Home_Page_Advt
Home_Page_Advt
Home_Page_Advt

ಜೂ.9: ನೆಟ್ಟಣದಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 3ನೇ ಶಾಖೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಬ್ಯಾಂಕಿಂಗ್ ವ್ಯವಹಾರದ ೩ನೇ ಶಾಖೆ ಬಿಳಿನೆಲೆ ಗ್ರಾಮದ ನೆಟ್ಟಣ ಶ್ರೀ ದುರ್ಗಾ ಕಟ್ಟಡದಲ್ಲಿ ಜೂ.9ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ಉಪಾಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯಲ್ಗ, ಶಾಖಾ ಸಲಹಾ ಸಮಿತಿ ಅಧ್ಯಕ್ಷ ರವಿ ಕಕ್ಯೆಪದವು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ಬಿ.ನೈಯಲ್ಗ ಹಾಗೂ ನಿರ್ದೇಶಕರುಗಳು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ನಿವೃತ್ತ ಶಿಷ್ಟಾಚಾರಾಧಿಕಾರಿ ವೆಂಕಟರಾಜ್‌ರವರು ನೂತನ ಕಚೇರಿ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಅರ್ಚಕ ಟಿ.ರಾಮಕೃಷ್ಣ ಅಸ್ರಣ್ಣರವರು ದೀಪೋಜ್ವಲನ ಮಾಡಲಿದ್ದಾರೆ. ಉದ್ಯಮಿ, ಕಲಾವಿದರೂ ಆದ ಯಜ್ಞೇಶ ಆಚಾರ್ಯರವರು ಭದ್ರತಾಕೋಶ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಗಣಕಯಂತ್ರ ಉದ್ಘಾಟಿಸಲಿದ್ದಾರೆ. ಜಿ.ಪಂ.ಮಾಜಿ ಸದಸ್ಯೆ ಕುಮಾರಿ ವಾಸುದೇವನ್‌ರವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ನಗದು ಪತ್ರ, ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷ, ಉದ್ಯಮಿ ರಾಜೇಶ್ ಎನ್.ಎಸ್.,ರವರು ಉಳಿತಾಯ ಖಾತೆ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಬಿ.ಸಿ.ರೋಡ್ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿಯವರು ಸ್ವಸಹಾಯ ಸಂಘ ಉದ್ಘಾಟಿಸಲಿದ್ದಾರೆ.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೪ ಅಂಕಗಳಿಸಿದ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕೃಪಾ ಕೆ.ಆರ್.,ರವರು ಪ್ರತಿಭಾ ಪುರಸ್ಕಾರ ನಡೆಯಲಿದ್ದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣರವರು ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ತಾ.ಪಂ.ಸದಸ್ಯೆ ಯರಾದ ಕುಸುಮ ಪಿ.ವೈ., ಆಶಾಲಕ್ಷ್ಮಣ್, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ., ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್, ಪುತ್ತೂರು ಉಪವಿಭಾಗದ ಸಹಾಕರ ಸಂಘಗಳ ಸಹಾಯಕ ನಿಬಂಧಕ ಆರ್.ಮಂಜುನಾಥ್, ನೆಟ್ಟಣ ಸೈಂಟ್ ಮೇರೀಶ್ ಚರ್ಚ್‌ನ ಕಾರ್ಯದರ್ಶಿ ಪಿ.ಪಿ.ತೋಮಸ್ ಪದಂಜರ, ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ, ನೆಟ್ಟಣ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಹಾಜಿ, ಬಿಳಿನೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಕಾಶ್, ಪ್ರಗತಿಪರ ಕೃಷಿಕ ಜಾಕ್ಸನ್ ಚೆರಿಯನ್, ನೆಟ್ಟಣ ಶ್ರೀ ದುರ್ಗಾ ಕಟ್ಟಡದ ಮಾಲಕ ತಿಮ್ಮಪ್ಪ ಗೌಡರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊಯಿಲದಿಂದ ಬಿಳಿನೆಲೆ ತನಕ ೧೬ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮೂರ್ತೆದಾರರ ಕುಟುಂಬಗಳ ಶ್ರೇಯೋಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ೧೯೯೧ರಲ್ಲಿ ಆಲಂಕಾರಿನಲ್ಲಿ ಸ್ಥಾಪನೆಗೊಂಡಿತು. ೨೦೦೫ರಲ್ಲಿ ಬಾಡಿಗೆ ಕಟ್ಟಡದಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಲಾಯಿತು. ೨೦೧೫ರಲ್ಲಿ ಕಡಬದ ಟೋಬ್ ಬಜಾರ್ ಬಿಲ್ಡಿಂಗ್‌ನಲ್ಲಿ ಪ್ರಥಮ ಶಾಖೆ ತೆರೆಯಲಾಯಿತು. ೨೦೧೬ರಲ್ಲಿ ಆಲಂಕಾರಿನಲ್ಲಿ ಸಂಘದ ಸ್ವಂತ ಹಕ್ಕಿನ ಜಮೀನಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಒಂದನೇ ಮಹಡಿಯಲ್ಲಿ ಪ್ರಧಾನ ಕಚೇರಿ ತೆರೆಯಲಾಯಿತು. ಅದೇ ವರ್ಷ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಜೆ.ಜೆ.ಅಡಿಟೋರಿಯಂನಲ್ಲಿ ಸಂಘದ ೨ನೇ ಶಾಖೆ ಆರಂಭಿಸಲಾಯಿತು. ನೆಟ್ಟಣದಲ್ಲಿ ಬ್ಯಾಂಕಿಂಗ್ ವ್ಯವಹಾರದ ೩ನೇ ಶಾಖೆ ಆರಂಭಗೊಳ್ಳಲಿದ್ದು ಸಮಾಜದ ಸರ್ವ ಸಮುದಾಯಗಳ ಸಹಕಾರವನ್ನು ಸಂಘವು ನಿರಂತರ ಬಯಸುತ್ತದೆ –ಕೆ.ಚಂದ್ರಶೇಖರ ಆಲಂಕಾರು, ಅಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.