ತಾಲೂಕಿನ ಇಬ್ಬರಿಗೆ ಹಾಗೂ ಒಂದು ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ: 4 ಮಂದಿ ಸಾಧಕರಿಗೆ ಮತ್ತು 1 ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ರಾಜ್ಯೋತ್ಸವ ಪ್ರಶಸ್ತಿ:

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಇಬ್ಬರು ಸಾಧಕರಿಗೆ ಹಾಗೂ ಸಮಾಜ ಸೇವೆ ಗೈಯುತ್ತಿರುವ ಒಂದು ಸಂಸ್ಥೆಗೆ 2022-23ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಎಲ್ ಹೆಚ್ ಮಂಜುನಾಥ್ ಇವರಿಗೆ ಆಡಳಿತ ನಿರ್ವಹಣೆಗಾಗಿ ಮತ್ತು ನೃತ್ಯ ಕ್ಷೇತ್ರದಲ್ಲಿ ಕಮಲಾಕ್ಷ ಆಚಾರ್ ರವರಿಗೆ ಹಾಗೂ ಸಮಾಜಸೇವೆ ಗೈಯುತ್ತಿರುವ ಯುವವಾಹಿನಿ ಘಟಕಕ್ಕೆ ರಾಜ್ಯೋ ತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2022-23ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ:

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2022-23ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಬೆಳ್ತಂಗಡಿ ತಾಲೂಕಿನ 4 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

ಗುಂಡೂರಿನ ಶ್ರೀ ಗುರುಚೈತನ್ಯ ಸೇವಾಶ್ರಮದ ಮೂಲಕ ಸಮಾಜ ಸೇವೆ ಗೈಯುತ್ತಿರುವ  ಹೊನ್ನಯ್ಯ ಕುಲಾಲ್ ,  ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ಕರಕುಶಲ ಕಲೆಯಲ್ಲಿ ಸಾಧನೆಗೈದ ಪದ್ಮ ಮಲೆಕುಡಿಯ, ಯಕ್ಷಗಾನದಲ್ಲಿ ಹಾಸ್ಯ ಕಲಾವಿದ ಉಜಿರೆಯ  ಕೆ ನಾರಾಯಣ ಪೂಜಾರಿ ಹಾಗೂ ಸಮಾಜ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬದುಕುಕಟ್ಟೋಣ ಬನ್ನಿ ತಂಡ ಉಜಿರೆ  ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2022-23ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ನ.1 ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 

 

LEAVE A REPLY

Please enter your comment!
Please enter your name here