ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳಲ್ಲಿ ಹೋಲಿ ರಿಡೀಮರ್ ಶಾಲೆಯ ಸಾಧನೆ

0

ಬೆಳ್ತಂಗಡಿ:  ವಲಯ ಮಟ್ಟದ 16 ರ ವಯೋಮಾನದ ವಿದ್ಯಾರ್ಥಿಗಳಿಗೆ ಅ 28 ರಂದು ಉಜಿರೆ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆಯು ನಡೆಯಿತು.

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿ ಸಾಧನೆಯನ್ನು ಮೆರೆದಿದ್ದಾರೆ.

ಆಲ್ಸ್ಟನ್ ಡಿಸಿಲ್ವ ( 7ನೇ) 600ಮೀ ಓಟದಲ್ಲಿ ಪ್ರಥಮ ಸ್ಥಾನ, 400ಮೀ ಓಟದಲ್ಲಿ ಪ್ರಥಮ ಸ್ಥಾನ, 200ಮೀ ಓಟದಲ್ಲಿ ದ್ವಿತೀಯ ಸ್ಥಾನ, ಸಿಂಚನ ಶೆಟ್ಟಿ (7ನೇ) ಗುಂಡೆಸೆತ ಪ್ರಥಮ ಸ್ಥಾನ ಮತ್ತು ಪ್ರಜ್ಞೇಶ್ (8ನೇ) ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, 600ಮೀ ಓಟದಲ್ಲಿ ತೃತೀಯ ಸ್ಥಾನ, ಕರಣ್ (8ನೇ) ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಲೆವಿನ್ ಡಿಸೋಜ 400ಮೀ ಓಟದಲ್ಲಿ ಪ್ರಥಮ ಸ್ಥಾನ, ದೀಕ್ಷಿತಾ (8ನೇ) 200ಮೀ ಓಟದಲ್ಲಿ ಪ್ರಥಮ ಸ್ಥಾನ, 400ಮೀ ಓಟದಲ್ಲಿ ಪ್ರಥಮ ಸ್ಥಾನ, 100ಮೀ ಓಟದಲ್ಲಿ ದ್ವಿತೀಯ ಸ್ಥಾನ, ವೈಷ್ಣವಿ (8ನೇ) 600ಮೀ ಓಟದಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ರಿಲೇಯಲ್ಲಿ ಶರಣ್ಯ (8ನೇ), ದೀಕ್ಷಿತ (8ನೇ), ಸಾನ್ವಿ (8ನೇ), ವೈಷ್ಣವಿ(8ನೇ) ದ್ವಿತೀಯ ಸ್ಥಾನ ಹಾಗೂ ಬಾಲಕರ ರಿಲೇಯಲ್ಲಿ ಆಶಿಶ್ (8ನೇ) ,ಪ್ರಜ್ಞೇಶ್ (8ನೇ), ಲೆವಿನ್ ಡಿಸೋಜ(8ನೇ), ಮಹಮ್ಮದ್ ಅವೀಝ್ (8ನೇ) ಪ್ರಥಮ ಸ್ಥಾನ, ಮಹಮ್ಮದ್ ಸಾಬಿತ್ (7ನೇ) ಆಲ್ಸ್ಟನ್ (7ನೇ), ಮಹಮ್ಮದ್ ಮುಗಾದ್ದಮ್ (7ನೇ), ಶ್ರೇಯಸ್ (7ನೇ) ತೃತೀಯ ಸ್ಥಾನ ಪಡೆದಿರುತ್ತಾರೆ. ದೀಕ್ಷಿತಾ(7ನೇ) ಮತ್ತು ಆಲ್ಸ್ಟನ್ ಡಿಸಿಲ್ವ (7ನೇ) ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶರತ್ ಪಿಂಟೋ ತರಬೇತಿ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here