ತಣ್ಣೀರುಪಂತ ಅಳಿಕೆಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಅಡಿಕೆ, ಬಟ್ಟೆಬರೆ ಸೇರಿದಂತೆ ರೂ.12ಲಕ್ಷ ಮೌಲ್ಯದ ಸೋತ್ತುಗಳು ನಾಶ

0

ತಣ್ಣೀರುಪಂತ: ಇಲ್ಲಿಯ ಅಳಿಕೆ ಎಂಬಲ್ಲಿಯ ನಿವಾಸಿ ಭವಾನಿ ಎಂಬವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಇದ್ದ ಅಡಿಕೆ , ಬಟ್ಟೆಬರೆ, ಸೋತ್ತುಗಳು ಸೇರಿದಂತೆ ಇತರ ವಸ್ತುಗಳು ಸುಟ್ಟು ಹೋಗಿ ಸುಮಾರು 12 ಲಕ್ಷ ರೂಪಾಯಿ ನಷ್ಟ ಉಂಟಾದ ಘಟನೆ ಅ.27ರಂದು ರಾತ್ರಿ ನಡೆದಿದೆ.

‌ರಾತ್ರಿ ಮನೆಯವರು ತಮ್ಮ ಮನೆ ಹತ್ತಿರದ ಸಂಬಂಧಿಕರ ಮನೆಯ ಕಾಯ೯ಕ್ರಮಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿರುವ ಸಮಯ ಹೆಂಚಿನ ಮನೆಯ ಮೇಲ್ಛಾವಣಿಗೆ ಬೆಂಕಿ ಹಿಡಿದು ಉರಿಯುತ್ತಿರುವುದು ಕಂಡು ಬಂದಿತ್ತು. ಮನೆಯವರು ಹಾಗೂ ಸ್ಥಳೀಯರು ಸೇರಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ವೆನ್ನಲಾಗಿದೆ. ಸುಮಾರು 6ಲಕ್ಷದಷ್ಟು‌ ಅಡಿಕೆ ಮನೆಯಲ್ಲಿ ಇತ್ತೇನ್ನಲಾಗಿದೆ. ಅಡಿಕೆ, ಬಟ್ಟೆಬರೆ,ಚಿನ್ನಾಭರಣ, ನಗದು ಸೇರಿದಂತೆ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿದೆ ಎಂದು ತಣ್ಣೀರುಪಂತ ಗ್ರಾಂ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಇವರು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಈ ಘಟನೆ ನಡೆದಿರಬಹುದೆಂದು ಸಂಶಯಿಸಲಾಗಿದೆ. ಬೆಂಕಿಯನ್ನು ಸ್ಥಳೀಯರು ಸೇರಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

LEAVE A REPLY

Please enter your comment!
Please enter your name here