ಅನುಗ್ರಹ ಶಾಲೆಯಲ್ಲಿ ಕೋಟಿ ಕಂಠ ಗಾಯನ

0

ಉಜಿರೆ: ಅನುಗ್ರಹ ಶಾಲೆಯ ಪ್ರೌಢ ಹಾಗೂ ಪದವಿ ಪೂರ್ವ ಮಕ್ಕಳಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮವು ಶಾಲಾ ಪ್ರಾಚಾರ್ಯರಾದ ವಂ| ಫಾ| ವಿಜಯ್ ಲೋಬೊ ರವರ ನೇತೃತ್ವದಲ್ಲಿ ಅ.28 ರಂದು ನಡೆಯಿತು.  ಪ್ರಭಾಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತಿನೊಂದಿಗೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಸ್ವಾಗತಿಸಿದರು. ನಾಡಿನ ಶ್ರೇಷ್ಠ ಕವಿಗಳ ಹಾಡುಗಳನ್ನು ಶಾಲಾ ಮಕ್ಕಳು ಸುಶ್ರಾವ್ಯವಾಗಿ ಹಾಡಿದರು ಹಾಗೂ ಮಕ್ಕಳೆಲ್ಲರೂ ಹಾಡಿಗೆ ಧ್ವನಿಗೂಡಿಸಿದರು. ಎಲ್ಲಾ ಮಕ್ಕಳಿಗೂ ಸಂಕಲ್ಪ ವಿಧಿಯನ್ನು ಬೋಧಿಸಲಾಯಿತು. ಶಾಲಾ ಪ್ರಾಚಾರ್ಯ ವಂ|ಫಾ| ವಿಜಯ್ ಲೋಬೋ ರವರು ಕಾರ್ಯಕ್ರಮದ ಯಶಸ್ಸಿಗೆ  ಅಭಿನಂದಿಸಿ ಮಾತನಾಡಿ,. ವಂದಿಸಿದರು.

LEAVE A REPLY

Please enter your comment!
Please enter your name here