ಅ.30: ಕೊಯ್ಯೂರಿನಲ್ಲಿ ಮಲೆಕುಡಿಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ

0

ಬೆಳ್ತಂಗಡಿ: ಕೊಯ್ಯೂರು ಗ್ರಾಮದ-ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ ಮಲೆಕುಡಿಯರಿಗಾಗಿ ಅ. 30ರಂದು  ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ವು ಆಧುನಿಕ ವ್ಯವಸ್ಥೆ ಹಾಗೂ ತಜ್ಞ ತಂಡದೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಬಿ.ಪಿ. ಶುಗರ್ ಇತ್ಯಾದಿ ಸಾಮಾನ್ಯ ಪರೀಕ್ಷೆಯಲ್ಲದೆ, ಕಣ್ಣಿನ ಪರೀಕ್ಷೆ, ಸ್ತನ ಕ್ಯಾನ್ಸರ್, ಗರ್ಭ ಕೋಶ ಸಮಸ್ಯೆಗಳ ಬಗ್ಗೆಯೂ ತಪಾಸಣೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆ ಹಾಗೂ ಇಲಾಖೆಗಳು ಸಹಕಾರ ನೀಡಿದ್ದು, ಮಲೆಕುಡಿಯ ಬಾಂಧವರು ಅತಿ ಹೆಚ್ಚು ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಬೇಕೆಂದು ಮಲೆಕುಡಿಯರ ಸಂಘ, ರಿ. ದ.ಕ. ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here