Home_Page_Advt
Home_Page_Advt
Home_Page_Advt

ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಪಿತೃ ನಮಾಜ್: ರಂಜಾನ್ ಹಬ್ಬ ಆಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ ಪಿತೃ ನಮಾಜ್ ಜೂ.5 ರಂದು ನಡೆಯಿತು. ಮಸೀದಿಯ ಇಮಾಮ್ ಆಸಿಫ್ ಸಖಾಫಿ ನಮಾಜ್‌ನ ನೇತೃತ್ವವನ್ನು ನಿರ್ವಹಿಸಿ ದುಃವಾ ಪ್ರಾರ್ಥನೆ ಗೈದರು. ಮಸೀದಿಯ ಸದರ್‌ಮುಅಲ್ಲಿಂ ಅಶ್ರಫ್‌ಶಹಾದಿ, ಮೌಜಿಮ್ ರಶೀದ್ ಮುಸ್ಲಿಯಾರ್, ಜಮಾಅತಿನ ಆಡಳಿತ ಮಂಡಳಿ ಅಧ್ಯಕ್ಷ ಮಹಮ್ಮದ್ ಶೆರಿಫ್ ಅಡ್ಡಗದ್ದೆ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಫೈಝಲ್ ಎಸ್‌ಇಎಸ್, ಗೌರವ ಸಲಹೆಗಾರ ಹಾಜಿ ಚೋಟ ಇಸ್ಮಾಯಿಲ್ ಸಾಹೇಬ್, ಉಪಾಧ್ಯಕ್ಷ ಆದಂ ಕುಂಡೋಳಿ, ಜತೆ ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್, ಕೋಶಾಧಿಕಾರಿ ಪುತ್ತು ಮೇಸ್ತ್ರೀ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಸ್ ಅಬ್ದುಲ್ ಖಾದರ್, ಪುತ್ತುಮೋನು ಬಾಜಿನಡಿ, ಶುಕುರು ಅಡ್ಡಗದ್ದೆ, ಶೆರಿಫ್ ಮಣಿಮುಂಡ, ಸೇರಿದಂತೆ ಜಮಾಅತರು, ನೆರೆಯ ಜಮಾಅತರು ಉಪಸ್ಥಿತರಿದ್ದರು. ನಮಾಜ್‌ನ ಬಳಿಕ ಒಬ್ಬರನ್ನೊಬ್ಬರು ಆಲಂಗಿಸಿ ಪ್ರೀತಿಯನ್ನು ಹಂಚಿಕೊಂಡರು, ನಂತರ ತಮ್ಮ ತಮ್ಮ ಕುಟುಂಬದವರು ಮೃತರಾಗಿ ದಪನ ಮಾಡಿದ ಕಬರ್‌ಸ್ಥಾನಕ್ಕೆ ಹೋಗಿ ಪ್ರಾರ್ಥಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.