HomePage_Banner
HomePage_Banner
HomePage_Banner
Breaking News

ನೆಲ್ಯಾಡಿ: ಜ್ಞಾನೋದಯ ಬೆಥನಿಯಲ್ಲಿ ಪ್ರಥಮ ಪಿ.ಯು.ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಬದುಕಿನಲ್ಲಿ ಕನಸು ಕಾಣಬೇಕು. ಅದು ನಿದ್ದೆ ಬರಿಸದ ಕನಸಾಗಬೇಕು. ಅದಕ್ಕೆ ಸತತವಾಗಿ ದುಡಿಯಬೇಕು. ಪ್ರತಿಯೊಬ್ಬರಲ್ಲಿಯೂ ವಿಭಿನ್ನ ಪ್ರತಿಭೆ ಇರುತ್ತದೆ. ಅದನ್ನು ಹೊರತರುವ ವೇದಿಕೆ ನಮ್ಮ ಈ ಸಂಸ್ಥೆಯಾಗಿದೆ. ಆದ್ದರಿಂದ ಕಾಲೇಜು ಜೀವನವನ್ನು ಸಂತೋಷದಿಂದ ಕಳೆಯಿರಿ ಎಂದು ನೆಲ್ಯಾಡಿ ಜ್ಞಾನೋದಯ ಬೆಥನಿ ಬೆಥನಿ . ಪೂ. ಕಾಲೇಜು ನೆಲ್ಯಾಡಿ ಇದರ ಪ್ರಾಂಶುಪಾಲ ರೆ|ಫಾ| ಮ್ಯಾಥ್ಯೂ ಪ್ರಫುಲ್ ಹೇಳಿದರು.

ಅವರು ಜ್ಞಾನೋದಯ ಬೆಥನಿಯಲ್ಲಿ ಪ್ರಥಮ ಪಿಯು ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ವಾಗತೋತ್ಸವ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವು ಸಂಸ್ಥೆಯ ಸಿಲ್ವರ್ ಜೂಬಿಲಿ ಹಾಲ್‌ನಲ್ಲಿ ನಡೆಯಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಜೋರ್ಜ್ ಕೆ ತೋಮಸ್ ಹಾಗೂ ಉಪನ್ಯಾಸಕವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತದನಂತರ ವಿದ್ಯಾರ್ಥಿಗಳ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಆಟೋಟ ಸ್ಪರ್ಧೆಗಳು ನಡೆಯಿತು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಝಿಯಾದ್ ಸ್ವಾಗತಿಸಿ, ಶುಭಾ ಚೆರಿಯಾನ್ ವಂದಿಸಿದರು. ಸಿಂಚನವೇಣು ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ನಿಶಾ, ಮನ್ನಾ, ನಿಶ್ಮಿತಾ ಹಾಗೂ ಜಿಷ್ಣು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.