Home_Page_Advt
Home_Page_Advt
Home_Page_Advt

ಮುರದಲ್ಲಿ ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಭೂಮಿ ತಾಯಿ ಆರೋಗ್ಯದಿಂದಿದ್ದರೆ ನಮಗೂ ಆರೋಗ್ಯ – ಸತೀಶ್ ಶೆಟ್ಟಿ
  • ಗಿಡಗಳನ್ನು ನೆಟ್ಟು ಉಳಿಸಿಕೊಳ್ಳಿ- ದಿವ್ಯಾ ಪುರುಷೋತ್ತಮ್
  • ಪ್ರಕೃತಿಯ ಸಮತೋಲನ ಉಳಿಸುವ ಜವಾಬ್ದಾರಿ- ವಿದ್ಯಾ ರಾಣಿ

ಪುತ್ತೂರು: ಪ್ರಕೃತಿಯನ್ನು ಉಳಿಸುವ ಮಹತ್ತರ ಜವಾಬ್ದಾರಿ ಮನುಷ್ಯನಿಗಿದೆ ನಮಗಿದೆ. ಆ ಹೊಣೆಗಾರಿಕೆಯನ್ನು ತಳ್ಳಿ ಹಾಕಿದರೆ ಗಾಳಿಯನ್ನೂ ದುಡ್ಡುಕೊಟ್ಟು ತರಬೇಕಾದ ಪರಿಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಭೂಮಿ ತಾಯಿ ಆರೋಗ್ಯದಿಂದಿದ್ದರೆ ನಮಗೂ ಆರೋಗ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು, ಸಾಮಾಜಿಕ ಅರಣ್ಯ ವಲಯ ಪುತ್ತೂರು ವತಿಯಿಂದ ಕಬಕ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಜೂ.5ರಂದು ಮುರ ಗೌಡ ಸಮುದಾಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಸ್ತುತ ಮಳೆ ದೂರವಾಗುತ್ತಿರುವ ಸಂದರ್ಭದಲ್ಲಿ ಆದಷ್ಟು ಪ್ರಕೃತಿಯನ್ನು ಉಳಿಸುವ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಮ್ಮದು ಎಂದು ಅವರು ಹೇಳಿದರು.

ಗಿಡಗಳನ್ನು ನೆಟ್ಟು ಉಳಿಸಿಕೊಳ್ಳಿ:
ತಾ.ಪಂ.ಸದಸ್ಯೆ ದಿವ್ಯಾ ಪುರುಷೋತ್ತಮ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಭೆಯಲ್ಲಿ ಮಾತನಾಡಿ, ಪ್ರಕೃತಿ ಸಹಜವಾಗಿ ಬೆಳೆದ ಮರಗಳನ್ನು ಉಳಿಸುವ ಪ್ರಕ್ರಿಯೆ ನಮ್ಮಿಂದ ಆಗಬೇಕು. ಇದರ ಜೊತೆ ನಾವೂ ಕೂಡಾ ಗಿಡಗಳನ್ನು ನೆಟ್ಟು ಉಳಿಸುವ, ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕು ಎಂದು ಅವರು ಹೇಳಿದರು.

ಪ್ರಕೃತಿಯ ಸಮತೋಲನ ಉಳಿಸುವ ಜವಾಬ್ದಾರಿ:
ಸಸಿ ವಿತರಿಸಿದ ಪುತ್ತೂರು ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾತನಾಡಿ, ಈ ಬಾರಿ ವಿಶ್ವಸಂಸ್ಥೆಯು ವಾಯು ಮಾಲಿನ್ಯ ಹೋಗಲಾಡಿಸೋಣ ಎಂಬ ಧ್ಯೇಯದೊಂದಿಗೆ ಪರಿಸರ ದಿನವನ್ನು ಆಚರಣೆ ಮಾಡುತ್ತಿದ್ದು, ಭಾರತದಲ್ಲಿ ೧.೫ ಮಿಲಿಯನ್ ಜನ ಉಸಿರಾಟದ ತೊಂದರೆಯಿಂದ ಸಾಯುತ್ತಿದ್ದಾರೆ. ಹೀಗಾಗಿ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಮುರ ಗೌಡ ಸಮುದಾಯ ಭವನದ ಸಂಚಾಲಕ ನಾರಾಯಣ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಬಕ ಗ್ರಾ.ಪಂ.ಅಧ್ಯಕ್ಷೆ ಪ್ರೀತಾ, ಕಬಕ ಒಕ್ಕೂಟದ ಉಪಾಧ್ಯಕ್ಷ ಮೋಹನ ಉಪಸ್ಥಿತರಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪುತ್ತೂರು ಯೋಜನಾಧಿಕಾರಿ ಜನಾರ್ದನ ಎಸ್. ಸ್ವಾಗತಿಸಿದರು. ಮೇಲ್ವಿಚಾರಕಿ ಪಾವನಾ ವಂದಿಸಿದರು. ಕೃಷಿ ಮೇಲ್ವಿಚಾರಕ ಉಮೇಶ್ ಬಿ. ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.