ಉಜಿರೆ “ಬದುಕು ಕಟ್ಟೋಣ ಬನ್ನಿ” ತಂಡಕ್ಕೆ ರಾಜ್ಯೋತ್ಸವ ಪ್ರಶಸ್ತಿ

0

ಬೆಳ್ತಂಗಡಿ: 2019ರಲ್ಲಿ ಬೆಳ್ತಂಗಡಿ ತಾಲಕಿನಾದ್ಯಂತ ಸುರಿದ ಭಾರಿ ಮಳೆಗೆ ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ಕೃಷಿ, ಮನೆ ಮಠ ಕಳೆದು ಕೊಂಡು ಆನೇಕ ಕುಟುಂಬ ಸಮೇತರಾಗಿ ಬೀದಿಪಾಲು ಆಗುವ ಸಂದರ್ಭದಲ್ಲಿ ನಿಮೊಂದಿಗೆ ನಾವಿದ್ದೇವೆ ಎಂಬ ಸಂಕಲ್ಪ ತೊಟ್ಟು ಕೊಳಂಬೇ ಮರುನಿರ್ಮಾಣ ಮಾಡಲೂ ಹುಟ್ಟಿಕೊಂಡ ಸಂಸ್ಥೆ ಬದುಕು ಕಟ್ಟೋಣ ತಂಡ. ಉಜಿರೆ ಶ್ರೀ ಲಕ್ಷ್ಮೀ ಗ್ರೂಪ್ ನ ಮಾಲಕ ಮೋಹನ್ ಕುಮಾರ್ ನೇತ್ರತ್ವದಲ್ಲಿ ಹುಟ್ಟಿ ಕೊಂಡ ಸಂಸ್ಥೆ. ಸುಮಾರು 600ಸದಸ್ಯ ರುಗಳೊಂದಿಗೆ ಕೊಳಂಬೆ, ಕೊರೋನ ಕೋವಿಡ್ ಸಂದರ್ಭದಲ್ಲಿ ಬಡವರ ಪಾಲಿಗೆ ಬೆಳಕಾದ ಸಂಸ್ಥೆ ಈ ಭಾರಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಬೆಳ್ತಂಗಡಿ ತಾಲೂಕಿನ ನಾದ್ಯಂತ ಕೊಲಂಬೆಯಲ್ಲಿ ನೂತನ ಗ್ರಹ ನಿರ್ಮಾಣ, ಕಲ್ಮಂಜದಲ್ಲಿ ಸುಮಾರು 60ಎಕ್ರೆ ನೇಜಿ ನಾಟಿ ಕಾರ್ಯಕ್ರಮ, ಕಳೆಂಜ ಗೋಶಾಲೆ ಯಲ್ಲಿ ಗೋವಿಗಾಗಿ ಮೇವು, ಜಮಾಲಾಬಾದ್ ಕೋಟೆ ಬಳಿ ಸಾವಿರ ವೃಕ್ಷ ಅಭಿಯಾನ, ಸರ್ಕಾರಿ ಶಾಲೆ ಸುಣ್ಣ ಬಣ್ಣ, ಪೋಷಕರಿಲ್ಲದ ಮಕ್ಕಳಿಗೆ ದತ್ತು ಸ್ವೀಕಾರ ಮತ್ತು ಮನೆ ನಿರ್ಮಾಣ, ಕೊವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಿಗೆ ವಾಹನ ವ್ಯವಸ್ಥೆ, ಈಗೆ ಹಲವು ಸಮಾಜ ಮುಖಿ ಕಾರ್ಯಕ್ರಮಕ್ಕೇ ಸಂದ ಗೌರವವಾಗಿದೆ.

LEAVE A REPLY

Please enter your comment!
Please enter your name here