ಮದ್ದಡ್ಕ ಹೆಲ್ಪ್‌ ಲೈನ್ ಎಂಡ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಚಿತ ಆಭಾ ಕಾರ್ಡ್ ನೋಂದಾವಣಿ ಶಿಬಿರ

0

ಮದ್ದಡ್ಕ: ಮದ್ದಡ್ಕ ಹೆಲ್ಪ್ ಲೈನ್ & ಚಾರಿಟೇಬಲ್  ಫೌಂಡೇಶನ್  ಮತ್ತು ಅನುಗ್ರಹ ಜನ ಸೇವಾ ಕೇಂದ್ರ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಉಚಿತ ಆಭಾ ಕಾರ್ಡ್ ನೋಂದಣಿ ಶಿಬಿರವು ಮದ್ದಡ್ಕದ ನೂರುಲ್ ಹುದಾ ಜುಮಾ ಮಸೀದಿಯ ಸಮುದಾಯ ಭವನದಲ್ಲಿ ಅ.29ರಂದು ಜರುಗಿತು. ಸುಮಾರು “345” ಕ್ಕೂ ಅಧಿಕ ಮಂದಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.

ಈ‌  ಕಾರ್ಯಕ್ರಮವನ್ನು ಮದ್ದಡ್ಕ ಮಸೀದಿಯ ಖತೀಬರಾದ ಹಸನ್ ಮುಬಾರಕ್ ಸಖಾಫೆಯವರು ದುಆ ಆಶಿರ್ವಚನದೊಂದಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಚೇರ್ ಮ್ಯಾನ್ ತಲ್ಹತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫ ಜಿ.ಕೆ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮದ್ದಡ್ಕ ಹೆಲ್ಪ್ ಲೈನ್ ನ ಅಧ್ಯಕ್ಷರಾದ ಸಂಶುದ್ದೀನ್ ಮಾಸ್ಟರ್ ಅಧ್ಯಕ್ಷೀಯ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ನೂರುಲ್ ಹುದಾ ಜುಮಾ ಮಸ್ಜಿದ್ ಮದ್ದಡ್ಕ ಇದರ ಅಧ್ಯಕ್ಷರಾದ ಯುನೂಸ್ ಅಮೀನ್ ನೇರಳಕಟ್ಟೆ,ಕುವೆಟ್ಟು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಸಿರಾಜ್ ಚಿಲಿಂಬಿ,ಅನ್ವಾರುಲ್ ಹಿದಾಯ ಮದರಸ ಪಾದೆ ಅಧ್ಯಕ್ಷರಾದ ಇರ್ಶಾದ್ ಪೋಲಿಸ್,ಮುರ್ಶಿದುಲ್ ಅನಾಮ್ ಮದರಸ ಆಲಂದಿಲದ ಅಧ್ಯಕ್ಷರಾದ ರಮ್ಲಾನ್ ಕೆಲ್ಲಾರ್,ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಜ್ ಮದ್ದಡ್ಕ ಹಾಗೂ ಇನ್ನಿತರ ಗಣ್ಯರು ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮದ್ದಡ್ಕ ಹೆಲ್ಪ್ ಲೈನ್ ನ ಕಾರ್ಯದರ್ಶಿಯಾದ ಸಾದಿಕ್ ಸಾಗರ್ ಸ್ವಾಗತಿಸಿ,ಆರಿಸ್ ಶಾಫೆ ಪಾದೆ ನಿರೂಪಿಸಿ,ಅಲ್ತಾಫ್ ಮದ್ದಡ್ಕ ಧನ್ಯವಾದಗೈದರು.

LEAVE A REPLY

Please enter your comment!
Please enter your name here