ಗ್ರಾಮ ಪಂಚಾಯತ್ ನಾವೂರು: ಕೋಟಿ ಕಂಠ ಗಾಯನ ” ನನ್ನ ನಾಡು -ನನ್ನ ಹಾಡು “-ಸಮೂಹ ಗೀತಗಾಯನ ಕಾರ್ಯಕ್ರಮ

0

ನಾವೂರು: ಗ್ರಾಮ ಪಂಚಾಯತ್ ನಾವೂರು,ಸಂಜೀವಿನಿ ಸ್ವ ಸಹಾಯ ಒಕ್ಕೂಟ ಹಾಗೂ ಊರಿನ ಎಲ್ಲಾ ಸಂಘ ಸಂಸ್ಧೆಗಳ ಸಹಯೋಗದೊಂದಿಗೆ ಅ.28ರಂದು ಸರಕಾರದ ನಿರ್ದೇಶನದಂತೆ ಕೋಟಿ ಕಂಠ ಗಾಯನ ” ನನ್ನ ನಾಡು -ನನ್ನ ಹಾಡು “-ಸಮೂಹ ಗೀತಗಾಯನ ಕಾರ್ಯಕ್ರಮ ನಡೆಸಲಾಯಿತು.

ಊರಿನ ಗಣ್ಯರಾದ ಡಾ||ಪ್ರದೀಪ್ ರವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಮಾತಾನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿನ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅ.ಅಧಿಕಾರಿ, ಕಾರ್ಯದರ್ಶಿ ,ಊರಿನ ಗಣ್ಯರು, ಜನಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಯವರು, ವ್ಯಾಪಾರ ವ್ಯವಹಾರಸ್ಥರು, ಗ್ರಾಮ ಪಂಚಾಯತ್ ಸಿಬ್ಬಂಧಿಗಳು, ಒಕ್ಕೂಟ ದ ಅಧ್ಯಕ್ಷರು ಮತ್ತು ಸದಸ್ಯರು ಎಂಬಿಕೆ  , ಎಲ್ ಸಿ ಆರ್ ಪಿ, ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗಣೇಶ್ ಗೌಡ ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿ ಎಲ್ಲರನ್ನು ಸ್ವಾಗತಿಸಿದರು , ಸದಸ್ಯರಾದ ಹರೀಶ್ ಸಾಲಿಯಾನ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here