Home_Page_Advt
Home_Page_Advt
Home_Page_Advt

ಕುಡ್ತಮುಗೇರು: ವಿದ್ಯುತ್ ಶಾಕ್ ತಗುಲಿ ಲಾರಿ ಕ್ಲೀನರ್ ಹಾಸನ ಮೂಲದ ದುಶ್ಯಾಂತ್ ಮೃತ್ಯು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೆ.ಎಂ.ಎಫ್ ಫೀಡ್ ಸಾಗಾಟ ಮಾಡುತ್ತಿದ್ದ ಲಾರಿಯ ಕ್ಲೀನರ್ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಜೂ.5ರಂದು ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಪಡಾರು ಜಂಕ್ಷನ್ ನಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಿಂಗಟೆಗೆರೆ ನಿವಾಸಿ ನಿಂಗರಾಜುರವರ ಪುತ್ರ ದುಶ್ಯಾಂತ್ ಮೃತ ದುರ್ದೈವಿಯಾಗಿದ್ದಾರೆ.

ಮಾದಕಟ್ಟೆ ಹಾಲಿನ ಡಿಪ್ಪಗೆ ಕೆ.ಎಂ.ಎಫ್ ಫೀಡ್ ತಂದು ಅಲ್ಲಿ ಸೊಲ್ಪ ಬ್ಯಾಗನ್ನು ಅನ್ಲೋಡ್ ಮಾಡಿ ಬಳಿಕ ಕುಳಾಲುವಿನ ಹಾಲಿನ ಡಿಪ್ಪಕ್ಕೆ ತೆರಳುವ ಸಲುವಾಗಿ ಪಡಾರು ಜಂಕ್ಷನ್ ನಲ್ಲಿ ಲಾರಿಯನ್ನು ನಿಲ್ಲಿಸಿ ಚಾಲಕ ಸ್ಥಳೀಯರೊಂದಿಗೆ ದಾರಿ ಕೇಳುತ್ತಿದ್ದ ವೇಳೆ  ಕ್ಲೀನರ್ ದುಶ್ಯಾಂತ್ ರವರು ಲಾರಿಯ ಕ್ಯಾಬಿನ್ ಮೇಲಿದ್ದ ಅವರ ಶರ್ಟ್ ಅನ್ನು ತೆಗೆಯಲು ಹತ್ತಿದ ವೇಳೆ ಮೇಲ್ಬಾಗದಲ್ಲಿ ಹಾದು ಹೋದ ವಿದ್ಯುತ್ ತಂತಿ ಅವರಿಗೆ ತಗುಲಿದೆ. ವಿದ್ಯುತ್ ಶಾಕ್ ನಿಂದ ಕೆಳೆಕ್ಕೆಸೆಯಲ್ಪಟ್ಟ ದುಶ್ಯಾಂತ್ ರವರು ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.