ಕಂಬಳ ಓಟಗಾರ ಸುರೇಶ್ ಶೆಟ್ಟಿ ಹಕ್ಕೇರಿ ಅವರಿಗೆ ನ್ಯೂಸ್ 18 ವತಿಯಿಂದ ಕರಾವಳಿ ರತ್ನ ಪ್ರಶಸ್ತಿ ಪ್ರದಾನ

0


ವೇಣೂರು: ಕಂಬಳ ಓಟದ ಸಾಧನೆಯನ್ನು ಗುರುತಿಸಿ ಆರಂಬೋಡಿ ಗ್ರಾಮದ ಹೊಕ್ಕಾಡಿಗೋಳಿ ಸುರೇಶ್ ಯ೦. ಶೆಟ್ಟಿ ಹಕ್ಕೇರಿ ಅವರಿಗೆ ನ್ಯೂಸ್ 18 ಕನ್ನಡ ವತಿಯಿಂದ ಕರಾವಳಿ ರತ್ನ ಪ್ರಶಸ್ತಿ -2022 ಪ್ರದಾನ ಮಾಡಲಾಯಿತು.

ಕಂಬಳ ಕ್ರೀಡೆಯಲ್ಲಿ ಮಿಂಚಿನ ವೇಗ, ಜೋಡಿ ಕೋಣಗಳನ್ನು ಓಡಿಸಿ ಹೊಸ ಮೈಲುಗಲ್ಲು ಸೃಷ್ಟಿಸಿದ ಇವರ ಸಾಧನೆಯನ್ನು ಗುರುತಿಸಿ ಮಂಗಳೂರಿನ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವರ್ಷನ್ ಸೆಂಟರ್ ಸಭಾಂಗಣದಲ್ಲಿ ಅ. 28ರಂದು ಜರಗಿದ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಡಾ| ವೈ. ಭರತ್ ಶೆಟ್ಟಿ, ನ್ಯೂಸ್ 18 ಕನ್ನಡದ ಪ್ರಮುಖರು, ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ಡಾ। ಎರ್ಮಾಲ್ ರೋಹಿತ್ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here