ಉಜಿರೆಯ ಹಿರಿಯ ಉದ್ಯಮಿ, ಬಂಟ್ವಾಳ ಟ್ರೇಡರ್ಸ್ ಮಾಲಕ ಪುತ್ತುಮೋನು ಹಾಜಿ ನಿಧನ

0

ಬೆಳ್ತಂಗಡಿ: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಉಜಿರೆ ಘಟಕದ ಅಧೀನದಲ್ಲಿರುವ ಅಲ್ ಅಸನಾತ್ ಸಲಫಿ ಮದರಸ ಟಿ.ಬಿ ಕ್ರಾಸ್ ಇದರ ಅಧ್ಯಕ್ಷರೂ ಆಗಿದ್ದ ಉಜಿರೆಯ ಹಿರಿಯ ಉದ್ಯಮಿ ಹಾಗೂ ಬಂಟ್ವಾಳ ಟ್ರೇಡರ್ಸ್ ಮಾಲಿಕ ಪುತ್ತುಮೋನು ಹಾಜಿ(72) ಅವರು ಅ.28 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಉದ್ಯಮದ ಜೊತೆಗೆ ಸಮಾಜ ಸೇವಕರೂ ಆಗಿದ್ದ ಅವರು ಕೊಡುಗೈ ದಾನಿಯಾಗಿದ್ದರು. ರಾಜಕೀಯವಾಗಿಯೂ ತೊಡಗಿಸಿಕೊಂಡಿದ್ದ ಅವರು ಬಿಜೆಪಿ ತಾಲೂಕು ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾಗಿದ್ದರು. ಅವರ ಜನಾಝ ನಮಾಝ್ ವಿಧಿಯು ಸುನ್ನತ್ ಕೆರೆ ತೌಹೀದ್ ಮಸ್ಜಿದ್ ನಲ್ಲಿ ಬೆಳಿಗ್ಗೆ 11 ಕ್ಕೆ ನಡೆದು, ಮದ್ದಡ್ಕದ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here