ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಮೇಳ “ಅಕ್ಷರೋತ್ಸವ ಸಂಭ್ರಮ”- ಹತ್ತು ಮಂದಿ ಸಾಧಕರಿಗೆ ಗೌರವಾರ್ಪಣೆ

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ವತಿಯಿಂದ ಅ.30 ರಂದು ರಾಜ್ಯ ಮಟ್ಟದ ಸಾಹಿತ್ಯ ಮೇಳ ‘ಅಕ್ಷರೋತ್ಸವ-2022’ ಎಂಬ ವಿನೂತನ ಕಾರ್ಯಕ್ರಮ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದದಲ್ಲಿ ಮಹಾಕವಿ ಪಂಪ-ವೇದಿಕೆಯ ಡಾ.ಕೆ ಶಿವರಾಮಕಾರಂತ-ಸಭಾಂಗಣದಲ್ಲಿ
ವಿಜೃಂಭಣೆಯಿಂದ ಜರುಗಿತು.

ಅ.30 ರಂದು ನಡೆದ ರಾಜ್ಯ ಮಟ್ಟದ ಸಾಹಿತ್ಯ ಮೇಳದಲ್ಲಿ ಬೆಳಗ್ಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ಜೋಸೆಫ್ ಎನ್.ಎಂ ರಾಷ್ಟ್ರ ಧ್ವಜಾರೋಹಣ, ಕನ್ನಡ ಧ್ವಜಾರೋಹಣವನ್ನು ಪುಂಜಾಲಕಟ್ಟೆ ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎ ಶರತ್ ಕುಮಾರ್ ನೆರವೇರಿಸಿದರು.

ಕಾಲೇಜು ಧ್ವಜಾರೋಹಣವನ್ನು ಶ್ರೀ ಗುರುದೇವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಜಾತ ನೆರವೇರಿಸಿದರು . ಅಕ್ಷರೋತ್ಸವ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಕುವೆಂಪು ಭಾಷಾ ಪ್ರಾಧಿಕಾರ ಬೆಂಗಳೂರಿನ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ನೆರವೇರಿಸಿದರು.

ಉಜಿರೆ ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ ‘ಅಕ್ಷರೋತ್ಸವ ಕವಿತೆಗಳು’ ಭಾಗ-೧ನ್ನು ಲೋಕಾರ್ಪಣೆ ಮಾಡಿದರು. ‘ಕಾವ್ಯಯಾನ’ ಕವನ ಸಂಕಲನವನ್ನು ಶ್ರೀ ಎಸ್.ಡಿ.ಎಂ ವಿದ್ಯಾಲಯದ ವಿಶ್ರಾಂತ ಕುಲ ಸಚಿವ ಡಾ. ಬಿ.ಪಿ ಸಂಪತ್ ಕುಮಾರ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಪ್ರಾಧ್ಯಾಪಕ ಕೇಶವ ಬಂಗೇರ ಭಾಗವಹಿಸಿದ್ದರು.. ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಉದ್ಯಮಿ ಶಮಂತ್ ಕುಮಾರ್ ಜೈನ್, ಕಾಲೇಜಿ ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ಭಾಗವಹಿಸಿದ್ದರು.

ಬಳಿಕ ನವಮಾಧ್ಯಮ-ಭಾಷೆ ಮತ್ತು ಸಾಹಿತ್ಯದ ಭವಿಷ್ಯ ಎಂಬ ವಿಷಯದಲ್ಲಿ ಖ್ಯಾತ ಸಾಹಿತಿ ಡಾ. ನರೇಂದ್ರ ರೈ ದೆರ್ಲ ಉಪವಾಸ ನೀಡಿದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

10 ಮಂದಿ ಸಾಧಕರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆ:

ಸಮಾರಂಭದಲ್ಲಿ 10 ಮಂದಿ ಸಾಧಕರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಣೆಯನ್ನು ಮಾಡಲಾಯಿತು. ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಪ್ರೊ. ನಾಗರಾಜ ಪೂವಣಿ, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಎಚ್.ಜಿ ಶ್ರೀಧರ್, ಸಂಶೋಧನಾ ಕ್ಷೇತ್ರದಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳದ ಡಾ. ತುಕರಾಮ ಪೂಜಾರಿ, ಪುಸ್ತಕ ಪ್ರಕಾಶನದಲ್ಲಿ ಸೃಷ್ಠಿ ಪ್ರಕಾಶನ ಮೈಸೂರಿನ ಸೃಷ್ಟಿ ನಾಗೇಶ, ಅಭಿಯಂತರ ಸಾಧಕ ಡಾ.ಶಿವಪ್ರಸಾದ್ ಕಾರ್ಕಳ, ಯಕ್ಷಗಾನ ಕ್ಷೇತ್ರದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಚಲನಚಿತ್ರ ಕ್ಷೇತ್ರದಲ್ಲಿ ನಟ ಪ್ರಕಾಶ್ ತೂಮಿನಾಡು, ಕನ್ನಡ ಪ್ರೀತಿಯ ಅಧಿಕಾರಿ ನಳಿನಿ ಐ.ಬಿ ಗ್ರಂಥಾಲಯ ಅಧಿಕಾರಿ ಉಡುಪಿ, ಅನ್ನತ ಎಚ್. ಧನಕೀರ್ತಿ ಬಲಿಪ ಮೂಡಬಿದ್ರೆ, ದೈವ ನರ್ತಕ ಅಶೋಕ್ ಬೊಳಂಬಾರ್ ಬಂಟ್ವಾಳ ಇವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಎಂ. ಪಿ ಶ್ರೀನಾಥ್, ತಾಲೂಕು ಅಧ್ಯಕ್ಷ ಯದುಪತಿ ಗೌಡ ಭಾಗವಹಿಸಿದ್ದರು, ಬೆಳ್ತಂಗಡಿ ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.

LEAVE A REPLY

Please enter your comment!
Please enter your name here