ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ “ಉದ್ಯೋಗ ಮಾರ್ಗದರ್ಶನ” ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ ಭಂಡಾರ ಉದ್ಘಾಟನೆ* ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ತರಬೇತಿ ಕಾರ್ಯಕ್ರಮ ಗಳು ಪೂರಕ: ಹರೀಶ್ ಕಾರಿಂಜ

0

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ನೇತೃತ್ವದಲ್ಲಿ ಕುಲಾಲ ಕುಂಬಾರರ ಯುವ ವೇದಿಕೆ ಇವರ ಸಹಕಾರದಲ್ಲಿ ಕುಲಾಲ ಸಾಂತ್ವನ ನಿಧಿ ಸಮಿತಿಯ ವತಿಯಿಂದ ” ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ ಭಂಡಾರ ” ಉದ್ಘಾಟನೆ ಹಾಗೂ ” ಉದ್ಯೋಗ ಮಾರ್ಗದರ್ಶನ” ತರಬೇತಿ ಕಾರ್ಯಕ್ರಮ ಅ.30ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಿತು.

ತರಬೇತಿ ಕಾರ್ಯಕ್ರಮವನ್ನು ತಾ.ಪಂ ಮಾಜಿ ಸದಸ್ಯೆ ವಸಂತಿ ಮಚ್ಚಿನ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದು ಮಕ್ಕಳು ಉತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾ ಗುತ್ತಿದ್ದಾರೆ ಆದರೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು , ಯಾವ ಕಾಲೇಜು ಉತ್ತಮ ಎಂಬ ಮಾಹಿತಿ ಇರುವುದಿಲ್ಲ ಇದಕ್ಕಾಗಿ ಇಂತಹ ಶಿಬಿರಗಳು ಮಾಗ೯ದಶ೯ಕವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ವಹಿಸಿ, ಕುಲಾಲ,ಕುಂಬಾರ ಸಮಾಜದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಬಗ್ಗೆ ಮಾಹಿತಿ ನೀಡಲು ಈ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡು , ಮುಂದೆ ಈ
ಸಮಾಜವನ್ನು ಮುನ್ನಡೆಸಬೇಕು ಎಂದು ಹೇಳಿದರು.

ಸಂಘ ಅನೇಕ ವಷ೯ಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು , ಕೆಎಎಸ್, ಐಎಎಸ್, ಐಪಿಎಸ್ ಮೊದಲಾದ ಉನ್ನತ ಮಟ್ಟದ ಶಿಕ್ಷಣ ಮಾಡುವವರಿಗೆ ಸಂಘದ ವತಿಯಿಂದ ಮಾಹಿತಿ ನೀಡಲಾಗುವುದು ಎಂದು ಹೇಳಿ, ಸಂಘದ ನೂತನ ಸಭಾ ಭವನಕ್ಕೆ 35 ಸೆಂಟ್ಸ್ ಜಾಗ ಖರೀದಿಸಿದ್ದು, ಭವ್ಯ ಭವನ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸೋಮಯ್ಯ ಮೂಲ್ಯ ಹನೈನಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿ, ಜೀವನದಲ್ಲಿ ಯಾವುದೇ ಆಸೆ , ಆಮಿಷಗಳಿಗೆ ಬಲಿಯಾಗದೆ ಉತ್ತಮ ಸಾಧನೆ ಮಾಡುವಂತೆ ಸಲಹೆ ನೀಡಿದರು.

ನಿವೃತ್ತ ಕಂದಾಯ ನಿರೀಕ್ಷಕ ಹೆಚ್. ಪದ್ಮಕುಮಾರ್ ಅವರು ಮಾತನಾಡಿ, ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮತ್ತು ಹೆತ್ತವರಿಗೆ ಗೌರವ ತರುವ ಕಾಯ೯ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಪುಸ್ತಕ ಭಂಡಾರವನ್ನು ಹರೀಶ್ ಕಾರಿಂಜ ಉದ್ಘಾಟಿಸಿದರು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ಐಎಎಸ್ ಪರೀಕ್ಷೆ ತಯಾರಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ, ವೇಣೂರು ಕಾಲೇಜಿನ ಉಪನ್ಯಾಸಕ ಸಂತೋಷ್ ಉಪಸ್ಥಿತರಿದ್ದರು.

ಸಾಂತ್ವಾನ ನಿಧಿ ಸಮಿತಿ ಸಂಚಾಲಕ ಯತೀಶ್ ಸಿರಿಮಜಲು ಸ್ವಾಗತಿಸಿದರು. ಗುರುವಾಯನಕೆರೆ ಪ್ರೌಢ ಶಾಲಾ ಶಿಕ್ಷಕ ಹಾಗೂ ಕಟ್ಟಡ ಸಮಿತಿ ಕಾರ್ಯದರ್ಶಿ ಜಗನ್ನಾಥ್ ಕಾಯ೯ಕ್ರಮ ನಿರೂಪಿಸಿದರು.

ಅಳದಂಗಡಿ ಶಾಲಾ ಶಿಕ್ಷಕ ನಾಗಭೂಷಣ್ ಕುಲಾಲ್ ವಂದಿಸಿದರು . ಸುಮಾರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here