Home_Page_Advt
Home_Page_Advt
Home_Page_Advt

ಕಾಯರಡ್ಕ- ಪೇರಡ್ಕ ರಸ್ತೆಗೆ ಕಾಯಕಲ್ಪ – ಸುದ್ದಿ ಪತ್ರಿಕಾ ವರದಿ ಪಲಶ್ರುತಿ

Puttur_Advt_NewsUnder_1
Puttur_Advt_NewsUnder_1

ಕಡಬ : ಕಾಯರಡ್ಕ-ಪೇರಡ್ಕ ರಸ್ತೆಯು ಕಳೆದ 30 ವರ್ಷಗಳ ಹಿಂದೆ ಜಿ.ಪರಿಷತ್‌ನಿಂದ ಡಾಮರೀಕರಣವಾಗಿದ್ದು ನಂತರ ಈ ರಸ್ತೆ ಡಾಮರು ಕಾಣದೆ ನಾದುರಸ್ತಿಯಲ್ಲಿದೆ ಈಗ ಮತ್ತೆ ಡಾಮರೀಕರಣ ನಡೆಯುತ್ತಿದ್ದು ರಸ್ತೆಗೆ ಕಾಯಕಲ್ಪ ನೀಡಲಾಗುತ್ತಿದೆ. ರಸ್ತೆಯ ಡಾಮರೆಲ್ಲ ಎದ್ದು ಹೋಗಿ ಮಳೆಗಾಲದಲ್ಲಿ ಕೆಸರು ಗುಂಡಿ, ಬೇಸಿಗೆ ಕಾಲದಲ್ಲಿ ದೂಳುಮಯವಾಗಿದ್ದು ಪ್ರಯಾಣಿಕರು ನರಕಯಾಥನೆ ಪಡುತ್ತಿದ್ದಾರೆ. ಕಡಬ- ನೂಜಿಬಾಳ್ತಿಲ ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ಈ ಕಾಯರಡ್ಕ- ಪೇರಡ್ಕ ರಸ್ತೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ 2 ಕಿ.ಮಿ ಡಾಮರೀಕರಣಕ್ಕೆ 4 ಕೋಟಿ ಮಂಜೂರಾಗಿದ್ದು ಈಗಾಗಲೇ 50 ಲಕ್ಷ ಬಿಡುಗಡೆಗೊಂಡಿದ್ದು ಕಾಯರಡ್ಕ ಜಂಕ್ಷನ್‌ನಿಂದ ಮುಂದಕ್ಕೆ ಡಾಮರೀಕರಣಗೊಳ್ಳುತ್ತಿದ್ದರೆ, ಕುಟ್ರುಪ್ಪಾಡಿ ಚರ್ಚ್ ಬಳಿಯಿಂದ ಪೇರಡ್ಕದವರೆಗೆ ಸುಮಾರು 545 ಮೀಟರ್ ರಸ್ತೆ ಕಾಂಕ್ರೀಟಿಕರಣಗೊಳಿಸಲಾಗುತ್ತಿದ್ದು ಮಳೆಹಾನಿ ಯೋಜನೆಯಲ್ಲಿ 19 ಲಕ್ಷ ಬಿಡುಗಡೆಗೊಂಡಿದ್ದು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ರೂ 19 ಲಕ್ಷದಲ್ಲಿ ಪೂರ್ತಿ 545 ಮೀಟರ್ ಕಾಂಕ್ರೀಟಿಕರಣ ಮಾಡಲಾಗದೆ 340 ಮೀಟರ್ ಕಾಂಕ್ರೀಟಿಕರಣಗೊಳ್ಳುತ್ತಿದ್ದು ಇನ್ನು 180 ಮೀಟರ್ ಉಳಿಯಲಿದ್ದು ಈ ರಸ್ತೆ ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್  ಜಿಲ್ಲಾ ಪಂಚಾಯತ್ ಅನುದಾನ ನೀಡುವುದಾಗಿ ತಿಳಿಸಿದ್ದು ಕಾಯರಡ್ಕದಿಂದ ಪೇರಡ್ಕವರೆಗೆ ಸಂಪೂರ್ಣ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಸಂಕಟಕೀಡಾಗುತ್ತಿದ್ದು ಈ ಭಾಗದ ಪ್ರಯಾಣಿಕರು ಹೋರಾಟ, ಪ್ರತಿಭಟನೆ, ನಡೆಸಿ ಸಂಬಂದಪಟ್ಟ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬರುತ್ತಿದ್ದು ಮಾಧ್ಯಮಗಳಲ್ಲಿ ಈ ರಸ್ತೆಯ ಸಚಿತ್ರ ವರದಿ ಆಗಾಗ ಬರುತ್ತಿದ್ದರೂ ರಸ್ತೆ ದುರಸ್ತಿಯಾಗದೆ ಈ ರಸ್ತೆಗೆ ಕಾಯಕಲ್ಪವೆಂದು ಜನರು ಕಾಯುತ್ತಿದ್ದರು. ಕಡಬ ತಾಲೂಕನ್ನು ಸಂಪರ್ಕಿಸುವ ಅತೀ ಹತ್ತಿರದ ರಸ್ತೆ ಇದಾಗಿದ್ದು ರಿಂಗ್ ರಸ್ತೆಯಾಗಿ ಚತುರ್ಪಥ ರಸ್ತೆಯಾಗಬೇಕಿದ್ದರೂ ಸದ್ಯಕ್ಕೆ ಡಾಮರೀಕರಣ ಹಾಗೂ ಕಾಂಕ್ರೀಟಿಕರಣಗೊಂಡು ಪ್ರಯಾಣಿಕರು ನಿಟ್ಟುಸಿರು ಬಿಟ್ಟು ತಮ್ಮ ವಾಹನದಲ್ಲಿ ನಿರಾಳವಾಗಿ ಪ್ರಯಾಣಿಸಿರುವಂತೆ ಆಗುತ್ತಿರುವುದು ಈ ಭಾಗದ ಜನರ ಸೌಭಾಗ್ಯವೆಂದೇ ಹೇಳಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.