HomePage_Banner
HomePage_Banner
HomePage_Banner

ಮಾನಭಂಗ ಯತ್ನ ಪ್ರಕರಣದ ಆರೋಪಿಗಳಾದ ಹರೀಶ್, ಲಾವಣ್ಯ, ಈಶ್ವರ ಗೌಡರವರಿಗೆ ನಿರೀಕ್ಷಣಾ ಜಾಮೀನು ಮಂಜೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಳಂತಿಲ ಗ್ರಾಮದ ದೊರ್ತೋಡಿ ಎಂಬಲ್ಲಿ ನಡೆದಿತ್ತೆನ್ನಲಾದ ಶುಭಲತ ಎಂಬವರ ಮಾನಭಂಗ ಯತ್ನ ಪ್ರಕರಣದ ಆರೋಪಿಗಳಾದ ಹರೀಶ್, ಲಾವಣ್ಯ ಮತ್ತು ಈಶ್ವರ ಗೌಡ ಎಂಬವರಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

ಕಳೆದ ಎಪ್ರಿಲ್ 28ರಂದು ಬೆಳಿಗ್ಗೆ 9-45 ಗಂಟೆಗೆ ಇಳಂತಿಲ ಗ್ರಾಮದ ದೊರ್ತೋಡಿ ಎಂಬಲ್ಲಿ ಹರೀಶ್ ಎಂಬವರು ಶುಭಲತಾ ಎಂಬವರ ಅತ್ಯಾಚಾರಕ್ಕೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ತಡೆಯಲು ಬಂದ ಶುಭಲತಾರವರ ಗಂಡನಿಗೆ ಕೈಯಿಂದ ಕೆನ್ನೆಗೆ ಮತ್ತು ಬೆನ್ನಿಗೆ ಹೊಡೆದು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಲ್ಲದೆ, ಅಲ್ಲೇ ನಿಲ್ಲಿಸಿದ್ದ ಶುಭಲತಾರವರ ಕಾರಿನ ಗ್ಲಾಸಿನ್ನು ಜಖಂಗೊಳಿಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಶುಭಲತಾರವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ.೩೪೧, ೫೦೪, ೩೫೪, ೩೨೩, ೪೨೭,೫೦೬,೧೨೦(ಬಿ) ಜೊತೆಗೆ ೩೪ರಂತೆ ಶಿಕ್ಷಾರ್ಹ ಅಪರಾಧವೆಸಗಿರುವುದಾಗಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು. ಸದ್ರಿ ವಿಚಾರ ತಿಳಿದ ಹರೀಶ್ ಮತ್ತು ಇತರರು ಅವರ ಪರ ವಕೀಲರ ಮುಖಾಂತರ ನಿರೀಕ್ಷಣಾ ಜಾಮೀನು ಕೋರಿ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಸಲ್ಲಿಸಿದ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕರು ಆಕ್ಷೇಪ ಸಲ್ಲಿಸಿದ್ದರು. ಪಿರ್ಯಾದಿಯು ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ಧೇಶದಿಂದ ಈ ದೂರನ್ನು ನೀಡಿರುವುದಾಗಿದೆ. ಅಲ್ಲದೆ, ಲಾವಣ್ಯರವರು ಕೂಡಾ ದೂರು ನೀಡಿದ್ದು, ಅವರು ಈಗಾಗಲೇ ಪುತ್ತೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿರುತ್ತಾರೆ. ಸದ್ರಿ ಪ್ರಕರಣದಲ್ಲಿ ಪಿರ್ಯಾದುದಾರರು ಆರೋಪಿಸಿದಂತೆ ಭಾರತೀಯ ದಂಡ ಸಂಹಿತೆಯ ಕಲಂ ೩೫೪ರಲ್ಲಿ ತಿಳಿಸಿದ ಅಂಶಗಳು ಇರುವುದಿಲ್ಲ, ಪಿರ್ಯಾದುದಾರ ಮತ್ತು ಅರ್ಜಿದಾರರ ಮಧ್ಯೆ ಸಿವಿಲ್ ವ್ಯಾಜ್ಯ ತನಿಖೆಯಲ್ಲಿದ್ದು, ಅದಕ್ಕೆ ಕ್ರಿಮಿನಲ್ ಬಣ್ಣ ಹಚ್ಚಿ, ಅರ್ಜಿದಾರರಿಗೆ ಕಿರುಕುಳ ನೀಡುತ್ತಿರುವುದಾಗಿದೆ. ಪ್ರಥಮ ವರ್ತಮಾನ ವರದಿಯ ವಿಳಂಬ, ಅಲ್ಲದೆ ಮೇಲೆ ತಿಳಿಸಿದ ಅಪರಾಧವು ಜಾಮೀನು ರಹಿತ ಅಪರಾಧವಾಗಿದ್ದರೂ ಜೀವಾವಧಿ ಶಿಕ್ಷೆ ಮತ್ತು ಮರಣ ದಂಡನೆ ನೀಡುವಂತಹ ಅಪರಾಧವಾಗಿರುವುದಿಲ್ಲ ಎಂದು ಹರೀಶ್, ಲಾವಣ್ಯ ಮತ್ತು ಈಶ್ವರ ಗೌಡರವರ ಪರ ವಕೀಲರಾದ ಮಹೇಶ್ ಕಜೆ ಮತ್ತು ರಾಜೇಶ್ ರೈ ಮಂಗಳೂರುರವರು ವಾದ ಮಂಡಿಸಿದ್ದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಾಧೀಶ ಶಿವಣ್ಣಗೌಡರವರು ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.