Home_Page_Advt
Home_Page_Advt
Home_Page_Advt

ಪುತ್ತೂರಿನಲ್ಲಿ ಮನರಂಜಿಸಿದ ವೈಬ್ ಇಂಡಿಯಾ ಆಲ್ ಇಂಡಿಯಾ ಡ್ಯಾನ್ಸ್ ಚಾಂಪಿಯನ್‌ಶಿಪ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ರಾಜ್ಯದ ಪ್ರಖ್ಯಾತ ತಂಡ ಪುತ್ತೂರಿನ ಹೆಮ್ಮೆಯ ಡಿಝೋನ್ ಡ್ಯಾನ್ಸ್ ಅಕಾಡೆಮಿಯ ವತಿಯಿಂದ ನಡೆದಂತಹ ವೈಬ್ ಇಂಡಿಯಾ ರಾಷ್ಟ್ರಮಟ್ಟದ ಗ್ರೂಪ್‌ಡ್ಯಾನ್ಸ್ ಚಾಂಪಿಯನ್‌ಶಿಪ್‌ನ ಗ್ರ್ಯಾಂಡ್‌ಫಿನಾಲೆ ಮೇ 25ರಂದು ಪರ್ಪುಂಜದ ಮದಕಮ್ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಡಾ|| ಅನಿಲ್ ಬೈಪಾಡಿತ್ತಾಯರವರು ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ ಕಲಿಕೆಯ ಜೊತೆಯಲ್ಲಿ ಕಲೆಯು ಕೂಡ ಅವಶ್ಯ ಎಂದರು. ಹಾಗೆಯೇ ಗೀತಾ ಕನ್‌ಸ್ಟ್ರಕ್ಷನ್ ನಿತೇಶ್ ಪೂಜಾರಿಯವರು ಮಾತನಾಡಿ ಪುತ್ತೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದರು. ತದನಂತರ ಸಂಸ್ಥೆಯ ಅಧ್ಯಕ್ಷರಾದ ರಾಮಕೃಷ್ಣಭಟ್‌ರವರು ಮಾತನಾಡಿ ಕರ್ನಾಟಕದ ಪ್ರತಿಭಾವಂತ ಬಡ ನೃತ್ಯತಂಡಗಳನ್ನು ಭಾರತಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದು, ಮುಂದಿನ ವರ್ಷ ಸೀಸನ್2 ನಡೆಯಲಿದೆ ಹಾಗೂ ಅದರ ಮುಂದಿನ ಉದ್ದೇಶಗಳ ಬಗ್ಗೆ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಸಾದ್ ರೈಯವರು ಸಭೆಯನ್ನು ಉದ್ದೇಶಿಸಿ, ಸಂಸ್ಥೆಯ ಏಳಿಗೆಗಾಗಿ ತಂಡವು ಬಹಳಷ್ಟು ಶ್ರಮಿಸಿದ್ದು, ಆಗಸ್ಟ್‌ನಲ್ಲಿ ಅಮೇರಿಕದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಎಲ್ಲರಲ್ಲಿ ಸಂತಸ ತಂದಿದೆ ಎಂದರು. ಕಾರ್‍ಯಕ್ರಮದ ಪ್ರಸ್ತಾವಿಕ ಭಾಷಣವನ್ನು ತಂಡದ ಸದಸ್ಯೆ ಅನಿತಾರವರು ನೆರವೇರಿಸಿ ಮತ್ತೋರ್ವ ಸದಸ್ಯೆ ಮೆಲೀಷಾರವರು ಅತಿಥಿಗಳನ್ನು ವಂದಿಸಿದರು.

ಸಂಸ್ಥೆಯ ನೃತ್ಯ ನಿರ್ದೇಶಕ ದೀಕ್ಷಿತ್‌ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ನಿರೂಪಕರಾಗಿ ಅಂತರಾಷ್ಟ್ರೀಯ ಖ್ಯಾತಿಯ ಸಾಹಿಲ್ ಜಾಹಿರ್, ತೀರ್ಪುಗಾರರಾಗಿ ಡ್ಯಾನ್ಸ್ ಪ್ಲಸ್ ಖ್ಯಾತಿಯ ಕಾರ್ತಿಕ್‌ರಾಜ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಕಿಶೋರ್ ಅಮನ್ ಶೆಟ್ಟಿ ಹಾಗೂ ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್‌ನ ಮಾಜಿ ಅಧ್ಯಕ್ಷರಾದ ರಾಜೇಶ್ ಕಣ್ಣೂರು ಉಪಸ್ಥಿತರಿದ್ದರು.

ಸ್ಪರ್ಧೆಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳಿಂದ ತಂಡಗಳು ಆಗಮಿಸಿದ್ದು ಪ್ರಥಮ ಬಹುಮಾನ ಯುಎಫ್‌ಡಿಸಿ ಮುಂಬೈ, ದ್ವಿತೀಯ ಕ್ರಿಯೇಟಿವ್ ಡ್ಯಾನ್ಸ್ ಕ್ರೀವ್ ಮುಂಬಯಿ, ತೃತೀಯ ಹೈ ಪ್ಲೈಯರ್ಸ್ 33, ಉಡುಪಿ ಕರ್ನಾಟಕ ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.