HomePage_Banner
HomePage_Banner

ಭಾಗ್ಯ ಹೊಳೆಗೆ ಸೇತುವೆ ಭಾಗ್ಯವಿಲ್ಲ !!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ ವರದಿ: ಖಾದರ್ ಸಾಹೇಬ್ ಕಲ್ಲುಗುಡ್ಡೆ

  • ಬಿಳಿನೆಲೆ ಗ್ರಾಮದ ಬೈಲು ಬಿಳಿನೆಲೆಯಿಂದ ಉದ್ಮಯ, ಅಮೈ, ಪರ್ಲತಪಾಲ್, ಅರ್ಗೆನಿ, ಚಿದ್ಗಲ್, ಭಾಗದವರಿಗೆ ಅಡಿಕೆ ಪಾಲವೇ ಸಂಪರ್ಕ ಸೇತುವೆ

ಕಡಬ: ಅಧುನಿಕತೆ ಮುಂದುವರಿದು ಪಂಚಾಯತ್ ರಾಜ್ ಸ್ಥಳೀಯಾಡಳಿತ ಸೇರಿದಂತೆ ಗ್ರಾಮೀಣ ಅಬಿವೃದ್ಧಿ ಯೋಜನೆಗಳು ಜಾರಿಯಾಗಿದ್ದರೂ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಜೀವಂತವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಬಿಳಿನೆಲೆ ಗ್ರಾಮದ ಕಾಡಂಚಿನ ಪುತ್ತಿಲ ಬೈಲಿನಿಂದ ಉದ್ಮಯ, ಅಮೈ, ಪರ್ಲತಪಾಲ್, ಅರ್ಗೆನಿ, ಚಿದ್ಗಲ್, ಭಾಗದ ಜನತೆ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂದು ಬೇಡಿಕೆಗೆ ಜನಪ್ರತಿನಿಧಿಗಳ ಭರವಸೆ ಇನ್ನೂ ಈಡೇರಿಲ್ಲ. ಇಂದಿಗೂ ಜನತೆ ಅಪಾಯಕಾರಿಯಾಗಿ ಅಡಿಕೆ ಪಾಲದಲ್ಲೇ ನಿತ್ಯ ಸಂಚರಿಸುತ್ತಿರುವುದು ವಿಷಾದನೀಯವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಸಂಪರ್ಕ ಸೇತುವೆಗೆ ಮುಕ್ತಿ ನೀಡುವರೇ ಎಂದು ಅಲ್ಲಿಯ ಗ್ರಾಮಸ್ಥರು ಕಾಯುತ್ತಿದ್ದಾರೆ.

ಬಿಳಿನೆಲೆ ಗ್ರಾಮದ ಬೈಲುಬಿಳಿನೆಲೆಯಿಂದ ಮುಂದಕ್ಕೆ ಹರಿಯುವ ಭಾಗ್ಯ ಹೊಳೆಗೆ ಉದ್ಮಯ ಎಂಬಲ್ಲಿ ಅಡ್ಡಲಾಗಿ ಸೇತುವೆ ಬೇಕೆಂಬ ಹಲವು ವರ್ಷಗಳ ಬೇಡಿಕೆಯಾಗಿದ್ದು ಸುಮಾರು 40 ಕ್ಕೂ ಹೆಚ್ಚು ಕುಟುಂಬದ ಜನತೆ , ಶಾಲಾ ವಿದ್ಯಾರ್ಥಿಗಳು ಸೇತುವೆಯಿಲ್ಲದೆ ಅಪಾಯಕಾರಿಯಾಗಿ ಹೊಳೆ ದಾಟುತ್ತಿದ್ದಾರೆ. ವರ್ಷದ ಬೇಸಿಗೆಯ ಮೂರು ತಿಂಗಳು ಹೊರತು ಪಡಿಸಿ ಬಳಿಕದ ದಿನಗಳಲ್ಲಿ ಜನತೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ತಾವೇ ನಿರ್ಮಿಸುವ ಅಡಿಕೆ ಪಾಲದ ತೂಗು ಸೇತುವೆ ಮೇಲೆ ಸರ್ಕಸ್ ಮಾಡಿಕೊಂಡು ತೂಗುಯ್ಯಲೆಯಂತಹ ಪಾಲದಲ್ಲಿ ದಾಟಿ ಹೊರ ಪ್ರದೇಶಗಳನ್ನು ಕಾಣುವುದು ಇಲ್ಲಿಯ ಜನರ ಪಾಲಿಗೆ ದುರದೃಷ್ಟವಾಗಿದೆ.

ಹಲವು ವರ್ಷಗಳ ಬೇಡಿಕೆ
ಉದ್ಮಯ, ಅರ್ಗಿನಿ, ಅಮೈ, ಬೈಲು ಪ್ರದೇಶದ ಜನತೆ, ರೈತರು, ವಿದ್ಯಾರ್ಥಿಗಳು ಬಿಳಿನೆಲೆ ಮುಖಾಂತರ ಕಡಬ, ಸುಬ್ರಹ್ಮಣ್ಯ ಮೊದಲಾದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಬೇಕಾದರೆ ಈ ಭಾಗ್ಯ ಹೊಳೆಯನ್ನು ದಾಟಿ ಮುಂದುವರಿಯಬೇಕಾಗಿದೆ. ಇಲ್ಲೋಂದು ಸರ್ವ ಋತು ಸೇತುವೆ ಬೇಕೆಂದು ಕಳೆದ 10 ವಷಗಳಿಂದ ಈ ಭಾಗದ ಸಂಸದರಿಗೆ ಶಾಸಕರಿಗೆ, ಸ್ಥಳಿಯ ಜನಪ್ರತಿನಿದಿಗಳಿಗೆ ಹಲವು ಭಾರಿ ಮನವಿ ಮಾಡಿದ್ದಾರೆ. ಆದರೆ ಭರವಸೆ ಮಾತ್ರ ದೊರೆತಿಸದೆ ಎನ್ನುವ ಆರೋಪವನ್ನು ಈ ಭಾಗದ ಜನತೆ ವ್ಯಕ್ತಪಡಿಸುತ್ತಿರುವುದಲ್ಲದೆ ಚುನಾವಣೆ ಬರುವ ಸಂದರ್ಭದಲ್ಲಿ ಬಂದು ಭರವಸೆಗಳ ಮಹಾಪೂರವನ್ನು ಹರಿಸಿ ಓಟು ಗಿಟ್ಟಿಸಿಕೊಂಡು ಹೋಗುವ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆ ತನಕ ಈ ಭಾಗದ ನೆನಪಿರುವುದಿಲ್ಲ ಎಂದು ದೂರುತ್ತಿದ್ದಾರೆ.

ಗ್ರಾಮಸ್ಥರಿಂದಲೇ ಪ್ರತಿ ವರ್ಷ ಪಾಲ ನಿರ್ಮಾಣ
ಪ್ರತಿ ವರ್ಷ ಈ ಭಾಗದ 40ಕ್ಕೂ ಹೆಚ್ಚೂ ಕುಟುಂಬಗಳು ಹಣ ಹೊಂದಿಸಿ ಸುಮಾರು 20 ಸಾವಿರ ರೂ ವೆಚ್ಚದಲ್ಲಿ ಅಡಿಕೆ ಪಾಲ ನಿರ್ಮಿಸುತ್ತಾರೆ. ಸೇತುವೆಯ ಇಕ್ಕೆಡೆಗಳಲ್ಲಿರುವ ದೊಡ್ಡ ಮರಗಳಿಗೆ ಕಬ್ಬಿಣದ ರೋಪ್ ಆಳವಡಿಸಿ ಅಡಿಕೆ ಮರದಿಂದ ಪಾಲ ನಿರ್ಮಿಸುತ್ತಾರೆ. ಆದರೆ ಮಳೆಗಾಲ ಮುಗಿದೊಡನೆ ಅಡಿಕೆ ಪಾಲದ ಸಲಾಕೆಗಳು ತುಕ್ಕು ಹಿಡಿದು ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು ಇದನ್ನು ವರ್ಷಕೊಮ್ಮೆ ಪುನರ್ ನಿರ್ಮಿಸುತ್ತಾರೆ.

ಸಂಸದರು, ಶಾಸಕರು ಸ್ಥಳಕ್ಕೆ ಭೇಟಿ
ಜನತೆಯ ಬೇಡಿಕೆಗೆ ಸ್ಪಂದಿಸಿ ಕ್ಷೇತ್ರದ ಶಾಸಕ ಎಸ್ ಅಂಗಾರ , ಸಂಸದ ನಳೀನ್ ಕುಮಾರ್ ಕಟೀಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಸಂದರ್ಭ ಸೇತುವೆ ನಿರ್ಮಾಣಕ್ಕೆ ಸುಮಾರು 75 ಲಕ್ಷ ಬೇಕಾಗಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಜನಪ್ರತಿನಿದಿಗಳು ಯಾವಾಗ ಅನುದಾನ ಒದಗಿಸಿ ಸೇತುವೆ ನಿರ್ಮಿಸಿ ತಮ್ಮನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಇಲ್ಲಿಯ ಜನತೆ ಕಾತರರಾಗಿದ್ದಾರೆ.

ದಾಟುವುದು ಅಪಾಯಕಾರಿ
ಪಾಲದ ಮೇಲೆ ನಡೆದಾಡುವಾಗ ತೂಗುಯ್ಯಲೆಯಂತಾಗುತ್ತದೆ. ಪಾಲದಲ್ಲಿ ಪರಿಣತರು ಮಾತ್ರ ಸಂಚರಿಸಲು ಸಾಧ್ಯ. ಈ ಭಾಗದಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಭಾಗವಹಿಸಲು ಹೊರಗಿನ ಮಂದಿ ಆಗಮಿಸಿದರೆ ಪಾಲ ನೋಡಿ ವಾಪಸ್ಸಾಗುತ್ತಿದ್ದಾರೆ. ಈ ಹಿಂದೆ ಪಾಲದಲ್ಲಿ ದಾಟುವಾಗ ಹೊಳೆಗೆ ಬಿದ್ದ ಅದೆಷ್ಟೋ ಘಟನೆಗಳು ನಡೆದಿದೆ ಎನ್ನುತ್ತಾರೆ ಈ ಭಾಗದ ಜನತೆ.

ವರ್ಷದ ಮೂರು ತಿಂಗಳು ಮಾತ್ರ ವಾಹನ ಸಂಚಾರ ಬೇಸಿಗೆಯ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಪಾಲ ನಿರ್ಮಿಸಿದ ಸುಮಾರು ೧೦೦ ಮೀಟರ್ ದೂರದಲ್ಲಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದಗ ವಾಹನ ದಾಟಿಸಲು ಸಾಧ್ಯವಾಗುತ್ತದೆ. ಬಳಿಕದ ದಿನಗಳಲ್ಲಿ ಪಾಲದ ಪಕ್ಕದಲ್ಲಿರುವ ತಾವುಗಲೇ ನಿರ್ಮಿಸಿರುವ ಶೆಡ್ಡ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡೆ ಹೋಗಬೇಕಾಗುತ್ತದೆ.

ತೂಗುಯ್ಯಾಲೆ ಪಾಲದಲ್ಲಿ 83ರ ಅಜ್ಜಿಯ ಪಯಣ ಪ್ರತಿ ವರ್ಷ ಅಡಿಕೆ ಮರದ ರಿಪುಗಳನ್ನು ಕಬ್ಬಿಣದ ಸರಿಗೆಯಿಂದ ನೆಯ್ದು 2 ಕಡೆಯ ಮರದ ಕೊಂಬೆಗೆ ಎಳೆದು ಕಟ್ಟಿ ಮಳೆಗಾಲದಲ್ಲಿ ತನ್ನ ಪ್ರಾಣವನ್ನು ಕೈಯಲ್ಲಿಡಿದು ಭಾಗ್ಯ ಹೊಳೆಯನ್ನು ದಾಟುತ್ತಿರುವ ಉದ್ಮಯ- ಅಮೈ ಭಾಗದ ಶಾಲಾ ಮಕ್ಕಳು ಹಿರಿಯರು-ಕಿರಿಯರೊಂದಿಗೆ ೮೩ ವರ್ಷದ ಶಿವಮ್ಮರನ್ನು ಹುಷಾರಿಲ್ಲದಾಗ ಅಲ್ಲದೆ ಬಿಳಿನೆಲೆ ಕಡಬ ಸೇರಿದಂತೆ ಎಲ್ಲಿಗೂ ಹೋಗಬೇಕಾದರೆ ತನ್ನ ಮಗ ಶಾರೀರಿಕ ಶಿಕ್ಷಕ ಚಂದ್ರಶೇಖರರನ್ನು ಅವಲಂಬಿಸಬೇಕಾಗಿದ್ದು ತಾಯಿಯನ್ನು ಚಯರ್‌ನಲ್ಲಿ ಕುಳ್ಳಿರಿಸಿ ಹೊಳೆ ದಾಟಿಸುವಂತಾಹ ಪರಿಸ್ಥಿತಿ ನಿರಂತರವಾಗಿದೆ ಎನ್ನುತ್ತಾರೆ ಶಿವಮ್ಮನವರ ಪುತ್ರ ಚಂದ್ರಶೇಖರ್.

ಬಿಳಿನೆಲೆ ಗ್ರಾಮದ ಪುತ್ತಿಲಬೈಲಡ್ಕ, ಉದ್ಮಯ, ಅಮೈ, ಪರ್ಲತಪಾಲ್, ಪುರಿಕರಗುಡ್ಡೆ,ಅರ್ಗೆನಿ, ನಿವಾಸಿಗಳಾದ, ಚಂದ್ರಶೇಖರ ಅಮೈ, ಮಧುಚಂದ್ರ ಅಮೈ, ನಾಗೇಶ್ ಪರ್ಲತಪಾಲ್, ಚಂದ್ರಶೇಖರ ಪರ್ಲತಪಾಲ್, ಲೋಕೇಶ್ ಪುರಿಕರಗುಡ್ಡೆ, ಅಶೋಕ್ ಬೈಲು, ಪೂವಪ್ಪ ಮೇಸ್ತ್ರೀ ಬೈಲ್, ಪುರಷೋತ್ತಮ ಬೈಲ್, ಕೊರಗಪ್ಪ ಗೌಡ ಅರ್ಗೆನಿ, ಕುಸುಮಾದರ ಅರ್ಗೆನಿ, ಸುನಿಲ್ ಅಮೈ, ರೋಹಿತ್ ಅಮೈ, ಬಾಲಕೃಷ್ಣ ಗೌಡ ಅಮೈ, ಶಿವಪ್ಪ ಗೌಡ ಪರ್ಲತಪಾಲ್, ಶೇಖರ ಗೌಡ ಅಮೈ, ರೋಹಿತ್ ಅರ್ಗೆನಿ, ಈಶ್ವರ ಗೌ ಪುರಿಕರಗುಡ್ಡೆ, ಮೇದಪ್ಪ ಗೌಡ ಅಮೈ, ಚೆನ್ನಪ್ಪ ಗೌಡ ಚಿದ್ಗಲ್, ಜರ್ನಾದನ ಚಿದ್ಗಲ್, ಆನಂದ ಗೌಡ ಚಿದ್ಗಲ್, ದಿನೇಶ್ ಬೈಲ್, ಮೊದಲಾದವರು ಪಾಲದ ಸೇತುವೆಯನ್ನು ನಿರ್ಮಿಸುತ್ತಿದ್ದು ಈ ಊರಿನವರಿಗೆ ಹೊಳೆ ದಾಟಲು ಸಹಕರಿಸಿದರು.

ಕಳೆದ ೧೦ ವರ್ಷಗಳಿಂದ ಬಾಗ್ಯ ಹೊಳಗೆ ಸರ್ವಋತು ಸೇತುವೆಬೇಕೆಂದು ಸಂಬಂದಪಟ್ಟ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಾ ಬರುತ್ತಿದ್ದೇವೆ. ಚುನಾವಣೆ ಸಂದರ್ಭ ಸ್ಥಳಿಯ ನಾಯಕರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ನಮ್ಮ ಊರಿಗೆ ಕರೆತಂದು ಸೇತುವೆ ನಿರ್ಮಾಣದ ಭರವಸೆ ನೀಡಿ ಮತ ಪಡೆದುಕೊಳ್ಳುತ್ತಾರೆ. ಬಳಿಕ ಇತ್ತ ಸುಳಿಯುವುದಿಲ್ಲ. ಶಾಲಾ ವಿದ್ಯಾರ್ಥಿಗಳು , ವೃದ್ದರು ಈ ಪಾಲವನ್ನು ದಾಟುವುದಕ್ಕೆ , ಅನಾರೋಗ್ಯ ಪೀಡಿತರನ್ನು ಕೊಂಡೊಯ್ಯುಲು ಹರಸಾಹಸಪಡಬೇಕಾಗುತ್ತದೆ. ಸಂಬಂದಪಟ್ಟವರು ಇನ್ನಾದರೂ ಈ ಕಡೆ ಗಮನ ಹರಿಸಿ ತಕ್ಷಣ ಸ್ಪಂದಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು –  ಚಂದ್ರಶೇಖರ ಅಮೈ, ಸ್ಥಳಿಯರು

ಈಗಾಗಲೇ ಈ ಭಾಗದ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಇದೇ ಹೊಳೆಯ ಬೊಲೊಳಿ ಎಂಬಲ್ಲಿ ದೀಪದಂತಿದ್ದ ಆ ಭಾಗದ ಜನತೆಗೆ ಸಂಪರ್ಕ ಇಲ್ಲದ ಬೊಲೊಳಿ ಎಂಬಲ್ಲಿ ನಮ್ಮೆಲ್ಲರ ಒತ್ತಾಯದ ಮೇರೆಗೆ ಗ್ರಾ.ಪಂ ಮುಖಾಂತರ ಕರಾವಳಿ ಅಬಿವೃದ್ಧಿ ಪ್ರಾಧಿಕಾರದ ವತಿಯಿಂದ ಅನುದಾನ ಒದಗಿಸಿ ಸೇತುವೆ ನಿರ್ಮಿಸಿದ್ದು ಅದೇ ರೀತಿ ಈ ಭಾಗದಲ್ಲಿ ಕೂಡಾ ಸುಮಾರು ೫೦ಕ್ಕೂ ಹೆಚ್ಚಿನ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಉದ್ಮಯ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಈಗಾಗಲೇ ಮಾನ್ಯ ಶಾಸಕರಲ್ಲಿ ಹಾಗೂ ಸಂಸದರಲ್ಲಿ ವಿನಿಂತಿಸಿಕೊಂಡಿದ್ದು ಇಲ್ಲಿಗೆ ಸೇತುವೆ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ,ಈಗಾಗಲೇ ಲೋಕಸಭಾ ಚುನಾವಣೆಯ ಕಾವು ಮುಗಿದಿದ್ದು ೩ ನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಮ್ಮ ಸಂಸದ ನಳೀನ್ ಕುಮಾರ್ ಕಟೀಲ್‌ರವರು ಖಂಡಿತ ಈ ಸೇತುವೆ ನಿರ್ಮಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ- ವಿಜಯಕುಮಾರ್ ಎರ್ಕ ಅಧ್ಯಕ್ಷರು ಜನಜಾಗೃತಿ ವೇದಿಕೆ ಬಿಳಿನೆಲೆ

ನನ್ನ ಅಜ್ಜನ ಕಾಲದಿಂದಲೇ ಈ ಭಾಗದ ಜನರು ಇದೇ ರೀತಿ ಅಡಿಕೆ ಮರದ ಪಾಲದಿಂದ ದಾಟುತ್ತಿದ್ದು ಇಂದಿಗೂ ಇಲ್ಲಿಯ ಸಮಸ್ಯೆ ಹಾಗೆಯೇ ಇದೆ ಇಂಗ್ಲೀಷರ ಕಾಲದಲ್ಲಿರುವ ಗ್ರಾಮೀಣ ಭಾಗದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ. ಜನಪ್ರತಿನಿದಿಗಳು ಆದಷ್ಟೂ ಗ್ರಾಮೀಣ ಭಾಗಕ್ಕೆ ಒತ್ತು ಕೊಟ್ಟು ಹಳ್ಳಿಯ ಸಮಸ್ಯೆಗಳನ್ನು ನಿವಾರಿಸಬೇಕೆಂಬುದು ನಮ್ಮ ಬಯಕೆಯಾಗಿದೆ –ಗಣಪಯ್ಯ ಗೌಡ ಬೈಲು ಬಿಳಿನೆಲೆ

ಈ ಭಾಗದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದು ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಇನ್ನೊಮ್ಮೆ ಅವರಲಿಗ್ಲೆ ನಿಯೋಗ ಹೋಗಿ ಪ್ರಯತ್ನಿಸಲಾಗುವುದು-  ರಮೇಶ್ ವಾಲ್ತಾಜೆ ಸ್ಥಳೀಯ ಮುಖಂಡ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.