Home_Page_Advt
Home_Page_Advt
Home_Page_Advt

ಕುಂಜೂರು ಪಂಜ ಅನುದಾನಿತ ಹಿ. ಪ್ರಾ.ಶಾಲಾ ಪ್ರಾರಂಭೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಅ.ಹಿ.ಪ್ರಾ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ಪೋಷಕ ವೃಂದ ಮತ್ತು ಶಾಲಾ ಶಿಕ್ಷಕ ವೃಂದದವರಿಂದ ಸ್ವಾಗತ ಕಾರ್ಯಕ್ರಮವು ಜೂ.3 ರಂದು ಬೆಳಿಗ್ಗೆ ನಡೆಯಿತು. ಶಾಲಾ ಸಂಚಾಲಕರಾದ ಪ್ರಭಾಕರ ಕಲ್ಲೂರಾಯರವರ ನೇತೃತ್ವದಲ್ಲಿ ಶಾಲಾ ವರ್ಷದ ರೀತಿ ರಿವಾಜುಗಳನ್ನು ಪ್ರಸ್ತಾಪಿಸಲಾಯಿತು. ಈ ಸಂದರ್ಭದಲ್ಲಿ ಆರ್ಯಾಪು ಗ್ರಾ.ಪಂ ಸದಸ್ಯೆ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸರಸ್ವತಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಪೂವಪ್ಪ ನಾಯ್ಕ, ಆಡಳಿತ ಕಮಿಟಿಯ ಸದಸ್ಯರಾದ ಇಸ್ಮಾಯಿಲ್, ಶ್ರೀಧರ್ ನಾಯಕ್, ಮುಖ್ಯ ಗುರು ಉದಯ ಕುಮಾರ್, ಸಹಶಿಕ್ಷಕಿ ರಂಜಿನಿ ಎಂ ಮತ್ತು ಶಿಕ್ಷಕಿ ವೃಂದ ಹಾಗೂ ಪೋಷಕವೃಂದದವರು ಉಪಸ್ಥಿತರಿದ್ದರು.

ಮುಖ್ಯಗುರುಗಳಾದ ಉದಯ ಕುಮಾರ್ ಸ್ವಾಗತಿಸಿ, ಸಹಶಿಕ್ಷಕಿ ರಂಜಿನಿ ಎಂ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮತ್ತು ಶಾಲಾನಾಯಕಿ ಆಯ್ಕೆಯ ಪರವಾಗಿ ಸಿಹಿತಿಂಡಿ ಮತ್ತು ಮಾಲ್ಟ್ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.