ಮುಂಡಾಜೆ ಕಾಲೇಜಿನಲ್ಲಿ ದೀಪಾವಳಿ ಆಚರಣೆ

0

 

ಮುಂಡಾಜೆ: ಮುಂಡಾಜೆ ಪದವಿ ಪೂರ್ವ ವಿದ್ಯಾಲಯ ಮಂಡಾಜೆ ಇಲ್ಲಿ ಅ. 28  ರಂದು ದೀಪಾವಳಿ ಹಬ್ಬದ ಆಚರಣೆ ಸಂಭ್ರಮದಿಂದ ನೆರವೇರಿತು.

ಕಾರ್ಯಕ್ರಮವನ್ನು ವಿವೇಕಾನಂದ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ  ವಿನಯ ಚಂದ್ರ ಇವರು ನೆರವೇರಿಸಿದರು. ಅಖಂಡ ಭಾರತದ ಭೂಪಟಕ್ಕೆ ಹಣತೆ ಹಚ್ಚುವ ಮೂಲಕ ಕೋಶಾಧಿಕಾರಿಯಾದ ಡಾ. ರವಿ . ಎಂ .ಎನ್ .ಇವರು ನೆರೆದ ಎಲ್ಲರಿಗೂ ದೀಪಾವಳಿಯ ಶುಭ ಹಾರೈಕೆ ಸಲ್ಲಿಸಿದರು.

ಶಿಕ್ಷಣ ಸಂಸ್ಥೆಗಳ ಪೂರ್ವ ಅಧ್ಯಕ್ಷರಾಗಿದ್ದ ಶ್ರೀನಿವಾಸ ರಾವ್ ಕಲ್ಮಂಜ ಹಾಗೂ ಶ್ರೀ ದುರ್ಗಾ ಇಂಡಸ್ಟ್ರೀಸ್ ಇದರ ಮಾಲಕರಾದ ಉಮೇಶ್ ಶೆಟ್ಟಿ ಉಜಿರೆ ಇವರು ಕುಣಿತ ಭಜನೆಗೆ ದೀಪ ಪ್ರಜ್ವಲನೆಯನ್ನು ನೆರವೇರಿಸಿ ಕೊಟ್ಟರು.

ಗಣ್ಯರಾದ ಅನಂತ ಭಟ್ ಮಚ್ಚಿ ಮಲೆ, ಶಿಕ್ಷಣ ಸಂಸ್ಥೆಯ ಸದಸ್ಯರಾದ ಶ್ರೀ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ ,ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿರುವ  ಸುಮಾ, ಚೆನ್ನಕೇಶವ ಅರಸ ಮಜಲು, ಚಂದ್ರಾವತಿ ನಾರಾಯಣಗೌಡ ಪಂಚಶ್ರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿರುವ ಶ್ರೀಯುತ ಸತೀಶ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಶ್ರೀ ವೆಂಕಟೇಶ್ ಭಟ್ ಕಜೆ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗೋ ಪೂಜೆ, ಧಾನ್ಯಲಕ್ಷ್ಮಿ ಪೂಜೆ, ಧನಲಕ್ಷ್ಮಿ ಪೂಜೆ , ಕುಣಿತ ಭಜನೆ ಇವುಗಳನ್ನು ಪ್ರಾಂಶುಪಾಲರದಂತಹ ಶ್ರೀಮತಿ ಜಾಲಿ ಡಿಸೋಜ ಇವರ ನೇತೃತ್ವದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ ನೆರವೇರಿಸಿದರು. ಕಾಲೇಜನ್ನು ಗೂಡು ದೀಪ , ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ವಿದ್ಯಾರ್ಥಿಗಳು ಅಲಂಕರಿಸಿ ಸಂಭ್ರಮಿಸಿದರು. ಕೊನೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.

ಊರಿನ ಇತರ ವಿದ್ಯಾ ಅಭಿಮಾನಿಗಳು ಹಾಗೂ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಜೊತೆಗೂಡಿದರು.

LEAVE A REPLY

Please enter your comment!
Please enter your name here