20ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ) ಆಶ್ರಯದಲ್ಲಿ “ಸಂಗೀತ ಪರಿಕರಗಳ ಪರಿಚಯ” ಎಂಬ ವಿಷಯದ ಕುರಿತು 20ನೆಯ ರಾಜ್ಯಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಂಯೋಜಿಸಲಾಗಿದೆ.

20*14 ಸೆಂ ಮೀ ಗಾತ್ರದ ಡ್ರಾಯಿಂಗ್ ಶೀಟ್, ಸ್ಪರ್ಧಾ ಕಾರ್ಡ್ ಅಥವಾ ಅಂಚೆ ಕಾರ್ಡ್ ಮೂಲಕ ಚಿತ್ರ ಬಿಡಿಸಬಹುದಾಗಿದ್ದು, ಸ್ಪರ್ಧೆಯು ಕರ್ನಾಟಕದವರಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಪ್ರವೇಶ ಶುಲ್ಕವಿಲ್ಲ. ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಹೀಗೆ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ಪೆನಸ್ಇಲ್, ಜಲವರ್ಣ, ತೈಲವರ್ಣ ಅಥವಾ ಇಂಡಿಯನ್ ಇಂಕ್ ಹಾಗೂ ವಿವಿಧ ರೀತಿಯಿಂದ ಚಿತ್ರಗಳನ್ನು ರಚಿಸಬಹುದಾಗಿದೆ. ಒಬ್ಬರು ಎಷ್ಟು ಚಿತ್ರಗಳನ್ನು ಬೇಕಾದರು ಕಳುಹಿಸಬಹುದಾಗಿದ್ದು, ವಿದ್ಯಾರ್ಥಿಗಳಾಗಿದ್ದಲ್ಲಿ ತಮ್ಮ ಮನೆ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ವಿದ್ಯಾಲಯದ ಮುದ್ರೆ ಹಾಗೂ ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ದೃಢೀಕರಿಸಿ ಕಳುಹಿಸಬಹುದಾಗಿದೆ.

ಶಾಲಾ ಮುಖ್ಯಸ್ಥರ ಸಹಿ ಇಲ್ಲದಿದ್ದಲ್ಲಿ ಅಂತಹ ಚಿತ್ರಗಳನ್ನು ಸಾರ್ವಜನಿಕ ವಿಭಾಗ ಎಂದು ಪರಿಗಣಿಸಲಾಗುತ್ತದೆ. ಸಾರ್ವಜನಿಕ ವಿಭಾಗದವರು ಕೇವಲ ಸಾರ್ವಜನಿಕ ವಿಭಾಗ ೆಂದು ಬರೆದು ಸ್ಪರ್ಧೆಯ ಪೂರ್ಣ ವಿಳಾಸ(ದೂರವಾಣಿ ಸಂಖ್ಯೆ ಸಹಿತ) ಕಳುಹಿಸತಕ್ಕದ್ದು.

ಕಳುಹಿಸಬೇಕಾದ ದಿನಾಂಕ ಮತ್ತು ವಿಳಾಸ:

ಸ್ಪರ್ಧಿಗಳು ಚಿತ್ರಗಳನ್ನು ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ದಿನಾಂಕ 31-3-2023 ರ ೊಳಗಾಗಿ ನಿರ್ದೇಶಕರು, ಅಂಚೆ-ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ) ಶ್ರೀ ಕ್ಷೇತ್ರ ಧರ್ಮಸ್ಥಳ-574216, ಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸುವಂತೆ ಯೋಜನೆಯ ನಿರ್ದೇಶಕರಾದ ಡಾ.ಐ.ಶಶಿಕಾಂತ್ ಜೈನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here