HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಗಂಡಿಬಾಗಿಲು ಮಸೀದಿಯಲ್ಲಿ ಈದ್-ಉಲ್-ಫಿತರ್

Puttur_Advt_NewsUnder_1
Puttur_Advt_NewsUnder_1

ಇಸ್ಲಾಂನ ಸೌಹಾರ್ದತೆ, ಐಕ್ಯತೆಯ ಸಂದೇಶ ಸ್ಟೇಟಸ್‌ಗೆ ಸೀಮಿತವಾಗದಿರಲಿ-ಅನಸ್ ತಂಙಳ್

ಉಪ್ಪಿನಂಗಡಿ: ಮುಸ್ಲಿಂ ಸಮುದಾಯದ ಅತ್ಯಂತ ಪ್ರಾವಿತ್ರತೆಯ ತಿಂಗಳಲ್ಲಿ ಒಂದಾಗಿರುವ ರಮಳಾನ್ ತಿಂಗಳ ಉಪವಾಸ ವೃತ ಅಂತ್ಯದೊಂದಿಗೆ ಆತ್ಮ ಶುದ್ಧೀಕರಣ ಮತ್ತು ಪರಸ್ಪರ ಸಹೋದತೆ, ಶಾಂತಿ, ಐಕ್ಯತೆಯ ಪ್ರತೀಕದ ಸಂದೇಶದೊಂದಿಗೆ ಆಚರಿಸಲಿರುವ ಪವಿತ್ರ ಈದ್-ಉಲ್-ಫಿತರ್ ಯಾ ಪೆರ್ನಾಳ್ ಹಬ್ಬವನ್ನು ಗಂಡಿಬಾಗಿಲು ಪರಿಸರದ ಮಂದಿ ಸಡಗರ ಸಂಭ್ರಮದೊಂದಿಗೆ ಜೂನ್ ೫ರಂದು ಆಚರಿಸಿದರು.

ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಖತೀಬ್ ಸೆಯ್ಯದ್ ಅನಸ್ ತಂಙಳ್‌ರವರು ಖುತುಬಾ ಪಾರಾಯಣ, ವಿಶೇಷ ನಮಾಜು ಮತ್ತು ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂದೇಶ ನೀಡಿ ಮಾತನಾಡಿ ರಮಳಾನ್ ತಿಂಗಳಿನಲ್ಲಿ ಮಾಡಿರುವ ಪ್ರಾರ್ಥನೆ, ಸತ್ಕರ್ಮಗಳು ಮುಂದಿನ ದಿನಗಳಿಗೆ, ವರ್ಷಪೂರ್ತಿ ಪ್ರೇರಣೆ ಆಗಲಿ ಜೊತೆಗೆ ಇಸ್ಲಾಂನ ಸೌಹಾರ್ದತೆ, ಐಕ್ಯತೆಯ ಸಂದೇಶ ಕೇವಲ ಮೊಬೈಲ್ ಸ್ಟೇಟಸ್‌ಗೆ ಸೀಮಿತವಾಗಿರದೆ ಬಡವರ, ಅನಾಥರ, ಅಸಹಾಯಕತೆ, ಸಂಕಷ್ಟಗಳಲ್ಲಿ ಇರುವವರಿಗೆ ಸಹಾಯ ಹಸ್ತ ನೀಡುವ ಮೂಲಕ ನೈಜ ಮುಸ್ಲಿಂ ಆಗಿ ಬದುಕಲು ಪ್ರೇರಿತವಾಗಲಿ ಎಂದು ಸಂದೇಶ ಸಾರಿದರು.

ಹಬ್ಬದ ದಿನವನ್ನು ಅನಾವಶ್ಯಕ ಖರ್ಚುಗಳೊಂದಿಗೆ ಆಡಂಬರದಲ್ಲಿ ಸಂಭ್ರಮಿಸುವ ಬದಲು ರೋಗಿಗಳ ಸಂಂದರ್ಶನ ಮಾಡಿ ಅವರನ್ನು ಸಂತ್ರಪ್ತಿ ಪಡಿಸುವ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾಗಬೇಕು ಎಂದ ಅವರು ಕುಟುಂಬ ಸಂಬಂಧ ವೃದ್ಧಿಗೆ ಸಮಯ ಮೀಸಲಿಡಬೇಕು ಎಂದರು.

ಹಿರಿಯರು, ಕಿರಿಯರೆನ್ನದೆ ಹೊಸ ಬಟ್ಟೆ ಧರಿಸಿದ ಮುಸ್ಲಿಂ ಬಾಂಧವರು ಹಬ್ಬದ ಸಂಭ್ರಮದಲ್ಲಿ ಮೆರೆದರು. ಮಸೀದಿಯಲ್ಲಿ ನಡೆದ ನಮಾಜು, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಸಾಮೂಹಿಕ ಪ್ರಾರ್ಥನೆ:
ಮಸೀದಿಯಲ್ಲಿ ನಿಗದಿತ ಕಾರ್‍ಯಕ್ರಮಗಳ ಬಳಿಕ ಈಚೆಗೆ ನಿಧನ ಹೊಂದಿದ ಹಿರಿಯ ಧಾರ್ಮಿಕ ವಿದ್ವಾಂಸ ಡಾ. ಕೆ.ಎಂ. ಶಾಹ್ ಮುಸ್ಲಿಯಾರ್ ಅವರ ಮಕ್‌ಬರ ಝಿಯಾರತ್ ಮತ್ತು ಮಸೀದಿ ವ್ಯಾಪ್ತಿಯಲ್ಲಿರುವ ಕಬ್‌ರ್ ಝಿಯಾರತ್ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.