ವೇಣೂರು: ಬೆಂಗಳೂರಿನಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಗ್ರಾ.ಪಂ. ವ್ಯಾಪ್ತಿಗಳಿಂದ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ರಾಜ್ಯದಲ್ಲಿ ಸಂಚರಿಸುವ ರಥವನ್ನು ಅ. 29 ರಂದು ಅಪರಾಹ್ನ 2.30ಕ್ಕೆ ವೇಣೂರಿನಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಕ್ಕೆ ಸಿದ್ದತೆ ನಡೆದಿದೆ.
ಬಳಿಕ ವಾಹನ ಜಾಥಾದ ಮೂಲಕ ಬೆಳ್ತಂಗಡಿಗೆ ತೆರಳಲಿದೆ. ಸಂಜೆ 4.30 ಕ್ಕೆ ವಾಣಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.