HomePage_Banner
HomePage_Banner
HomePage_Banner

ಮರಾಟಿ ಯುವ ವೇದಿಕೆಯಿಂದ ಸಾಜ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ವಿತರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಇದರ ವತಿಯಿಂದ ಸಾಜ ಸರಕಾರಿ ಹಿ.ಪ್ರಾ.ಶಾಲೆಗೆ ಬರೆಯುವ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ಜೂ. 4ರಂದು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮರಾಟಿ ಯುವ ವೇದಿಕೆಯ ಗೌರವಾಧ್ಯಕ್ಷರಾದ ಗಿರೀಶ್ ನಾಯ್ಕ ಸೊರಕೆಯವರು, ಮರಾಟಿ ಯುವ ವೇದಿಕೆ 2013-14ರಲ್ಲಿ ಪ್ರಾರಂಭಗೊಂಡಿದ್ದು, ಕಳೆದ 3 ವರ್ಷಗಳಿಂದ ಸಮಾಜ ಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷೆ ಅನುರಾಧ ನಾಯ್ಕ ಸರಳಿಕಾನ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮರಾಟಿ ಯುವ ವೇದಿಕೆಯ ಗೌರವ ಸಲಹೆಗಾರ ಧನಂಜಯ ನಾಯ್ಕ ಕಂಞಿಕುಮೇರು, ಅಧ್ಯಕ್ಷ ಸಂದೀಪ್ ನಾಯ್ಕ ಆರ್ಯಾಪು, ಕಾರ್ಯದರ್ಶಿ ಗೋಪಾಲ ನಾಯ್ಕ ದೊಡ್ಡಡ್ಕ, ನಿಕಟಪೂರ್ವ ಅಧ್ಯಕ್ಷ ಅಶೋಕ ನಾಯ್ಕ ಸೊರಕೆ, ವಿದ್ಯಾರ್ಥಿ ವೇದಿಕೆಯ ಅನುಶ್ರೀ ಸಾಮೆತ್ತಡ್ಕ, ಸಂಘಟನಾ ಕಾರ್ಯದರ್ಶಿಗಳಾದ ದಿನೇಶ್ ಸಿಟಿಗುಡ್ಡೆ, ದಿವ್ಯ ಮೇಗಿನಪಂಜ, ಮಮತಾ ಆಜೇರು, ಕ್ರೀಡಾ ಕಾರ್ಯದರ್ಶಿ ರಾಜೇಶ್ ನಾಯ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.