ಬಡಗನ್ನೂರು: ಗ್ರಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆರೆ ಗ್ರಾಮದ ರಸ್ತೆ ಕಾಂಕ್ರೀಟ್ ಬಿಲ್ ಪಾವತಿಗೆ ಸದಸ್ಯರ ಅಕ್ಷೇಪಣೆಗೆ ಸಭೆಯಲ್ಲಿ ನಿರ್ಣಯ
ಬೆಟ್ಟಂಪಾಡಿ:  ಗ್ರಾಮ ಪಂಚಾಯತಿ ಸ್ಥಿರ ಆಸ್ತಿಯಲ್ಲಿಲ್ಲದ ನೆರೆ ಗ್ರಾಮದ ರಸ್ತೆ ಕಾಂಕ್ರೀಟಿಕರಣದ ಬಿಲ್ ಪಾವತಿ ಬಗ್ಗೆ ಸದಸ್ಯರ ಆಕ್ಷೇಪದ ಬಗ್ಗೆ  ಬಡಗನ್ನೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷ ಕೇಶವ ಗೌಡ ಕನ್ನಯ ಇವರ ಅಧ್ಯಕ್ಷತೆಯಲ್ಲಿ ಜೂ 3 ರಂದು ಗ್ರಾ.ಪಂ ಸಮುದಾಯ ಭವನದಲ್ಲಿ ನಡೆಯಿತು.

ಬಡಗನ್ನೂರು ಗ್ರಾಮ ಪಂಚಾಯತ್ ಹಾಗೂ ನೆಟ್ಟಣಿಗೆ ಮೂಡ್ನೂರು ಗ್ರಾಮದ ಗಡಿಭಾಗದಲ್ಲಿರುವ  ಪಡುವನ್ನೂರು ಗ್ರಾಮದ ಸಾರಕೂಟೇಲು- ಮುಗುಳಿ ಸಂಪರ್ಕ ರಸ್ತೆಗೆ ಗ್ರಾ.ಪಂ 14 ನೇ ಹಣಕಾಸು ಯೋಜನೆಯಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ  76 ಸಾವಿರ ಅನುದಾನ ಇಟ್ಟಿದ್ದು  ಕಾಮಗಾರಿ ಸಂದರ್ಭದಲ್ಲಿ  ಗುತ್ತಿಗೆದಾರರಿಗೆ ಸ್ಥಳೀಯ ವ್ಯಕ್ತಿಯೋರ್ವರ ಒತ್ತಡ ಹಾಕಿ ಪಂಚಾಯತ್ ಸ್ಥಿರ ಆಸ್ತಿಯಲ್ಲಿಲ್ಲದ ಇನ್ನೊಂದು  ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಿದ್ದಾರೆ ಅಲ್ಲದೇ ಸ್ಥಳೀಯ ಕೆಲವು ವ್ಯಕ್ತಿಗಳಲ್ಲಿ ರಸ್ತೆ ಬೇಕಾದರೆ ಹಣ ನೀಡಬೇಕು ಎಂದು ಹೇಳಿ ಹಣ ಪಡೆದು ಕೊಂಡಿದ್ದಾರೆ  ಎಂದ ಸದಸ್ಯ ರವಿರಾಜ ರೈ  ಕಾಮಗಾರಿ ಬಿಲ್  ಮಾಡುವಲ್ಲಿ ನನ್ನ ಆಕ್ಷೇಪ ಇದೆ ಎಂದು ಸಭೆಯಲ್ಲಿ ತಿಳಿಸಿದ ಅವರು ಆ ರಸ್ತೆ ಕಾಮಗಾರಿ ನಡೆಸಲು ಅನುಮತಿ ಕೊಟ್ಟವರು ಯಾರು ಎಂದು  ಪಿಡಿಒರವರನ್ನು ಪ್ರಶ್ನಿಸಿದರು.

ಅದಕ್ಕೆ ಪಿಡಿಒ ವಸೀಮ ಗಂಧದ ಉತ್ತರಿಸಿ ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ  ಕಾಮಗಾರಿ ಪೂರ್ಣಗೊಂಡು ಬಿಲ್ ಹಂತದ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ ಎಂದರು . ಕ್ರಿಯಾ ಯೋಜನೆಯಲ್ಲಿ  ಇದೇ ರಸ್ತೆಯ ಹೆಸರು ಇದೆ. ಆದರೆ ರಸ್ತೆ ಬದಲಾವಣೆಯಾಗಿ ನೆಟ್ಟಣಿಗೆ ಮಾಡ್ನೂರು ಗ್ರಾಮದ ರಸ್ತೆಗೆ ಕಾಮಗಾರಿ ಮಾಡಲಾಗಿದೆ ಎಂದ ಅವರು ಬಿಲ್ ನೀಡುವಲ್ಲಿ ಕೂಡ  ಸ್ಥಳೀಯ ವ್ಯಕ್ತಿಯಿಂದ 5,6 ಭಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ರವಿರಾಜ ರೈ ಪಂಚಾಯತ್ ಸದಸ್ಯರು ಕರೆ ಮಾಡಿ ಬಿಲ್ ಮಾಡುವಂತೆ ಕೇಳುವುದು ಇದೆ.ಆದರೆ ಈತ ಬಿಲ್ ಕೇಳಲು ಯಾರು? ಅದು ಬಿಟ್ಟು ಪಿಡಿಒ ಹಾಗೂ ಕಾರ್ಯದರ್ಶಿ ಯವರಿಗೆ ಕರೆಮಾಡಿ ಬೆದರಿಕೆ ನೀಡುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಪಂಚಾಯತ್ ಸ್ಥಿರ ಆಸ್ತಿಯಲ್ಲಿರುವ ರಸ್ತೆ ಬಿಲ್ ಪಾವತಿ ಮಾಡಬೇಕು ಇಲ್ಲದ ಪಕ್ಷದಲ್ಲಿ ನಮ್ಮ ಆಕ್ಷೇಪವಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಬಳಿಕ ಈ ಬಗ್ಗೆ ನಿರ್ಣಯ ಮಾಡಲಾಯಿತು.

ಏರಾಜೆ ಪಳ್ಳತ್ತಾರು ಕುಡಿಯುವ ನೀರಿನ ಪೈಪ್ ಹೊಡೆದು ಪಂಪ್ ತೆಗೆದು ಹಾಕಿದ ಕಿಡಿಗೆಡಿಗಳ ಬಗ್ಗೆ ಪಂಚಾಯತ್ ಯಾವುದೇ ಕ್ರಮಕೈಗೊಳದ ಬಗ್ಗೆ ಸದಸ್ಯೆ ವಿಜಯಲಕ್ಷ್ಮಿ ಅಸಮಾದಾನ ವ್ಯಕ್ತಪಡಿಸಿ ಅಂದಿನಿಂದ  ಏರಾಜೆ- ಪಳ್ಳತ್ತಾರು ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ  ಎಂದರು.  ಇದೆ ಸಂದರ್ಭದಲ್ಲಿ ಈ ಭಾಗದ ನಳ್ಳಿ ನೀರಿನ ಫಲಾನುಭವಿಗಳ ತಂಡ ಆಗಮಿಸಿ ಕಳೆದ ಮೂರು ತಿಂಗಳಿಂದ ನೀರಿನ ಸಮಸ್ಯೆ ಬಗ್ಗೆ ಪಂಚಾಯತ್ ಸದಸ್ಯ ರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಾಗ ಕೊನೆಯ ಭಾರಿಗೆ ಕೊಳವೆ ಬಾವಿ ಡೀಪ್ ಮಾಡಲಾಯಿತು. ಆದರೂ ನೀರು ಸರಿಯಾಗಿ ಬರುತ್ತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಅಧ್ಯಕ್ಷ ಕೇಶವ ಗೌಡ ಮಾತನಾಡಿ  ಕಳೆದ ಮೂರು ತಿಂಗಳ ನೀರಿನ ಬಿಲ್ ಮನ್ನಾ ಮಾಡುವ ಬಗ್ಗೆ ತಿಳಿಸಿ ಸಮಾಧಾನ ಪಡಿಸಿ ಮುಂದೆ ಹೊಸ ಕೊಳವೆಬಾವಿ ತೆಗೆಯುವವರೆಗೆ ಮೂರು ದಿವಸಕ್ಕೆ ಒಂದು ಭಾರಿ ನೀರು ಬೀಡುವ ಬಗ್ಗೆ ಪಂಪ್ ಚಾಲಕರಿಗೆ ಆದೇಶಿಸಿ ನಿರ್ಣಯ ಕೈಗೊಂಡರು.

ಕಜೆಮೂಲೆ- ಸಾರೆಪ್ಪಾಡಿ ಪಂಚಾಯತಿ ರಸ್ತೆಗೆ ಸ್ಥಳೀಯ ವ್ಯಕ್ತಿಯೊರ್ವರು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿದ ದೂರು ಅರ್ಜಿ ಬಗ್ಗೆ  ಅಧ್ಯಕ್ಷ ಕೇಶವ ಗೌಡ ಮಾತನಾಡಿ  ಈ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಮಾಡಲಾಯಿತು.

ವೇದಿಕೆಯಲ್ಲಿ  ಉಪಾಧ್ಯಕ್ಷೆ ಭೇಬಿ ಎಸ್,  ಪಿಡಿಒ ವಸೀಮ ಗಂಧದ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ  ರವಿರಾಜ ರೈ ಸಜಂಕಾಡಿ, ಗುರುಪ್ರಸಾದ್ ರೈ ಕುದ್ಕಾಡಿ,  ಬಾಲಕೃಷ್ಣ ಮುಂಡೋಳೆ, ಗೋಪಾಲ ಕೃಷ್ಣ ಸುಳ್ಯಪದವು, ರಘುನಾಥ ರೈ ಕುತ್ಯಾಳ, ಉದಯ ಕುಮಾರ್ ಶರವು,  ಸುಶೀಲ ಪಕ್ಯೊಡು, ದಮಯಂತಿ ನೆಕ್ಕರೆ, ಸವಿತಾ ಮಡ್ಯಲಮೂಲೆ, ಹೇಮಲತಾ ಗೌಡ ಸಂಪಿಗೆಮಜಲು, ದೇವಕಿ ಕನ್ನಡ್ಕ, ವಿಜಯಲಕ್ಷ್ಮಿ ಮೇಗಿನಮನೆ, ದಾಮೋದರ ಆಚಾರ್ಯ ನೆಕ್ಕರೆ, ರೋಹಿನಿ ಕಜಮೂಲೆ, ಸವಿತಾ ಪದಡ್ಕ, ಜಲಜಾಕ್ಷಿ  ನೆರೋಳ್ತಡ್ಕ, ಉಪಸ್ಥಿತರಿದ್ದರು.

ಗ್ರಾ.ಪಂ ಕಾರ್ಯದರ್ಶಿ ಶಾರದ ಕೆ ಸ್ವಾಗತಿಸಿದರು, ಗುಮಾಸ್ತ ಜಯಾಪ್ರಸಾದ ರೈ ಗತ ಸಭೆ ವರಧಿ ಮಂಡಿಸಿ ವಂದಿಸಿದರು. ಸಿಬ್ಬಂದಿಗಳಾದ ಅಬ್ದುಲ್ ರಹಮಾನ್, ಸುಕನ್ಯಾ, ಹೇಮಾವತಿ ಸಿ.ಎಚ್, ಶಾರದಾ ಹಾಗೂ ಶೀಲಾವತಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.