HomePage_Banner
HomePage_Banner
HomePage_Banner

ವಿಟ್ಲ ಪರಿಸರದಲ್ಲಿ ಸಂಭ್ರಮದ ಈದುಲ್ ಫಿತ್ರ್

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಪರಿಸರದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರದಿಂದ ಜೂ.5ರಂದು ಆಚರಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಸಂದೇಶ ನೀಡಿದ ಅವರು ಶಾಂತಿ-ಸೌಹಾರ್ದತೆ ಸಾರುವುದೇ ಈದುಲ್ ಫಿತ್ರ್ ಹಬ್ಬದ ಸಂದೇಶವಾಗಿದೆ. ದಾನ ಧರ್ಮಗಳ ಮೂಲಕ ಹಬ್ಬಗಳನ್ನು ಆಚರಿಸಬೇಕು. ಹಬ್ಬದ ಸಡಗರದಲ್ಲಿ ಧರ್ಮದ ಚೌಕಟ್ಟನ್ನು ಮೀರಬಾರದು. ಹಬ್ಬದ ಸಡಗರವೇ ದೇವರ ಸ್ಮರಣೆಯಿಂದ ಕೂಡಿರಬೇಕು. ದೇವರ ಭಕ್ತಿಯಲ್ಲಿ ಹಬ್ಬವನ್ನು ಆಚರಿಸಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮನಸ್ಸು ಪೂರ್ತಿ ದೇವರ ಸ್ಮರಣೆ ಮಾಡಬೇಕು. ಪವಿತ್ರ ರಂಮ್ಜಾನ್ ತಿಂಗಳಿನಲ್ಲಿ ಬಡವರನ್ನು ಗುರುತಿಸುವ ಕೆಲಸ ನಡೆಯಬೇಕು. ಅವರ ಕಷ್ಟಗಳಿಗೆ ನಿರಂತರ ಸ್ಪಂದಿಸುವ ಕಾರ್ಯ ನಡೆಯಬೇಕು ಎಂದರು.

ವಿಟ್ಲದ ಅಶ್ ಅರಿಯ್ಯ ಟೌನ್ ಮಸೀದಿಯಲ್ಲಿ ಖತೀಬು ಅಬ್ಬಾಸ್ ಮದನಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಸಂದೇಶ ನೀಡಿದ ಅವರು ಈದುಲ್ ಫಿತ್ರ್ ಮುಸ್ಲಿಂ ಬಾಂಧವರಿಗೆ ಸಂತೋಷ ಹಾಗೂ ನೆಮ್ಮದಿಯಿಂದ ಆಚರಿಸುವ ಹಬ್ಬವಾಗಿದೆ. ಐಕ್ಯತೆ, ಶಾಂತಿಯಿಂದ ನಾವು ಜೀವಿಸಬೇಕು ಹೊರತು ಅಶಾಂತಿ ಉಂಟು ಮಾಡುವ ಮೂಲಕ ಜೀವಿಸಬಾರದು. ಅದನ್ನು ದೇವರು ಮೆಚ್ಚುವುದಿಲ್ಲ ಎಂದು ಹೇಳಿದರು.

ಅದೇ ರೀತಿ ವಿಟ್ಲ ವಿವಿಧ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಿದರು. ನಮಾಜ್‌ಗಿಂತ ಮೊದಲು ಬಡವರಿಗೆ ಫಿತ್ರ್ ಝಕಾತ್ ನೀಡಿದರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿವಿಧ ಮನೆಗಳಿಗೆ ತೆರಳಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.