ರೋಟರಿ ಕ್ಲಬ್ ಮಡಂತ್ಯಾರಿನ ಜಿಲ್ಲಾ ಗವರ್ನರ್ ಮಡಂತ್ಯಾರು ಮಹಿಳಾ ಮಂಡಲ ನಡೆಸುತ್ತಿರುವ ಅಂಗನವಾಡಿಗೆ ಅಧಿಕೃತ ಭೇಟಿ

0

ಮಡಂತ್ಯಾರು:  ರೋಟರಿ ಕ್ಲಬ್ ಮಡಂತ್ಯಾರಿನ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಅ. 22 ರಂದು ಜರುಗಿತು.

ಮಡಂತ್ಯಾರು ಮಹಿಳಾ ಮಂಡಲ ನಡೆಸುತ್ತಿರುವ ಅಂಗನವಾಡಿಗೆ ಸುಮಾರು 60 ಸಾವಿರ ಮೊತ್ತದ ನೂತನ ಬಾಲವನ ನಿರ್ಮಿಸಿ ಕೊಟ್ಟು ಅದನ್ನು ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ ರವರು ತನ್ನ ಪತ್ನಿ ವಾಣಿ ಕಾರಂತ ರವರೊಂದಿಗೆ ಸೇರಿ ಉದ್ಘಾಟಿಸಿ ಮಕ್ಕಳಿಗೆ ಹಾಗೂ ಮಹಿಳಾ ಮಂಡಲ ಸದಸ್ಯರಿಗೆ ಶುಭಕೋರಿದರು.


ಕ್ಲಬ್ ಅಸ್ಸೆಂಬ್ಳಿ ಹಾಗೂ ಪಬ್ಲಿಕ್ ಕಾರ್ಯಕ್ರಮದಲ್ಲಿ 2 ಶಾಲೆಗಳಿಗೆ ಆಸನದ ವ್ಯವಸ್ಥೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಟೀಚಿಂಗ್ ಸ್ಟಾಂಡ್, ವಿಕಲಚೇತನ ಹೆಣ್ಣುಮಗಳಿಗೆ ಮಲಗುವ ಮಂಚದ ಕೊಡುಗೆಗಳಿಗೆ ಗವರ್ನರ್ ಸಾಕ್ಷಿಯಾದರು.

ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಡಂತ್ಯಾರು ಕ್ಲಬಿನ ಸಾಧನೆಯನ್ನು ಗವರ್ನರ್ ಶ್ಲಾಘಿಸಿದರು. ಅಸಿಸ್ಟಂಟ್ ಗವರ್ನರ್ ಮೇಜರ್ ಡೋನರ್ ಮೇಜರ್ ಜನರಲ್ ಎಂ.ವಿ ಭಟ್ ಹಾಗೂ ಝೋನಲ್ ಲೆಫ್ಟಿನೆಂಟ್ ಶರತ್ ಕೃಷ್ಣ ಪಡುವೆಟ್ನಾಯಾ , ಜಿಲ್ಲಾ ಕಾರ್ಯದರ್ಶಿಯಾದ ರೋ. ಕೆ. ನಾರಾಯಣ ಹೆಗ್ಡೆ, ರೋ. ಸಂಜೀವ ಪೂಜಾರಿ ಉಪಸ್ಥಿತರಿದ್ದರು.

ಅದ್ಯಕ್ಷ ರೋ. ರೋನಾಲ್ಡ್ ಸಿಕ್ವೆರಾ ಅವರು ಸ್ವಾಗತಿಸಿದರು , ಕಾರ್ಯದರ್ಶಿ ರೋ. ಹರ್ಷ ನಾರಾಯಣ ಶೆಟ್ಟಿ ವಂದಿಸಿದರು, ರೋ. ಸುಧೀರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here