ ಅಧ್ಯಕ್ಷರು ಟಿ.ಎನ್ ಸುಬ್ರಹ್ಮಣ್ಯ, ಅಧ್ಯಕ್ಷರು ಹರೀಶ ರಾವ್ ಮುಂಡ್ರುಪ್ಪಾಡಿ, ಯುವ ವಿಪ್ರ ವೇದಿಕೆ ಅಧ್ಯಕ್ಷರು ವೇ|ಮೂ| ದುರ್ಗಾಪ್ರಸಾದ ಕೆರ್ಮಣ್ಣಾಯ, ಉಜಿರೆ ಶ್ರೀ ಜ.ಸ್ವಾ.ಕ್ರೆ.ಕೋ ಬ್ಯಾಂಕ್ ಅಧ್ಯಕ್ಷರು ಗಂಗಾಧರ ರಾವ್ ಕೆವುಡೇಲು, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾದ ಪ್ರಧಾನ ಕಾರ್ಯದರ್ಶಿ ರಾಜ ಪ್ರಸಾದ ಪೋಳ್ನಾಯ ಮಹಿಳಾ ಘಟಕದ ಕಾರ್ಯದರ್ಶಿ ಗಾಯತ್ರಿ ಶ್ರೀಧರ್ ಕೆ.ವಿ, ಅಯ್ಯಪ್ಪ ಸ್ವಾಮಿ ಮಂದಿರದ ಕಾರ್ಯದರ್ಶಿ ಪರಾರಿ ವೆಂಕಟ್ರಮಣ ಹೆಬ್ಬಾರ್, ಸಾಂತೂರು ಶ್ರೀನಿವಾಸ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ  ಶ್ರೀ ತುಳಸೀ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.

ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷರು ಹರೀಶ್ ರಾವ್ ಮುಂಡ್ರುಪ್ಪಾಡಿ ಇವರು ಅಯ್ಯಪ್ಪ ಸ್ವಾಮಿ ಮಂದಿರದ ಬಗ್ಗೆ ತಿಳಿಸಿದರು.

ಗೌರವಾರ್ಪಣೆ:

ಮಾರ್ಗಕ್ಕೆ ಅವಕಾಶ ಮಾಡಿಕೊಟ್ಟ ಸಂಪತ್ ರತ್ನರಾವ್, ಇಂಜಿನಿಯರ್ ಮತ್ತು ಭರತ್ ಇವರಿಗೆ ಗೌರವಾರ್ಪಣೆಯನ್ನು ಮಾಡಲಾಯಿತು.

ಬೆಳ್ತಂಗಡಿ ತುಳು ಶಿವಳ್ಳಿ ಮಹಿಳಾ ಘಟಕ ಅಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಮಹಿಳಾ ಘಟಕದ ಸಾಧನೆ ಬಗ್ಗೆ ತಿಳಿಸಿದರು. ಉಜಿರೆ ಶ್ರೀ ಜನಾರ್ಧನ ಸ್ವಾಮಿ ಕ್ರೆಡಿಟ್ ಕೋ, ಆಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು ಬ್ಯಾಂಕಿನ ಸಾಧನೆ ಬಗ್ಗೆ ವಿವರಿಸಿದರು.

ಕು| ಸುಪ್ರೀತಾ ಕೋರ್ನಾಯ ಪ್ರಾರ್ಥನೆಯನ್ನು ಮಾಡಿದರು. ಹರಿಹರಾನುಗ್ರಹ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರು ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು, ಬೆಳ್ತಂಗಡಿ ಯುವ ವಿಪ್ರವೇದಿಕೆ ಅಧ್ಯಕ್ಷರು ವೇದಮೂರ್ತಿ ಶ್ರೀ ದುರ್ಗಾಪ್ರಸಾದ ಕೆರ್ಮುಣ್ಣಾಯ ಧನ್ಯವಾದ ಸಮರ್ಪಿಸಿದರು.  ಕಟ್ಟದ ನಿರ್ಮಾಣ ಸಮಿತಿ ಜೊತೆ ಕಾರ್ಯದರ್ಶಿ ಮುರಳಿ ಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here