Home_Page_Advt
Home_Page_Advt
Home_Page_Advt

ಪರಿಸರ ಸಂರಕ್ಷಣೆಗಾಗಿ ಸಿದ್ಧವಾಗಿದೆ 5ಸಾವಿರಕ್ಕೂ ಮಿಕ್ಕಿ ಗಿಡಗಳು

Puttur_Advt_NewsUnder_1
Puttur_Advt_NewsUnder_1
  • ಹಾರಾಡಿ ಶಾಲೆಯಲ್ಲಿ ಗಿಡ ನೆಟ್ಟು ಚಾಲನೆ ನೀಡಿದ ಸಾಮಾಜಿಕ ವಲಯಾರಣ್ಯಾಧಿಕಾರಿ

ಪುತ್ತೂರು: ಶಾಲೆಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನದ ಈ ವರ್ಷದ ಧ್ಯೇಯ ವಾಕ್ಯ ವಾಯು ಮಾಲಿನ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯದಿಂದ ತಾಲೂಕಿನ 184 ಶಾಲೆಗಳಿಗೆ ವಿವಿಧ ಜಾತಿಯ ಹಣ್ಣುಗಳ ಗಿಡಗಳನ್ನು ನೀಡುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜೂ.6ರಂದು ಇಲ್ಲಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.

ಸಾಮಾಜಿಕ ವಲಯಾರಣ್ಯಾಧಿಕಾರಿ ವಿದ್ಯಾ ರಾಣಿ ಅವರು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪರಿಸರದ ಮೇಲೆ ಪ್ರಸ್ತುತ ದಿನಗಳಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಿದೆ. ಉಸಿರಾಟದ ಸಮಸ್ಯೆಯಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಜಾಗತಿಕ ವರ್ಷದಲ್ಲಿ ವಿಶ್ವಸಂಸ್ಥೆ ವಾಯು ಮಾಲಿನ್ಯ ಹೋಗಲಾಡಿಸುವ ಧ್ಯೇಯ ವಾಕ್ಯದೊಂದಿಗೆ ಪರಿಸರ ದಿನ ಆಚರಿಸುತ್ತಿದೆ. ನಾವು ಆರೋಗ್ಯದಿಂದ ಇರಬೇಕಾದರೆ ಪರಿಸರ ಆರೋಗ್ಯದಿಂದ ಇರಬೇಕು. ಆದ್ದರಿಂದ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿ ಎಂದು ಕರೆ ನೀಡಿದರು.

ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಾಲೆಯ ಮುಖ್ಯಗುರು ಮುದರ ಎಸ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರತಿಮಾ ಯು ರೈ, ಸಿ.ಆರ್.ಪಿ. ನಾರಾಯಣ ಪುಣಚ, ಶಿಕ್ಷಕರಾದ ಪ್ರಶಾಂತ್ ಅನಂತಾಡಿ, ರಾಮಣ್ಣ ರೈ ಸೇರಿದಂತೆ ಎಸ್.ಡಿ.ಎಮ್.ಸಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.