HomePage_Banner
HomePage_Banner
HomePage_Banner

ಸಾಲ್ಮರದ ಅನಧಿಕೃತ ಬೇಕರಿ ತಯಾರಿ ಘಟಕಕ್ಕೆ ನಗರಸಭೆ ಅಧಿಕಾರಿಗಳಿಂದ ದಾಳಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪರವಾನಿಗೆ ಇಲ್ಲದೆ ಬೇಕರಿ ತಿಂಡಿ ತಯಾರಿಸುತ್ತಿರುವ ಘಟಕವೊಂದಕ್ಕೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಜೂ.4ರಂದು ಸಂಜೆ ಸಾಲ್ಮರದಲ್ಲಿ ನಡೆದಿದೆ.

ಸಾಲ್ಮರ ಮೌಂಟನ್ ವ್ಯೂ ಶಾಲೆಯ ಪಕ್ಕದಲ್ಲೇ ಬಾಡಿಗೆ ಕಟ್ಟಡದಲ್ಲಿರುವ ಜೆ.ಕೆ.ಫುಡ್ ಬೇಕರಿ ಉತ್ಪನ್ನದ ತಯಾರಿಕಾ ಘಟಕಕ್ಕೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದಾಗ ಬೇಕರಿ ತಿಂಡಿಗಳಾದ ಕಾರಕಡ್ಡಿ, ಬೋಟಿ ಸೇರಿದಂತೆ ಇತರ ತಿಂಡಿಗಳನ್ನು ಕಟ್ಟಡದ ಹೊರಗೆ ತೆರೆದ ಸ್ಥಳದಲ್ಲೇ ಶುಚಿತ್ವ ಕಾಯ್ದುಕೊಳ್ಳದೆ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ವಿಚಾರಿಸಿದಾಗ ಘಟಕದ ಮಾಲಕ ತಮಿಳು ಮೂಲದ ಆರ್ ಕುಮಾರ್ ಎಂಬವರು ತಿಂಡಿಗಳನ್ನು ತಯಾರಿಸಿಕೊಂಡು ಕಡಬ, ಸುಳ್ಯ, ಉಪ್ಪಿನಂಗಡಿ ಕಡೆ ವಾಹನದಲ್ಲಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಘಟಕ ನಡೆಸಲು ನಗರಸಭೆಯ ಅನುಮತಿ ಪಡೆಯದ ಮತ್ತು ಶುಚಿತ್ವ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿ ನೋಟೀಸು ನೀಡಿರುವುದಾಗಿ ತಿಳಿದು ಬಂದಿದೆ. ನಗರಸಭೆ ಹಿರಿಯ ಆರೋಗ್ಯಾಧಿಕಾರಿಗಳಾದ ರಾಮಚಂದ್ರ, ಶ್ವೇತಾ ಕಿರಣ್, ನಗರಸಭೆ ಸ್ಥಳೀಯ ಸದಸ್ಯ ರಾಬಿನ್ ತಾವ್ರೋರವರು ಮತ್ತು ನಗರಸಭೆ ಜೀಪು ಚಾಲಕ ರಾಧಾಕೃಷ್ಣ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.