ಬೆಳ್ತಂಗಡಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆ

0

ಉಜಿರೆ: ಬೆಳ್ತಂಗಡಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಯು ಉಜಿರೆ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಅ. 28 ರಂದು ನಡೆಯಿತು.

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿ ಶಾಲೆಯ ಘನತೆಯನ್ನು ಹೆಚ್ಚಿಸಿದ್ದಾರೆ.

ಸೃಷ್ಟಿ (10ನೇ) ಗುಂಡೆಸೆತ ಪ್ರಥಮ ಸ್ಥಾನ, ಜೋಶನ್ (10ನೇ) 200ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ಬಾಲಕರ ರಿಲೇಯಲ್ಲಿ ಜೋಶನ್, ವರುಣ್, ಧನುಷ್ ಹಾಗೂ ಮಹಮ್ಮದ್ ಶಾಮಿಲ್ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಲೂಹ ಮರಿಯಮ್ (10ನೇ) 400ಮೀ ಹಾಗೂ 800ಮೀ ಓಟದಲ್ಲಿ ದ್ವಿತೀಯ ಸ್ಥಾನ, ವಿಯೋನ ಫೆರ್ನಾಂಡಿಸ್ (10ನೇ) ಗುಂಡೆಸೆತ ದ್ವಿತೀಯ ಸ್ಥಾನ, ವರುಣ್ (10ನೇ) 800ಮೀ ಓಟದಲ್ಲಿ ದ್ವಿತೀಯ ಸ್ಥಾನ, ಧನುಷ್ (10ನೇ) 400 ಮೀ ಓಟದಲ್ಲಿ ತೃತೀಯ ಸ್ಥಾನ, ಜೋಶನ್ (10ನೇ) 100 ಮೀ ಓಟದಲ್ಲಿ ತೃತೀಯ ಸ್ಥಾನ, ಮಹಮ್ಮದ್ ಶಾಮಿಲ್ (10ನೇ) 200ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಜೋಶನ್ ವೈಯಕ್ತಿಕ ಚಾಂಪಿಯನ್ ಹಾಗೂ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶರತ್ ಪಿಂಟೋ ತರಬೇತಿ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here