ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರಾಗಿ ಬಿ ಸೋಮಶೇಖರ ಶೆಟ್ಟಿ ಆಯ್ಕೆ

0

 

ಉಜಿರೆ: ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರಾಗಿ B. ಸೋಮ ಶೇಖರ ಶೆಟ್ಟಿ ಆಯ್ಕೆ ಯಾಗಿದ್ದಾರೆ. ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆಯ 13 ನೆಯ ರಾಜ್ಯ ಸಮಾವೇಶ ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದಾಗ ವೇದಿಕೆಯ ಗೌರವ ಅಧ್ಯಕ್ಷರಾದ  ಡಿ.ಸುರೇಂದ್ರ ಕುಮಾರ್ ಧರ್ಮಸ್ಥಳ ಇವರು ಆದೇಶ ಪತ್ರ ನೀಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ರಾಗಿ ನಿವೃತ್ತಿಯಾಗಿದ್ದು, ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರ್ ರಾಷ್ಟ್ರೀಯ ಸಂಸ್ಥೆ ಜೇಸಿ ಯ ಪೂರ್ವಧ್ಯಾಕ್ಷರಾಗಿ, ಭಾರತೀಯ ಜೈನ್ ಮಿಲನ್ ವಲಯ ನಿರ್ದೇಶಕರಾಗಿ, ಸ್ವಾಸ್ಥ್ಯ ಸಂಕಲ್ಪ, ಜೀವನ ಮೌಲ್ಯ ಗಳ ವಿಶೇಷ ಉಪನ್ಯಾಸಕರಾಗಿ, ಸಮೂಹ ಸಂಸ್ಥೆಯ ಕೋಶಾಧಿಕಾರಿಯಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ,ಉಜಿರೆ ಯಲ್ಲಿ ವಿಧ್ಯಾರ್ಥಿ ಕ್ಷೇಮ ಪಾಲನಾ ಮುಖ್ಯ ಅಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿ. ಪ್ರಮೋದ್ ಕುಮಾರ್ ಉಜಿರೆ ಇವರು ಪ್ರಧಾನ ಕಾರ್ಯದರ್ಶಿ ಯಾಗಿ,  ನವೀನ್ ಚಂದ್ ಬಲ್ಲಾಳ್ ಉಪಾಧ್ಯಕ್ಷರಾಗಿ,  ಮಹಾವೀರ ಮೂಡು ಕೋಡಿ  ಜೊತೆ ಕಾರ್ಯದರ್ಶಿಯಾಗಿ  ಯನ್. ಶಾಂತಿರಾಜ್ ಜೈನ್ , ಪಡಂಗಡಿ  ಖಜಾಂಜಿ ಯಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here