Home_Page_Advt
Home_Page_Advt
Home_Page_Advt

ಕಡಬ ಆರ್‌ಟಿಜೆಎಂ ಮಸೀದಿಯಲ್ಲಿ ನ್ಯೂ ಫ್ರೆಂಡ್ಸ್ ವತಿಯಿಂದ ಇಫ್ತಾರ್ ಕೂಟ

Puttur_Advt_NewsUnder_1
Puttur_Advt_NewsUnder_1


ಕಡಬ: ಇಲ್ಲಿಯ ರಹ್ಮಾನೀಯ ಟೌನ್ ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ಜಮಾಅತ್ ಕಮಿಟಿ , ಯಂಗ್‌ಮೆನ್ಸ್, ಸಂಘ ಸಂಸ್ಥೆಗಳ ಸಹೋದ್ಯೋಗಿಗಳಿಂದ ನಡೆಸುತ್ತಾ ಬರುತ್ತಿರುವ ಇಫ್ತಾರ್ ಕೂಟ ಜೂ. 3 ರಂದು ನ್ಯೂ ಪ್ರೆಂಡ್ಸ್ ನಡೆಯಿತು.
ಮಸೀದಿಯ ಖತೀಬರಾದ ಹಾಜಿ ಪಿ.ಎಂ ಇಬ್ರಾಹಿಂ ದಾರಿಮಿ ದುಃವಾ ಪ್ರಾರ್ಥನೆ ಗೈದು ಇಫ್ತಾರ್ ಕೂಟ ನಡೆಸಿಕೊಂಡು ಬರುತ್ತಿರುವ ಎಲ್ಲರಿಗೂ ಹಾಗೂ ಭಾಗವಹಿಸುವವರಿಗೂ ಅಲ್ಲಾಹು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಜಮಾಅತಿನ ಅಧ್ಯಕ್ಷರಾದ ಹಾಜಿ ಎಸ್ ಅಬ್ದುಲ್ ಖಾದರ್‌ರವರು ಇಫ್ತಾರ್ ಕೂಟ ನಡೆಸಿಕೊಟ್ಟ ನ್ಯೂ ಪ್ರೆಂಡ್ಸ್ ಸಂಘಟನೆಯವರಿಗೆ ಕೃತಜ್ಞತೆ ಸಲ್ಲಿಸಿದರು.

ಉಪಾಧ್ಯಕ್ಷರಾದ ಹಾಜಿ ಸಯ್ಯದ್ ಹುಸೇನ್ ಕಳಾರ, ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್ ಅಬ್ದುಲ್ ಹಮೀದ್, ಕೋಶಾಧಿಕಾರಿ ಹಾಜಿ ಕೆ ಅಬ್ದುಲ್ ಖಾದರ್, ಕಾರ್ಯದರ್ಶಿಗಳಾದ ಆಶ್ರಪ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ, ಸಂಘಟನಾ ಕಾರ್ಯದರ್ಶಿ ಕೆ.ಎಂ ಫಾರೂಕ್, ಆಡಳಿತ ಮಂಡಳಿ ಕಾರ್ಯಕಾರಿ ಸದಸ್ಯರಾದ ಕುಂಞಳಿಕೇಪು, ಹಾರೀಸ್ ಹ್ಯೊಗೆಕೆರೆ , ಆದಂ ತಿಮರಡ್ಡ, ಆಹ್ಮದ್ ಮಾಲೇಶ್ವರ, ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ನಿಯಾಜ್, ಡೆಲ್ಮಾ ಸ್ಯಾನಿಟರಿ ಸಂಸ್ಥೆಯ ಮಾಲಕ ಲತೀಪ್ , ಕುವ್ವತ್ತುಲು ಇಸ್ಲಾಂ ಕಮಿಟಿ ಕಾರ್ಯದರ್ಶಿ ಅಬ್ಬಾಸ್ ಎಸ್ , ನ್ಯೂ ಪ್ರೆಂಡ್ಸ್ ಅಧ್ಯಕ್ಷ ಶೆರಿಫ್ ತಿಮರಡ್ಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹ್ಯೊಗೆಕೆರೆ , ಕಾರ್ಯದರ್ಶಿ ಜಲೀಲ್ ಬೈಲು, ಸೇರಿದಂತೆ ನೆರೆಯ ಜಮಾಅತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.