ಮಹಿಳೆಯರೇ ಕಾರ್ಯನಿರ್ವಹಿಸುತ್ತಿರುವ ಸಿಡಿಪಿಒ ಇಲಾಖೆಗೆ ಇನ್ನೂ ಸ್ವಂತ ಕಟ್ಟಡವಿಲ್ಲ: ನಿವೇಶನ ಮಂಜೂರಾದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಸಿಕ್ಕಿಲ್ಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೆಣ್ಣು, ಭೂಮಿಯನ್ನು ತಾಯಿ ಎಂದು ಪೂಜಿಸುವ ನಮ್ಮ ದೇಶದಲ್ಲಿ 21ನೇ ಶತಮಾನದಲ್ಲೂ ಮಹಿಳಾ ಸಬಲ ಕರಣದ ಬಗ್ಗೆ ಮಾತನಾಡಬೇಕಿರುವುದು ದುರ್ದೈವದ ಸಂಗತಿ. ಯಾಕೆಂದರೆ ಕಳೆದ 35 ವರ್ಷ ಪುತ್ತೂರಿನಲ್ಲಿ ಮಹಿಳೆಯರೇ ಅಧಿಕಾರಿಗಳಾಗಿ ಮತ್ತು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಇನ್ನೂ ಸ್ವಂತ ಕಟ್ಟಡವಿಲ್ಲ. ಇತ್ತೀಚೆಗಷ್ಟೇ ಸರಕಾರ ಇಲಾಖೆಗೆ 8.5 ಸೆಂಟ್ಸ್ ನಿವೇಶನ ಮುಂಜೂರು ಮಾಡಿದೆ. ಆದರೆ ಕಟ್ಟಡ ನಿರ್ಮಾಣಕ್ಕಾಗಿ ಇನ್ನಷ್ಟೇ ಅನುದಾನ ಮಂಜೂರು ಆಗಬೇಕಿದೆ. ಅನುದಾನ ಬಿಡುಗಡೆಗೊಂಡು ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ತನಕ ಇಲಾಖೆಗೆ ಸ್ತ್ರೀ ಶಕ್ತಿ ಭವನದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಪುತ್ತೂರು ತಾಲೂಕಿಗೆ ಸಂಬಂಧಿಸಿ 370 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿ ಕೇಂದ್ರಗಳ ನಿರ್ವಹಣಾ ಜವಾಬ್ದಾರಿಯ ಜತೆಗೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯ ಮಹತ್ತರ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗೇ ಇಲ್ಲಿ ಸ್ವಂತ ಕಟ್ಟಡ-ಕಚೇರಿ ಹೊಂದುವ ಯೋಗ ಈ ತನಕ ಕೂಡಿ ಬಂದಿಲ್ಲ ಎನ್ನುವುದು ಮಹಿಳೆಯರ ಪಾಲಿಗೆ ಬೇಸರದ ಸಂಗತಿ.

ಇಲಾಖಾ ಮಾಹಿತಿಯ ಪ್ರಕಾರ 1983ರಲ್ಲಿ ಪುತ್ತೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾರಂಭ ಮಾಡಿತ್ತು. ತಾ.ಪಂ ಕಚೇರಿಯ ಸಮೀಪ ತಾ.ಪಂಗೆ ಸಂಬಂಧಿಸಿ ಹಳೆಯ ಕಟ್ಟಡವೊಂದರಲ್ಲಿ ಬಾಡಿಗೆ ನೆಲೆಯಲ್ಲಿ 2015ರ ತನಕ ಇಲಾಖೆ ಕಾರ್ಯಾಚರಿಸಿತ್ತು. ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದ ಹಾಗೂ ಕಿಟಿಕಿ ಬಾಗಿಲುಗಳು ಸಮರ್ಪಕವಾಗಿಲ್ಲದೆ ಇಲಿ,ಹೆಗ್ಗಣಗಳ ತಾಣವಾಗಿದ್ದ ಕಟ್ಟಡದಲ್ಲಿ ಮಳೆಗಾಲದಲ್ಲಿ ಸೋರುವಿಕೆ ಸಹಿಸಿಕೊಂಡು ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಂತ ಕಟ್ಟಡ ಕಲ್ಪಸಿಕೊಡಿ ಎಂದು ಮಾಡಿಕೊಂಡ ಮನವಿಗಳಿಗೆ ಲೆಕ್ಕವಿಲ್ಲ. ಆದರೂ ಬಹಳಷ್ಟು ವರ್ಷಗಳಲ್ಲಿ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ 2015ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಧೀನದಲ್ಲೇ ಇರುವ ದರ್ಬೆಯಲ್ಲಿನ ಸ್ತ್ರಿ ಶಕ್ತಿ ಭವನಕ್ಕೆ ಸ್ಥಳಾಂತರಿಸಲಾಯಿತು.

ದರ್ಬೆ ಸಿಟಿಒನಲ್ಲಿ ನಿವೇಶನ ಮಂಜೂರು:
ಹಲವು ಕಾಲದ ಮನವಿಗೆ ಪ್ರಸ್ತುತ ಇತ್ತೀಚೆಗೆ ಸ್ಪಂದನೆ ಸಿಕ್ಕಿದೆ. ದರ್ಬೆ ಸಿಟಿಒ ಗುಡ್ಡೆಯಲ್ಲಿರುವ ಕೊರಗ ಸಮುದಾಯ ಭವನದ ಸಮೀಪ ೮.೫ ಸೆಂಟ್ಸ್ ನಿವೇಶನ ಮಂಜೂರಾಗಿದೆ. ನಿವೇಶನ ಪಹಣಿ ಪತ್ರವೂ ಇಲಾಖೆಯ ಹೆಸರಿನಲ್ಲಿ ಆಗಿದೆ. ನಿವೇಶನ ಲಭಿಸಿದ ಬೆನ್ನಲ್ಲೇ ಆಗಿನ ಇಲಾಖೆಯ ಅಧಿಕಾರಿ ಶಾಂತಿ ಹೆಗ್ಡೆಯವರು ಕಟ್ಟಡಕ್ಕೆ ಅನುದಾನ ಒಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗುವ ತನಕ ಸ್ತ್ರೀ ಶಕ್ತಿ ಭವನವೇ ಗತಿಯಾಗಿದೆ. ಇದರ ಜೊತೆ ಹಿಂದೆ ಕಾರ್ಯಾಚರಿಸುತ್ತಿದ್ದ ತಾ.ಪಂ ಕಟ್ಟಡವಿದ್ದ ಸ್ಥಳದಲ್ಲಿ ಹೊಸ ಕಟ್ಡಡ ನಿರ್ಮಾಣಗೊಂಡಿದ್ದು, ಅಲ್ಲಿಯೂ ಬಾಡಿಗೆ ನೆಲೆಯಲ್ಲಿ ಇಲಾಖೆಗೆ ಸ್ಥಳಾವಕಾಶ ನೀಡಬೇಕೆಂದು ತಾ.ಪಂ ಗೆ ಮನವಿ ಮಾಡಲಾಗಿದೆ.

ಮೂರು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ:
ಇಲಾಖಾ ವ್ಯಾಪ್ತಿಯಲ್ಲಿರುವ ೩೭೦ ಅಂಗನವಾಡಿ ಕೇಂದ್ರಗಳ ಪೈಕಿ ಕೆಯ್ಯೂರು ಗ್ರಾಮದ ಪಂಜಿಗುಡ್ಡೆ, ಉಪ್ಪಿನಂಗಡಿಯ ಮಠ ಹಾಗೂ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ವಾಲಿಯಾ ಎಂಬಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಉಪ್ಪಿನಂಗಡಿಯ ಮಠದಲ್ಲಿದ್ದ ಅಂಗನವಾಡಿ ರಸ್ತೆ ಮಾರ್ಜಿನ್‌ನಲ್ಲಿದ್ದ ಕಾರಣ ಈಗ ನಿವೇಶನ ರಹಿತವಾಗಿದೆ. ಪಂಜಿಗುಡ್ಡೆ ಅಂಗನವಾಡಿಗೆ ೩ಸೆಂಟ್ಸ್ ನಿವೇಶನ ಮಂಜೂರುಗೊಂಡಿದ್ದರೂ ಕಟ್ಟಡ ಇನ್ನಷ್ಟೇ ಆಗಬೇಕಿದೆ.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಳೆದ ೩ ತಿಂಗಳಿನಿಂದ ಸಿಡಿಪಿಒ ಹುದ್ದೆಯೂ ಖಾಲಿ ಇದ್ದು, ಭಾರತಿ.ಜೆ.ಕೆ ಅವರು ಪ್ರಭಾರ ಸಿಡಿಪಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೧೬ಮಂದಿ ಮೇಲ್ವಿಚಾರಕ ಹುದ್ದೆಗಳಿದ್ದರೂ ಇಲ್ಲಿರುವುದು ಈಗ ೧೨ ಮಂದಿ. ಪ್ರಥಮ ದರ್ಜೆ ಸಹಾಯಕರ ೬ ಹುದ್ದೆಗಳಿದ್ದರೂ ಸದ್ಯ ಯಾರೂ ಇಲ್ಲ. ೪ ಮಂದಿ ಕಂಪ್ಯೂಟರ್ ಆಪರೇಟರ್ಸ್ ಹಾಗೂ ಒಬ್ಬರು ವಾಹನ ಚಾಲಕರು ಇದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ವಂತ ಕಟ್ಟಡ ಸಮಸ್ಯೆಯ ಜತೆಗೆ ಸಿಬ್ಬಂದಿ ಸಮಸ್ಯೆಯನ್ನೂ ಎದುರಿಸುತ್ತಿದೆ. ಮೂರು ಕಡೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದಿದ್ದರೂ ಇರುವ ಅಂಗನವಾಡಿ ಕೆಂದ್ರಗಳು ಸುಸ್ಥಿತಿಯಲ್ಲಿವೆ.

ಕಚೇರಿ ಕೇಂದ್ರ ಸ್ಥಳದಲ್ಲಿದ್ದರೆ ಹೆಚ್ಚು ಪ್ರಯೋಜನ
`ನಗರದ ಹೊರವಲಯದಲ್ಲಿ ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಇರುವುದರಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಹಾಗೂ ಕಚೇರಿ ಸೌಲಭ್ಯಗಳಿಗಾಗಿ ಬರುವವರಿಗೆ ಹೋಗಿ ಬರಲು ಬಹಳಷ್ಟು ಸಮಸ್ಯೆ ಆಗುತ್ತಿದೆ. ಪ್ರಸ್ತುತ ಲಭಿಸಿದ ನಿವೇಶನವೂ ಕಚೇರಿಗೆ ಅಗತ್ಯ ಕೆಲಸಗಳಿಗೆ ಸ್ವಲ್ಪ ದೂರವಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅದೇ ಸಮಸ್ಯೆ ಮುಂದುವರಿಯುತ್ತದೆ. ಕೇಂದ್ರ ಸ್ಥಳದಲ್ಲಿಯೇ ಕಚೇರಿ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ ನಿವೃತ್ತ ಸಿಡಿಪಿಒ ಶಾಂತಿ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುದಾನ ಮಂಜೂರಾತಿಗೆ ಪ್ರಯತ್ನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ವಂತ ನಿವೇಶನ ಇದೆ. ಇಲಾಖೆಯ ನಿವೇಶನದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರಾತಿಗೆ ಮಾತುಕತೆ ನಡೆಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದೆ ತಾ.ಪಂಗೆ ಸಂಬಂಧಿಸಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಪೂರ್ಣಗೊಂಡ ತಕ್ಷಣ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಆಗ ಕೇಂದ್ರ ಸ್ಥಳದಲ್ಲಿಯೇ ಕಚೇರಿಯ ವ್ಯವಸ್ಥೆ ಆಗುತ್ತದೆ. ಇದರ ಜೊತೆಯಲ್ಲಿ ಅನುದಾನ ಮಂಜೂರಾತಿಗೂ ಪ್ರಯತ್ನ ನಡೆಸಲಾಗುವುದು – ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.