Home_Page_Advt
Home_Page_Advt
Home_Page_Advt

ನಿಮ್ಮ ಫಸಲಿಗಾಗಿ ಕೃಷಿ ಧನ ಸಹಾಯ – ಬ್ಯಾಂಕ್‌ಗಳಿಂದ ರೈತರಿಗೆ ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನದಂತೆ ಕೃಷಿಕರು ತಮ್ಮ ಫಸಲಿಗಾಗಿ ಕೃಷಿ ಧನ ಸಹಾಯಕ್ಕಾಗಿ ಬ್ಯಾಂಕ್‌ಗಳೊಂದಿಗೆ ಕೈ ಜೋಡಿಸಬೇಕು ಮತ್ತು ಅನೇಕ ವಿಧದ ಧನ ಸಹಾಯ ಬ್ಯಾಂಕ್‌ಗಳು ನೀಡುತ್ತವೆ ಎಂಬ ಕುರಿತು ಪುತ್ತೂರಿನ ಬ್ಯಾಂಕ್‌ಗಳಿಂದ ಮಾಹಿತಿ ಕಾರ್ಯಗಾರ ಜೂ.4ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಕಚೇರಿ ಮಹಾಮ್ಮಾಯಿ ದೇವಸ್ಥಾನ ರಸ್ತೆಯ ಯಸ್.ಕೆ.ಎ.ಸಿ.ಎಮ್.ಎಸ್ ಕಟ್ಟಡದಲ್ಲಿ ನಡೆಯಿತು.

ಲೀಡ್ ಬ್ಯಾಂಕ್‌ನ ಮೆನೇಜರ್ ಪ್ರವೀಣ್, ಸಿಂಡಿಕೇಟ್ ಬ್ಯಾಂಕ್ ಮಂಗಳೂರಿನ ಕುಮಾರ್, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತೆಯ ಪುತ್ತೂರು ವಲಯ ಸಂಯೋಜಕರಾದ ರಮೇಶ್ ಮತ್ತು ಮೇಘನಾ ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ನೀತು ಕೃಷಿ ಸಾಲಗಳ ಕುರಿತು ಹಲವು ರೀತಿಯ ಮಾಹಿತಿಗಳನ್ನು ನೀಡಿದರು.

ರೈತರಿಗೆ ಬಂದ ಸಬ್ಸಿಡಿ ಲಾಕ್:
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ರೈತರ ಆರ್ಥಿಕ ಬೆಳವಣಿಗೆಗೆ ಮುದ್ರಾಯೋಜನೆ, ಕೃಷಿಗಳ ಸಾಲಗಳ ವಿವರ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಲು ಬ್ಯಾಂಕ್‌ನವರು ನಮ್ಮ ಜೊತೆ ಇದ್ದಾರೆ. ಆದರೆ ಈ ಮೊದಲು ರೈತರ ಸಾಲ ಪಡೆದ ಬಳಿಕ ಬ್ಯಾಂಕ್‌ಗೆ ಬಂದಿರುವ ಸಬ್ಸಿಡಿಯನ್ನು ಆಗಿನ ಮೆನೇಜರ್‌ಗಳು ಲಾಕ್ ಮಾಡುತ್ತಿದ್ದರು. ಪ್ರಸ್ತುತ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವ ಉದ್ದೇಶದಿಂದ ಬ್ಯಾಂಕ್‌ನ ಪೀಲ್ಡ್ ಅಧಿಕಾರಿಗಳು ನಮ್ಮೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.