HomePage_Banner
HomePage_Banner
HomePage_Banner

ಬಲ್ನಾಡಿನ ದರ್ಖಾಸು ಮನೆಯಲ್ಲಿ ಕಾರಣಿಕದ ಕೊರಗಜ್ಜನ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
  • ಇದು ನಂಬಿದವರಿಗೆ ಇಂಬು ಕೊಡುವ ದೈವದ ಪರಂಪರೆಯ ಸಾನಿಧ್ಯ

ಕೊರಗಜ್ಜನ ಸಾನಿಧ್ಯ ವೃದ್ದಿಗೆ ಬೇಕು ಗ್ರಾಮದ ಭಕ್ತರ ಸಹಕಾರ:
ದೈವತ್ವ ಸ್ವರೂಪಿ ಅಜ್ಜನ ಸಾನಿಧ್ಯ ವೃದ್ದಿಗೆ ಭಕ್ತ ಜನರ ಸಹಕಾರ ಅಗತ್ಯ. ನಂಬಿಕೊಂಡು ಬಂದಿರುವ ಸೀತು ನಲಿಕೆ ಸಂಸಾರ ಬಡತನದಿಂದ ಜೀವನ ಸಾಗಿಸುತ್ತಿದ್ದು ದೈವದ ಸೇವೆಯನ್ನು ಮಾಡುತ್ತಾ ಬರುತ್ತಿದ್ದು ಇದರ ಜೀಣೋದ್ದಾರಕ್ಕೆ ಭಕ್ತ ಜನರ ಸಹಕಾರವಿದ್ದರೆ ಸಾನಿಧ್ಯ ಅಭಿವೃದ್ದಿ ಸಾಧ್ಯ. ಇದುವರೆಗೂ ಕೊರಗಜ್ಜ ಕೈಬಿಡಲಿಲ್ಲ. ಊರಿನ ಭಕ್ತರ ಸಹಕಾರದಿಂದ ಸೇವೆಯನ್ನು ಮಾಡುತ್ತಾ ಬರುತ್ತಿದ್ದು. ಇನ್ನು ಮುಂದಕ್ಕೆ ಅಭಿವೃದ್ದಿ ಕಾರ್ಯದಲ್ಲಿಯೂ ತುಂಬು ಸಹಕಾರ ನೀಡಬೇಕು, ನೀಡುತ್ತಾರೆ ಎಂಬ ನಂಬಿಕೆ ನಮಗಿದೆ ಎನ್ನತ್ತಾರೆ ಸೀತು ನಲಿಕೆಯವರ ಮಗ ಬಾಬು ನಲಿಕೆ.

ಬಲ್ನಾಡಿನ ಯುವಕರ ಒಗ್ಗಟ್ಟು ಮೆಚ್ಚತಕ್ಕದ್ದು…
ಬಲ್ನಾಡಿನಲ್ಲಿ ಯಾವುದೇ ಮನೆಯಲ್ಲಿ ಕಾರ್ಯಕ್ರಮವಾಗಲಿ, ಹಬ್ಬವಾಗಲಿ ಜಾತಿ ಭೇದವಿಲ್ಲದೇ ಒಗ್ಗಟ್ಟಾಗಿ ಸಹಕಾರ ನೀಡುವವರು ಬಲ್ನಾಡಿನ ವಿನಾಯಕ ಫ್ರೆಂಡ್ಸ್ ಗ್ರೂಪ್. ಬಲ್ನಾಡಿನ ಈ ಯುವಕರ ಗುಂಪೊಂದು ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ಒಗ್ಗಟ್ಟಾಗಿ ಸಹಕಾರ ನೀಡುವವರು. ಈ ಫ್ರೆಂಡ್ಸ್ ಗ್ರೂಪಿನ ಸಹಕಾರ ಕೊರಗಜ್ಜನ ನೇಮೋತ್ಸವದಲ್ಲಿಯೂ ಎಲ್ಲರ ಮನಸೆಳೆಯಿತು. ಇವರ ಕೆಲಸದಲ್ಲಿ ನಿಷ್ಕಲ್ಮಷ ಮನಸ್ಸಿದೆ. ಕೊರಗಜ್ಜನ ಸಾನಿಧ್ಯ ವೃದ್ದಿಗೂ ಇವರ ಸಹಕಾರ ಬೇಕು ಎನ್ನುತ್ತಾರೆ. ಇಂತಹ ಸಹಕಾರ ಎಲ್ಲೆಡೆ, ಎಲ್ಲರಲ್ಲಿಯೂ ಆರಂಭವಾದರೆ ಸಮಾಜ ಕಲ್ಯಾಣ ಸಾಧ್ಯ ಎನ್ನತ್ತಾರೆ ಬಲ್ನಾಡಿನ ಗ್ರಾಮಸ್ಥರೊಬ್ಬರು.

ಪುತ್ತೂರು: ಬಲ್ನಾಡು ಗ್ರಾಮದ ದರ್ಖಾಸು ಜನತಾ ಕಾಲೋನಿ ಹತ್ತಿರ ಸೀತು ನಲಿಕೆಯವರ ಮನೆಯಲ್ಲಿ ತಾವು ನಂಬಿಕೊಂಡು ಬಂದಿರುವ ಕಾರಣಿಕದ ಕೊರಗಜ್ಜನ ನೇಮೋತ್ಸವ ಮೇ 4 ರಂದು ಬಹಳ ವಿಜೃಂಭಣೆಯಿಂದ ಜರುಗಿತು. ರಾತ್ರಿ 8ಕ್ಕೆ ಭಂಡಾರ ತೆಗೆದು ದೈವದ ಪಾತ್ರಿಗೆ ಎಣ್ಣೆ ಬೂಳ್ಯ ಕೊಟ್ಟ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಕೊರಗಜ್ಜನ ನೇಮೋತ್ಸವ ನಡೆದು ಗ್ರಾಮಸ್ಥರು, ಊರಿನವರು ಗಂಧಪ್ರಸಾದ ಸ್ವೀಕರಿಸಿ ಸಂತೃಪ್ತಿಗೊಂಡರು. ಮೇ 5ರಂದು ಕೊರಗಜ್ಜನಿಗೆ ಅಗೆಲು ಸೇವೆ ನಡೆಯಿತು.

ಈ ಸಂದರ್ಭ ದೈವದ ಮಧ್ಯಸ್ಥ ಶಶಾಂಕ ನೆಲ್ಲಿತ್ತಾಯ, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಸದಸ್ಯರಾದ ಆನಂದ ಸುವರ್ಣ, ವಾಸುದೇವ ನಾಯ್ಕ ಪದವು ಹಾಗೂ ಜಿನ್ನಪ್ಪ ಗೌಡ ಕಾಂತಿಲ, ನವೀನ್ ಕರ್ಕೆರ ರಾಂಬೈಲು, ಪ್ರಕಾಶ್ ಕೆಲ್ಲಾಡಿ, ಗುಡ್ಡಪ್ಪ ರೈ ಬಳಜ್ಜ, ನಾರಾಯಣ ಗೌಡ ಓಟೆ, ಜಯಂತ ಗೌಡ ಕರ್ಕುಂಜ, ಆನಂದ ಮೂಲ್ಯ, ಗೋಪಾಲ ಸುವರ್ಣ, ಶ್ಯಾಮಣ್ಣ ನಾಯಕ್ ಅಂಬಟೆಮೂಲೆ, ಉಮೇಶ್ ಪೂಜಾರಿ, ಗೋಪಾಲ ನಾಯಕ್, ಸುಬ್ರಾಯ ಮಡಿವಾಳ, ಧರ್ಮೆಂದ್ರ ಮಡಿವಾಳ, ಸುರೇಶ ಪೂಜಾರಿ ಬಲಿಪಗದ್ದೆ, ರುಕ್ಮಯ ಗೌಡ ಬ್ರಹ್ಮರಕೋಡಿ, ಭರತ್ ಚನಿಲ, ಮಂಜಪ್ಪ ಗೌಡ ಬ್ರಹ್ಮರಕೋಡಿ, ಚಂದ್ರಹಾಸ ಗೌಡ ಕಲ್ಲಾಜೆ, ಜಗದೀಶ ಗೌಡ ಕಲ್ಲಾಜೆ, ದಯಾನಂದ ಸೇರ, ಜಿನ್ನಪ್ಪ ಪೂಜಾರಿ ಬಲ್ನಾಡು ಹಾಗೂ ಬಲ್ನಾಡು ಜನತಾ ಕಾಲೋನಿ ನಿವಾಸಿಗಳು, ಗ್ರಾಮದ ಭಕ್ತರು ಅನೇಕ ಮಂದಿ ಉಪಸ್ಥಿತರಿದ್ದರು. ಭಕ್ತರು ಉಪಸ್ಥಿತರಿದ್ದರು.

ಅಚ್ಚುಕಟ್ಟಾದ ವ್ಯವಸ್ಥೆ:
ಊರ, ಗ್ರಾಮಸ್ಥರ ಸಹಕಾರದಿಂದ ನೇಮದ ದಿನ ಎಲ್ಲವೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆಯನ್ನು ಬಾಬು ಮೂಲ್ಯ ಬಲ್ನಾಡು, ಉಮೇಶ್ ಪೂಜಾರಿ ಬಲ್ನಾಡು ಸಹಾಯಾರ್ಥವಾಗಿ ನಡೆಯಿತು. ಅಡುಗೆಯಲ್ಲಿ ದೇವಪ್ಪ ಗೌಡ ಮುದಲಾಜೆ ಮತ್ತು ಬಳಗ, ಹೇಮಚಂದ್ರ ಬಲ್ನಾಡು ಮತ್ತು ಬಳಗ ಇವರ ಸಹಕಾರವೂ
ಜೊತೆಗಿತ್ತು.

ಕೊರಗಜ್ಜನ ಕಟ್ಟೆಗೆ 40ವರ್ಷಗಳ ಪರಂಪರೆಯಿದೆ:
ಸೀತು ನಲಿಕೆಯವರು ನಂಬಿಕೊಂಡು ಬಂದಿರುವ ಕಾರಣಿಕ ಕೊರಗಜ್ಜನ ಕಟ್ಟೆಗೆ ಸುಮಾರು ೪೦ ವರ್ಷಗಳ ಪರಂಪರೆಯಿದೆ. ದೈವದ ಸೇವೆಯನ್ನು ಸೀತು ನಲಿಕೆ ಸಂಸಾರ ನಡೆಸಿಕೊಂಡು ಬರುತ್ತಿದ್ದಾರೆ. ಹಿಂದಿನ ಸಂಪ್ರದಾಯದ ಶೈಲಿಯಲ್ಲಿಯೇ ಇರುವ ಕೊರಗಜ್ಜನ ಕಟ್ಟೆಯು ಕಾಸರಕನ ಮರದಿಂದ ಆವೃತವಾಗಿದ್ದು ದೈವತ್ವ ಸ್ವರೂಪವೇ ಅಡಕವಾಗಿದೆ. ಈಗಾಗಲೇ ಸಾನಿಧ್ಯದಲ್ಲೇ ಪಕ್ಕ ನಂದಿಯಾಕಾರದ ಮರದ ಮೂರ್ತಿಯೊಂದು ಪತ್ತೆಯಾಗಿದೆ.

ನಂಬಿದವರಿಗೆ ಇಂಬು ಕೊಡುವ ಕೊರಗಜ್ಜ.
ನೆಲೆಯಾದ ಮಣ್ಣನ್ನು ಉಳಿಸಿ, ನಂಬಿದವರನ್ನು ಇದುವರೆಗೂ ಕೈಬಿಡದ ಕಾರಣಿಕ ದೈವವಾಗಿ ನೆಲೆಗೊಂಡಿರುವ ಕೊರಗಜ್ಜ ಬಲ್ನಾಡಿನ ದರ್ಖಾಸಿನಲ್ಲಿ ನೆಲೆಗೊಂಡಿದ್ದು ಭಕ್ತರು ನೀಡುತ್ತಿರುವ ಸೇವೆಯನ್ನು ಪಡೆದು ಸಂತೃಪ್ತಗೊಂಡ ದೈವವಾಗಿ ಪ್ರಖ್ಯಾತಿ. ಮನೆಮನದಲ್ಲಿ ಕಷ್ಟಬಂದರೆ ದೂರಮಾಡಿ ಕಾಪಾಡುವ ಅಜ್ಜನಾಗಿ ಭಕ್ತಿಯನ್ನು ಉಕ್ಕೇರಿಸಿ ದೈವತ್ವದ ಅಂಶವನ್ನು ಉಳಿಸಿಕೊಂಡು ಬಂದಿರುವ ಈ ದೈವ ಶಾಂತಿಪರಿಪಾಲನೆಯನ್ನು ಮಾಡುತ್ತಿರುವುದು ವಾಸ್ತವ. ಬಡತನ ನಮ್ಮನ್ನು ಕಾಡುತ್ತಿದ್ದರು ಮನಸ್ಸಿಗೆ ನೆಮ್ಮದಿ ನೀಡುತ್ತಿರುವ ದೈವ ಕೊರಗಜ್ಜ ಎನ್ನುತ್ತಾರೆ ಬಲ್ನಾಡಿನ ಸೀತು ನಲಿಕೆ ಮನೆಯವರು. ಬಾಬು ನಲಿಕೆ, ಚಂದು ನಲಿಕೆ, ವೆಂಕಪ್ಪ ನಲಿಕೆ, ಚೆನ್ನ ನಲಿಕೆ, ಚಿತ್ತು ನಲಿಕೆಯವರು ಸೇರಿಕೊಂಡು ದೈವದ ಸೇವೆಯನ್ನು ಗ್ರಾಮಸ್ಥರ, ಊರ,ಪರವೂರ ಭಕ್ತರ ಮೂಲಕ ನಡೆಸಿಕೊಂಡು ಬರುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.