HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸರಳ ರೀತಿಯಲ್ಲಿ ದಾಂಪತ್ಯ ಜೀವನದ ವಾರ್ಷಿಕೋತ್ಸವ ಆಚರಿಸಿದ ಎ.ಸಿ.

Puttur_Advt_NewsUnder_1
Puttur_Advt_NewsUnder_1
  • ವಿದ್ಯಾರ್ಥಿನಿಯೊಬ್ಬರ ಮನೆಗೆ ಹೋಗಿ ಗಿಡ ನೆಟ್ಟು ಪ್ರೋತ್ಸಾಹಿಸಿದ ಕೃಷ್ಣಮೂರ್ತಿ ದಂಪತಿ

ಪುತ್ತೂರು: ದಾಂಪತ್ಯ ಜೀವನದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಅಧಿಕಾರಿಯೊಬ್ಬರು ತನ್ನ ವಿವಾಹದ ದಿನವನ್ನು ಗಿಡ ನೆಡುವ ಮೂಲಕ ಸರಳ ರೀತಿಯಲ್ಲಿ ಆಚರಣೆ ಮಾಡಿ ಗಮನ ಸೆಳೆದಿದ್ದಾರೆ.

ದಾಂಪತ್ಯ ಜೀವನದ ವಾರ್ಷಿಕೋತ್ಸವದಲ್ಲಿ ಅನ್ನದಾನ, ದೈವ ದೇವಸ್ಥಾನಕ್ಕೆ ಹೋಗುವುದು, ಮನೆಯಲ್ಲಿ ವಿಶೇಷ ಪಾಯಸದ ಊಟ ಇದ್ದೇ ಇರುತ್ತದೆ. ವೈವಾಹಿಕ ವಾರ್ಷಿಕೋತ್ಸವ ಆಚರಣೆ ಇಷ್ಟಕ್ಕೇ ಸೀಮಿತವಾಗದೆ ಒಂದಷ್ಟು ಪರಿಸರ ಜಾಗೃತಿಯೂ ಮುಖ್ಯ ಎಂದು ಪುತ್ತೂರಿನ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ, ಜಯ ಕೃಷ್ಣಮೂರ್ತಿ ತಮ್ಮ ದಾಂಪತ್ಯ ಜೀವನದ 13ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಿಂದ ಆಚರಿಸುವ ಬದಲಾಗಿ ಕೋರಿಕೆಯಂತೆ ವಿದ್ಯಾರ್ಥಿಯೊಬ್ಬರ ಮನೆಗೆ ದಂಪತಿ ಹೋಗಿ ಮನೆಯಂಗಳದಲ್ಲಿ ಗಿಡ ನೆಟ್ಟು ಸರಳ ರೀತಿಯಲ್ಲಿ ದಾಂಪತ್ಯ ಜೀವನದ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಹಲವಾರು ಕಾರಣಗಳಿಂದ ಮಲೆನಾಡಿನ ಸುಂದರ ಪರಿಸರದಲ್ಲಿ ಸಸ್ಯ ಪ್ರಭೇದಗಳು ವಿರಳವಾಗುತ್ತಿವೆ. ಹೂವಿನ ಸಸಿಗಳು ಕ್ಷೀಣಿಸುತ್ತಿರುವುದರಿಂದ ಜೇನಿನ ಸಂತತಿ ಕಡಿಮೆ ಆಗುತ್ತಿದೆ. ಸಸ್ಯ ಸಂಪತ್ತೂ ವೃದ್ಧಿಸುತ್ತಿಲ್ಲ. ಇಂತಹ ಸಂದರ್ಭ ಜನ್ಮದಿನ, ವಿವಾಹ ವಾರ್ಷಿಕೋತ್ಸವ ನೆಪದಲ್ಲಿ ಈ ರೀತಿ ಪರಿಸರ ಪ್ರೇಮ-ಜಾಗೃತಿ ಮೂಡಿಸುವುದು. ಪ್ರಸ್ತುತ ದಿನಗಳಲ್ಲಿ ಉಪಯುಕ್ತ ಮತ್ತು ಅಗತ್ಯವೂ ಆಗಿದೆ.

ಮರ ಉಳಿಸಲು ವಿದ್ಯಾರ್ಥಿಗಳ ಮನವಿಗೆ ಗಿಡ ವಿತರಣೆ:
ಕಳೆದ ವರ್ಷ ಪುತ್ತೂರು, ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಮರಗಳ ತೆರವು ನಡೆದ ವೇಳೆ ಕೆಲ ವಿದ್ಯಾರ್ಥಿನಿಯರು ಮರಗಳನ್ನು ತೆರವು ಮಾಡದಂತೆ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ರಸ್ತೆ ಅಗಲೀಕರಣ ವೇಳೆ ಮರ ತೆಗೆಯುವುದು ಅನಿವಾರ್ಯ ಆದ್ದರಿಂದ ವಿದ್ಯಾರ್ಥಿನಿಯರಿಗೆ ಉತ್ತಮ ಜಾತಿಯ 45 ಹಣ್ಣಿನ ಗಿಡಗಳನ್ನು ಕೊಟ್ಟ ಸಹಾಯಕ ಕಮೀಷನರ್ ವಿದ್ಯಾರ್ಥಿಗಳ ಕಾಳಜಿಗೆ ಖುಷಿ ಪಟ್ಟಿದ್ದರು. ಈ ವಿದ್ಯಾರ್ಥಿಗಳ ಪೈಕಿ ಹಾರಾಡಿಯ ನೇಹಾ ಎಂಬ ವಿದ್ಯಾರ್ಥಿನಿ ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಗಿಡ ನೆಟ್ಟು ಪರಿಸರ ದಿನ ಆಚರಿಸಬೇಕೆಂದು ಎ.ಸಿ.ಯವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಸಹಾಯಕ ಕಮಿಷನರ್ ಹೆಚ್.ಕೆ.ಕೃಷ್ಣಮೂರ್ತಿ ದಂಪತಿ ಜೂ.5ರಂದು ಪರಿಸರ ದಿನದಂದು ವಿವಾಹ ವಾರ್ಷಿಕೋತ್ಸವವೂ ಆಗಿದ್ದರಿಂದ ವಿದ್ಯಾರ್ಥಿನಿ ನೇಹಾ ಅವರ ಮನೆಗೆ ಹೋಗಿ ಗಿಡ ನೆಟ್ಟು ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಿ ಖುಷಿ ಪಟ್ಟರು.

ನಾನು ಆವತ್ತು ಪ್ರತಿ ವಿದ್ಯಾರ್ಥಿನಿಯರಿಗೆ ತಲಾ 5 ರಂತೆ ಉತ್ತಮ ಜಾತಿಯ ಹಣ್ಣಿನ ಗಿಡಗಳನ್ನು ಕೊಟ್ಟಿದ್ದೆ. ನಾನು ಕೊಟ್ಟ ಗಿಡಗಳನ್ನು ಉತ್ತಮವಾಗಿ ಬೆಳೆಸಿದ್ದಾರೆ. ಇಂತಹ ಕಾಳಜಿ ಎಲ್ಲರಿಗೂ ಬರಬೇಕು –ಹೆಚ್.ಕೆ.ಕೃಷ್ಣಮೂರ್ತಿ , ಸಹಾಯಕ ಕಮಿಷನರ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.