ಹೀರೋ ಅನಂತ ಮೋಟಾರ್ಸ್ ನಲ್ಲಿ ಆಯುಧ- ವಾಹನ ಮತ್ತು ಧನಲಕ್ಷ್ಮೀ ಪೂಜೆ

0

ಬೆಳ್ತಂಗಡಿ: ಹೀರೋ ಕಂಪೆನಿಯ ಅಧಿಕೃತ ಮಾರಾಟ ಮತ್ತು ಸೇವಾ ಸಂಸ್ಥೆ ಉಜಿರೆಯ ಹೀರೋ ಅನಂತ ಮೋಟಾರ್ಸ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯುಧ ಪೂಜೆ, ವಾಹನ ಪೂಜೆ ಮತ್ತು ಧನಲಕ್ಷ್ಮೀ ಪೂಜೆಯು ಭಕ್ತಿ ಶ್ರದ್ಧೆಯಿಂದ ಅ. 26 ರಂದು ನಡೆಯಿತು.

ಎರ್ನೋಡಿ ಸೇತುವೆಯ ಬಳಿ ಇರುವ ಅತ್ರಿ ಕಟ್ಟಡದಲ್ಲಿರುವ ಶೋರೂಮ್, ಮೆಕ್ಯಾನಿಕಲ್ ವಿಭಾಗ, ವಾಯು ಮಾಲಿನ್ಯ ತಪಾಸಣಾ ಕೇಂದ್ರ, ನೇಷನಲ್ ಇನ್ಶ್ಯುರೆನ್ಸ್ ಪೋರ್ಟಲ್ ಆಫೀಸ್, ಹಳೆ ಮೋಟಾರು ವಾಹನಗಳ ಮಾರಾಟ ವಿಭಾಗ, ಬೆಡ್ ಮಾರ್ಟ್, ಚಿಕಿತ್ಸಾ ಮೆಡಿಕಲ್, ವಿಎಸ್‌ಸಿಎಸ್ ಶಾಲಿಯಾನ ಮತ್ತು ಈವೆಂಟ್ ಮೆನೇಜ್‌ಮೆಂಟ್ ಸಂಸ್ಥೆ ಹಾಗೂ‌ ಸಂಸ್ಥೆಯ ತೋಟ -ಗದ್ದೆಗಳಿಗೆ ಹಾಗೂ ದ್ವಿಚಕ್ರ ವಾಹನಗಳ ಬಿಡಿಭಾಗಗಳ ಮಾರಾಟ ವಿಭಾಗಗಳಲ್ಲಿ ಪೂಜಾ ವಿಧಿಗಳು ಪ್ರತ್ಯೇಕವಾಗಿ ನಡೆದವು.

ಗಣೇಶ್ ತಂತ್ರಿ ಅವರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಸಂಸ್ಥೆಯ ಆಡಳಿತ ನಿರ್ದೇಶಕಿ ವೀಣಾ ಅನಂತರಾಮ ಸೋಮಯಾಗಿ, ಅವರ ಮಾತೃಶ್ರೀ ಸುಶೀಲಮ್ಮ, ಸಂಸ್ಥೆಗಳ ಮಾಲಿಕ ವಿಕ್ರಾಂತ್ ಸೋಮಯಾಗಿ, ಪತ್ನಿ ಶಿಲ್ಪಾ, ಪುತ್ರಿ ಬೇಬಿ ಅನ್ವಿ, ಸಂಸ್ಥೆಯ ಅನ್ಯಾನ್ಯಾ ಜವಾಬ್ಧಾರಿಗಳಲ್ಲಿರುವ ನಿರಂಜನ್, ಜಾನ್ಸನ್, ಚಂದ್ರ, ಗಣೇಶ್, ಪ್ರದೀಪ್, ಮೋಕ್ಷಿತ್, ದೀಕ್ಷಿತ್, ಯಶೋಧರ, ನಿಶ್ಮಿತಾ, ದೀಪಿಕಾ, ದಿಲ್ಸನ್, ಪೂಜಾ, ಪವ‌‌ನ್, ಗಾಯತ್ರಿ, ದೀಪಕ್ ಸಿ, ಹಾಗೂ ಇತರರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here