ಹೊಸಂಗಡಿಯಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ

0

ಹೊಸಂಗಡಿ :ಇನ್ನರ್ ವೀಲ್ ಕ್ಲಬ್ ಮೂಡಬಿದಿರೆ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಹೊಸಂಗಡಿ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮೂಡಬಿದಿರೆ, ರೋಟರಿ ಕ್ಲಬ್ ಲೋರಟೊ ಹಿಲ್ಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಆಸರೆ ಸಂಜೀವಿನಿ ಒಕ್ಕೂಟ, ಪ್ರಾಥಮಿಕ ಆರೋಗ್ಯ ಕೇಂದ್ರ ವೇಣೂರು ಇವರ ಸಹಯೋಗದೊಂದಿಗೆ. ಎ ಜೆ ಹಾಸ್ಪಿಟಲ್ ಮಂಗಳೂರು ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ವತಿಯಿಂದ ಕ್ಯಾನ್ಸರ್ ಜಾಗೃತಿ ಮತ್ತು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಧುಮೇಹ, ರಕ್ತದ ಒತ್ತಡ ಮತ್ತು ಹೃದ್ರೋಗ ತಪಾಸಣಾ ಶಿಬಿರ ಅ.30 ರಂದು ಪೆರಿಂಜೆ ಸಂತೃಪ್ತಿ ಸಭಾಭವನದಲ್ಲಿ ನಡೆಯಿತು.

ಪಡ್ಯಾರಬೆಟ್ಟ ಕ್ಷೇತ್ರದ ಧರ್ಮದರ್ಶಿ ಎ.ಜೀವಂಧರ್ ಕುಮಾರ್ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ  ರಮ್ಯ ವಿಕಾಸ್ ಜೈನ್ ವಹಿಸಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅಥಿತಿಗಳಾಗಿ ಹೊಸಂಗಡಿ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ, ಇನ್ನರ್ ವೀಲ್ ಕ್ಲಬ್ 318 ಜಿಲ್ಲೆಯ ಮಾಜಿ ಅಧ್ಯಕ್ಷ ಶಾಲಿನಿ ಹರೀಶ್ ನಾಯಕ್, ರೋಟರಿ ಜಿಲ್ಲೆ 3181 ಝೋನ್ 4 ರ ವಲಯ ಸೇನಾನಿ ರೋ. ರಾಘವೇಂದ್ರ ಭಟ್, ಇನ್ನರ್ ವೀಲ್ ಮೂಡಬಿದಿರೆ ಇದರ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ರೋಟರಿ ಕ್ಲಬ್ ಮೂಡಬಿದ್ರೆ ಅಧ್ಯಕ್ಷ ರೋ.ಮಹಮ್ಮದ್ ಆರಿಫ್, ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್ ಅಧ್ಯಕ್ಷೆ ರೋ.ಶೃತಿ ಮಾಡ್ತ, ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹರಿಪ್ರಸಾದ್ ಪಿ,ಆಸರೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಶಂಕರ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯೋಜಕಿ ಶ್ರೀಮತಿ ಶೈಲ ಲೋಬೋ ಭಾಗವಹಿಸಿದ್ದರು, ಎ. ಜೆ. ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ವೈದ್ಯೆ ಡಾ.ಕವಿತಾ ಕ್ಯಾನ್ಸರ್ ಖಾಯಿಲೆ ಯ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು..ಸುಕನ್ಯಾ ಪ್ರಾರ್ಥಿಸಿದರು…ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಅಧ್ಯಕ್ಷ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹರಿಪ್ರಸಾದ್ ಧನ್ಯವಾದ ಸಲ್ಲಿಸಿದರು.

ಶಿಬಿರದಲ್ಲಿ ಇನ್ನರ್ ವೀಲ್ ಕ್ಲಬ್, ರೋಟರಿ ಕ್ಲಬ್, ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥತರಿದ್ದರು.

ಹೊಸಂಗಡಿ ಮತ್ತು ಆರಂಬೋಡಿ ಪಂಚಾಯತ್ ಗಳ ಸಮುದಾಯ ಆರೋಗ್ಯ ಅಧಿಕಾರಿಗಳು ರಕ್ತದ ಒತ್ತಡ, ಮಧುಮೇಹ ಮತ್ತು ಹೃದ್ರೋಗ ತಪಾಸಣೆಯನ್ನು ನಡೆಸಿಕೊಟ್ಟರ.ಶಿಬಿರದಲ್ಲಿ ಸುಮಾರು 150 ರಷ್ಟು ನಾಗರಿಕ ರ ಪರೀಕ್ಷೆ ನಡೆಸಲಾಯಿತು.

LEAVE A REPLY

Please enter your comment!
Please enter your name here