ಶ್ರೀ ಧ. ಮಂ. ಅ. ಹಿ. ಪ್ರಾ ಶಾಲೆ ಪುದುವೆಟ್ಟುವಿನಲ್ಲಿ ಸ್ಕೌಟ್ ಗೈಡ್ ಉದ್ಘಾಟನೆ ಮತ್ತು ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

0

ಪುದುವೆಟ್ಟು:   ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಸ್ಕೌಟ್ ಗೈಡ್ ಉದ್ಘಾಟನೆ ಮತ್ತು ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸ್ಥಳೀಯರಾದ  ದೇವಣ್ಣ ಗೌಡ ಮುಚ್ಚರ್ ನೆರವೇರಿಸಿ ಸ್ಕೌಟ್ ಗೈಡ್ ಗೆ ಶುಭ ಹಾರೈರಿಸಿದರು.

ಸ್ಕೌಟ್ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವನ್ನು ಗಣೇಶ್ ಮುಜಾರದಡ್ಡ, ಪುದುವೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಯಶವಂತ್ ಗೌಡ, ದಾಮೋದರ ಮುಜಾರದಡ್ಡ, ಚೇತನ್ ಮುಚ್ಚರು ನೀಡಿ ಸಹಕರಿಸಿದರು, ಗೈಡ್ ಮಕ್ಕಳಿಗೆ ಗಾಯತ್ರಿ ಕಿಶೋರ್ ರವರು ನೀಡಿ ಸಹಕರಿಸಿದರು.

ಕಾರ್ಯಕ್ರಮ ದಲ್ಲಿ ಉಚಿತ ಸಮವಸ್ತ್ರ ನೀಡಿದ ದಾನಿಗಳಿಗೆ ಅಭಿನಂದಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮುಖ್ಯ ಶಿಕ್ಷಕರಾದ  ಶೀನಪ್ಪ ಗೌಡ ಮಾತನಾಡಿ ಸ್ಕೌಟ್ ಗೈಡ್ ನ ಮೌಲ್ಯಗಳು, ತತ್ವ, ನಿಯಮ ಗಳನ್ನು ಮಕ್ಕಳಿಗೆ ತಿಳಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮದಲ್ಲಿ  ಸುಜಾತಾ ಸ್ವಾಗತಿಸಿ, ಕುಮಾರಿ ವೇದಾವತಿ ಧನ್ಯವಾದ ಸಲ್ಲಿಸಿದರು,  ನಿಶಾಂತ್ ಕಾರ್ಯಕ್ರಮ ನಿರೂಪಿಸಿ ದರು, ಶಾಲೆಯ ಎಲ್ಲಾ ಶಿಕ್ಷಕರು ಸಹಕರಿಸಿ ದರು.

LEAVE A REPLY

Please enter your comment!
Please enter your name here