ವಲಯ ಮಟ್ಟದ ಕ್ರೀಡಾಕೂಟ,: ಮರಿಯಾಂಬಿಕ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಬೆದ್ರಬೆಟ್ಟು,: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಉಜಿರೆಯ ರತ್ನವರ್ಮ ಹೆಗ್ಡೆ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಗೊಂಡಿರುತ್ತಾರೆ.

ಫಲಿತಾಂಶ ಪ್ರಾಥಮಿಕ ವಿಭಾಗ,: ಹುಡುಗರು-600ಮೀ.ಓಟ ಮಹಮ್ಮದ್ ಹರ್ಷ್(6ನೇ) ತೃತೀಯ, 400 ಮೀ.ಓಟ ತೃತೀಯ, ಗುಂಡೆಸೆತ,: ಹೇಮಂತ್ (7ನೇ) ತೃತೀಯ. ಹುಡುಗಿಯರ ವಿಭಾಗ: 600ಮೀ.ಓಟ ಶ್ರದ್ಧಾ(7ನೇ) ಪ್ರಥಮ, 400ಮೀ.ಓಟ ದ್ವಿತೀಯ, 600ಮೀ.ಓಟ ತೃಷ (6ನೇ) ತೃತೀಯ ಸ್ಥಾನ, ಎತ್ತರ ಜಿಗಿತ: ಆಯಿಷಾತ್ ಆಫಿಯಾ(7ನೇ). ಪ್ರೌಢಶಾಲಾ ವಿಭಾಗ: ಗುಂಡೆಸೆ ತ: ಅಲೋನಾ ಫ್ರಾನ್ಸಿಸ್ (8ನೇ) ಪ್ರಥಮ, ಹಲೀಮ ಹೈಫಾ(8ನೇ) ತೃತೀಯ, ಎತ್ತರ ಜಿಗಿತ: ಶಮಿಮ(8ನೇ) ದ್ವಿತೀಯ, ಡಿಸ್ಕಸ್ ತ್ರೋ: ಫಾತಿಮಾತ್ ಸಲ್ವ(10ನೇ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here