ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ದೀಪಾವಳಿ ಸಂಭ್ರಮಾಚರಣೆ, ಗೋಪೂಜೆ

0

ಗಂಡಿಬಾಗಿಲು: ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ಅ.26ರಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಿಯೋನ್ ಗೋಶಾಲೆಯಲ್ಲಿ ಗೋವುಗಳಿಗೆ ಹೂವಿನ ಹಾರ ಹಾಕಿ ಗೋಪೂಜೆ ಮಾಡಲಾಯಿತು. ಸಭಾಂಗಣದಲ್ಲಿ ರಂಗೋಲಿ ಹಾಕಿ ದೀಪ ಹಚ್ಚಿ ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸಿ ಆಶ್ರಮನಿವಾಸಿಗಳೆಲ್ಲರೂ ಸಂಭ್ರಮಿಸಿದರು.

ಸಿಯೋನ್ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು. ವಿವಿಧ ಬಗೆಯ ಸಿಹಿತಿಂಡಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಹಿತೈಷಿಗಳಿಂದ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಜಯಪ್ರಕಾಶ್ ಶೆಟ್ಟಿ ಬೆಳ್ತಂಗಡಿ ಇವರು ನೀಡಿದರು.

LEAVE A REPLY

Please enter your comment!
Please enter your name here